ಮುಂಬೈ:ಟ್ವಿಟರ್ ಬ್ಲೂ ಟಿಕ್ ನವೀಕರಣ ಕುರಿತಾಗಿ ಬಾಲಿವುಟ್​ ನಟ ಅಮಿತಾಭ್​ ಬಚ್ಚನ್ ‘ಖೇಲ್ ಖತಮ್, ‘ನಾನು ದುಡ್ಡು ಕಳೆದುಕೊಂಡೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬ್ಲೂಟಿಕ್ ಮಾಯವಾದ ಬೆನ್ನಲ್ಲೇ ಅನೇಕ ಸೆಲೆಬ್ರಿಟಿಗಳು ಸಿಟ್ಟಾದರು. ಕೆಲವರು ತಾವು ಹಣ ಪಾವತಿಸುವುದಿಲ್ಲ ಎಂದು ನೇರವಾಗಿಯೇ ಹೇಳಿದರು. ಈ ಬೆನ್ನಲೇ ಹಲವು ಸೆಲೆಬ್ರಿಟಿಗಳಿಗೆ ಬ್ಲೂಟಿಕ್ ಮರಳಿ ಸಿಕ್ಕಿದೆ.
ಹೊಸ ನಿಯಮ:1 ಮಿಲಿಯನ್ ಅಂದರೆ 10 ಲಕ್ಷಕ್ಕಿಂತ ಅಧಿಕ ಹಿಂಬಾಲಕರು ಇರುವ ಟ್ವಿಟರ್​ ಬಳಕೆದಾರರ ಖಾತೆಯಲ್ಲಿ ಬ್ಲೂಟಿಕ್ ಹಾಗೆಯೇ ಉಳಿಯುತ್ತದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಹೀಗಾಗಿ, 1 ಮಿಲಿಯನ್​ಗಿಂತ ಅಧಿಕ ಫಾಲೋವರ್ಸ್ ಇರುವವರ ಖಾತೆಗೆ ಬ್ಲೂಟಿಕ್ ಮರಳಿದೆ.ಈ ಬೆಳವಣಿಗೆ ಬಗ್ಗೆ ಅಮಿತಾಭ್ ಬಚ್ಚನ್ ಅಸಮಾಧಾನ ಹೊರಹಾಕಿದ್ದಾರೆ. ಬ್ಲೂಟಿಕ್ ಪಡೆಯಲು ಅವರು ಹಣ ಪಾವತಿಸಿದ್ದರು. ಆ ಬಳಿಕ ಮಸ್ಕ್ ಕಡೆಯಿಂದ ಹೊಸ ಘೋಷಣೆ ಆಯಿತು.
ಇದನ್ನೂ ಓದಿ:ರಾಹುಲ್ ಗಾಂಧಿಗೆ ಬಡತನ ಗೊತ್ತಿದೆಯೆ? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆಟ್ವೀಟ್​​ನಲ್ಲಿ ಏನಿದೆ?:‘ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎಂದಿರಿ. ನಾನು ಹಣ ಪಾವತಿಸಿದೆ. ಆದರೆ, 1 ಮಿಲಿಯನ್​ಗಿಂತ ಹೆಚ್ಚಿನ ಹಿಂಬಾಲಕರಿದ್ದರೆ ಅವರ ಬ್ಲೂಟಿಕ್​ ಹಾಗೆಯೇ ಇರುತ್ತದೆ ಎಂದು ಈಗ ನೀವು ಹೇಳುತ್ತಿದ್ದೀರಿ. ನನಗೆ 48.4 ಮಿಲಿಯನ್ ಹಿಂಬಾಲಕರಿದ್ದಾರೆ. ನನ್ನ ಹಣ ಈಗಾಗಲೇ ಹೋಗಿದೆ. ನಾನೀಗ ಏನು ಮಾಡಬೇಕು?’ ಎಂದು ಅಮಿತಾಭ್ ಟ್ವೀಟ್ ಮಾಡಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಾಮೂಹಿಕ ವಿವಾಹ; ಯುವತಿಯರಿಗೆ ಕನ್ಯತ್ವ ಪರೀಕ್ಷೆ …ಮುಂದೆನಾಯ್ತು..?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 7 =
Remember me
