ವಾರಾಣಸಿ: ‘ಆಸೆಯೇ ದುಃಖಕ್ಕೆ ಮೂಲ’ ಎಂದಾಕ್ಷಣ ಎಲ್ಲರ ಮನಸ್ಸಲ್ಲೂ ಒಮ್ಮೆ ಬುದ್ಧನ ನೆನಪಾಗಿ ಬಿಡುತ್ತದೆ. ನಿಜ.. ಇದು ಬುದ್ಧನ ಮಾತೇ ಆಗಿದ್ದರೂ ಸದ್ಯದಲ್ಲೇ ಇದು ಬಿಗ್​-ಬಿ ಅಮಿತಾಭ್ ಬಚ್ಚನ್​ ಬಾಯಿಂದ ಹೊರಹೊಮ್ಮಿದರೂ ಅಚ್ಚರಿ ಏನಿಲ್ಲ.
ಏಕೆಂದರೆ ಬುದ್ಧನ ಹಲವು ಸಂದೇಶ, ಆತನ ಬದುಕು ಎಲ್ಲದಕ್ಕೂ ಬಿಗ್​-ಬಿ ಶೀಘ್ರದಲ್ಲೇ ದನಿ ಆಗಲಿದ್ದಾರೆ. ಅರ್ಥಾತ್​, ಬುದ್ಧನ ಸಂದೇಶಗಳು ಹಾಗೂ ಬದುಕನ್ನು ಆಧರಿಸಿ ನಡೆಯುವ ಧ್ವನಿ-ಬೆಳಕಿನ ಪ್ರದರ್ಶನಕ್ಕೆ ಅಮಿತಾಭ್​ ಬಚ್ಚನ್​ ಧ್ವನಿ ನೀಡಲಿದ್ದಾರೆ. ಭಗವಾನ್​ ಬುದ್ಧನ ಕುರಿತು ಇಂಥದ್ದೊಂದು ಲೈಟ್​ ಆ್ಯಂಡ್​ ಸೌಂಡ್ ಶೋ ಉತ್ತರಪ್ರದೇಶದ ಸಾರನಾಥ್​ನಲ್ಲಿ ಶೀಘ್ರದಲ್ಲೇ ಆಯೋಜನೆ ಆಗಲಿದೆ.
ಈಗಾಗಲೇ ಮಾಡಿಕೊಂಡಿದ್ದ ಯೋಜನೆ ಪ್ರಕಾರ ಇದಕ್ಕೆ ಬಿಗ್​-ಬಿ ಸೆಪ್ಟೆಂಬರ್​ ತಿಂಗಳಾಂತ್ಯದೊಳಗೆ ಡಬ್ಬಿಂಗ್ ಮಾಡಿ ಮುಗಿಸಿರಬೇಕಿತ್ತು. ಆದರೆ ಅವರಿಗೆ ಕರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಅಕ್ಟೋಬರ್​ 25ರ ಒಳಗೆ ರೆಕಾರ್ಡಿಂಗ್ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಲೈಟ್​ ಆ್ಯಂಡ್​ ಸೌಂಡ್​ ಶೋ ಈ ವರ್ಷದ ಕೊನೆಯಲ್ಲಿ ಆರಂಭಗೊಳ್ಳುವಂತೆ ತಯಾರಿಗಳು ನಡೆಯುತ್ತಿವೆ. ಬುದ್ಧನ ಬಾಲ್ಯದಿಂದ ಹಿಡಿದು ಪರಿನಿರ್ವಾಣದ ವರೆಗಿನ ಬದುಕು ಇದರಲ್ಲಿ ಅನಾವರಣ ಆಗಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eleven + 6 =
Remember me
