ಮುಂಬೈ:ಬಾಲಿವುಡ್​ ನಟ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಮದುವೆಯಾಗಿ ಇಂದಿಗೆ 50 ವರ್ಷಗಳು ಸಂದಿದ್ದು, ಈ ಹಿರಿಯ ಜೋಡಿಯು ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ದಿವಾಳಿಯಾಗಿದ್ದು ದೇಶವೂ ಅಲ್ಲ, ರಾಜ್ಯವೂ ಅಲ್ಲ ಬಿಜೆಪಿಗರ ಬೌದ್ಧಿಕತೆ!: ರಾಜ್ಯ ಕಾಂಗ್ರೆಸ್
ಈ ಹಿನ್ನೆಲೆಯಲ್ಲಿ ಅಮಿತಾಭ್ ತಮ್ಮ ವಿವಾಹ ವಾರ್ಷಿಕೋತ್ಸವದ ಕುರಿತು ನಿನ್ನೆ ರಾತ್ರಿ ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ. ಜೂನ್ 3 ಕೆಲವೇ ಹೊತ್ತಿನಲ್ಲಿ ಬರಲಿದ್ದು, ತದನಂತರ 50 ವರ್ಷಗಳಾಗಲಿವೆ. ಈಗಾಗಲೇ ಬಂದಿರುವ ಮತ್ತು ಮುಂದೆ ಬರಲಿರುವ ಪ್ರೀತಿ, ಗೌರವ, ಹಾರೈಕೆಗಳಿಗೆ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.
ಅಮಿತಾಭ್​ ಮತ್ತು ಜಯಾಗೆ ಶುಭ ಹಾರೈಸಿದ ಶ್ವೇತಾ ಬಚ್ಚನ್:ಇನ್ನು, ವಿವಾಹ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಅವರ ಪುತ್ರಿ ಶ್ವೇತಾ ಬಚ್ಚನ್ ಇನ್​ಸ್ಟಾಗ್ರಾಂನಲ್ಲಿ ಅಮಿತಾಭ್​ ಹಾಗೂ ಜಯಾ ಬಚ್ಚನ್​ ಫೋಟೋ ಹಂಚಿಕೊಂಡು, ಸುವರ್ಣಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ತಂದೆ-ತಾಯಿಗೆ 50ನೇ ವಾರ್ಷಿಕೋತ್ಸವದ ಶುಭಾಶಯಗಳು. ಒಮ್ಮೆ ನಾನು ನನ್ನ ತಾಯಿಯನ್ನು ಸುದೀರ್ಘ ದಾಂಪತ್ಯದ ರಹಸ್ಯವೇನು? ಎಂದು ಕೇಳಿದ್ದೆ. ಆಗ ನನ್ನ ತಾಯಿ ಪ್ರೀತಿ ಎಂದು ಹೇಳಿದ್ದರೆ, ತಂದೆ ನನ್ನ ಹೆಂಡತಿ ಯಾವಾಗಲೂ ಸರಿ ಎಂದು ಹೇಳಿದ್ದರು ಶುಭಾಶಯಗಳನ್ನು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
