ನವದೆಹಲಿ:ಕರೊನಾ ವೈರಸ್​ ಸಮಯದಲ್ಲಿ ವಲಸೆ ಕಾರ್ಮಿಕರಿಗಾಗಿ ಸರ್ಕಾರಗಳು ಮಾತ್ರವಲ್ಲದೇ ಕೆಲವೇ ಕೆಲವು ಗಣ್ಯರು ಕೂಡ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಚಲನಚಿತ್ರಗಳಲ್ಲಿ ಹೀರೋ ಎನಿಸಿಕೊಂಡಿರುವವರು, ನಿಜ ಜೀವನದಲ್ಲಿಯೂ ಹೀರೋಗಳಾಗುವುದು ಅಪರೂಪವೇ.
ಆದರೆ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಮಾತ್ರ ಮೊದಲಿನಿಂದಲೂ ಸಂತ್ರಸ್ತರ ಸಹಾಯಕ್ಕೆ ನಿಲ್ಲುವ ಮೂಲಕ ಜನಮನ ಗೆದ್ದವರು. ಈ ಕರೊನಾ ವೈರಸ್​ ಸಂಕಷ್ಟದ ಸಮಯದಲ್ಲಿಯೂ ಅವರು ಅಪರೂಪ ಎನಿಸುವ ಕಾರ್ಯ ಮಾಡಿದ್ದು, ಇದೀಗ ಇಡೀ ವಿಶ್ವದ ಗಮನವನ್ನೇ ಸೆಳೆದಿದ್ದಾರೆ.
ಇದನ್ನೂ ಓದಿ:‘ಭವಿಷ್ಯದ ಅಮಿತಾಭ್​’ಗೆ ಬಿರುದುಗಳ ಮಹಾಪೂರ: ಆತ್ಮಕಥೆ ಬಿಚ್ಚಿಟ್ಟು ಕಣ್ಣೀರಾದ ನಟ ಸೋನು
ಈಗಾಗಲೇ ಸಹಸ್ರಾರು ಮಂದಿಯನ್ನು ಶ್ರಮಿಕ್​ ರೈಲುಗಳ ಮೂಲಕ ಆಯಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರನ್ನು ಅವರವರ ತವರೂರುಗಳಿಗೆ ಕಳುಹಿಸಿದೆ. ಆದರೂ ಇನ್ನೂ ಅನೇಕ ಕಾರ್ಮಿಕರು ಅಲ್ಲಿಯೇ ಉಳಿದುಕೊಂಡಿದ್ದಾರೆ. ಅಂಥವರ ಪೈಕಿ ಒಂದು ಸಾವಿರ ಕಾರ್ಮಿಕರಿಗೆ ವಿಮಾನದ ಮೂಲಕ ಅವರ ತವರಿಗೆ ಕಳಿಸುವಂಥ ಅಪರೂಪದ ಕಾರ್ಯವನ್ನು ಅಮಿತಾಭ್​ ಮಾಡಿದ್ದಾರೆ. ತಲಾ 180 ಕಾರ್ಮಿಕರನ್ನು ಹೊಂದಿರುವ ಆರು ವಿಮಾನಗಳು ಜೂನ್ 10 ಮತ್ತು 11 ರಂದು ಗೋರಖ್‌ಪುರ, ವಾರಣಾಸಿ ಮತ್ತು ಉತ್ತರ ಪ್ರದೇಶಕ್ಕೆ ತೆರಳಲಿವೆ. ಇದರ ಜತೆಗೆ 10 ವಿಶೇಷ ಬಸ್​ಗಳನ್ನೂ ಈ ಕಾರ್ಮಿಕರಿಗಾಗಿ ವ್ಯವಸ್ಥೆ ಮಾಡಿದ್ದಾರೆ.
“ವಲಸಿಗರಿಗೆ ಚಾರ್ಟರ್ಡ್ ವಿಮಾನಗಳನ್ನು ವ್ಯವಸ್ಥೆ ಮಾಡಲು ಬಚ್ಚನ್ ಸಾಹೇಬ್ ನನ್ನನ್ನು ಕೇಳಿಕೊಂಡರು, ಅದರಂತೆ ವ್ಯವಸ್ಥೆ ಮಾಡಿದ್ದೇನೆ ಎಂಬ ಮಾಹಿತಿಯನ್ನು ಅಮಿತಾಭ್​ ಬಚ್ಚನ್ ಕಾರ್ಪ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಮೂರು ಗಂಟೆ ಲಿಫ್ಟ್​ನಲ್ಲಿ ಸಿಲುಕಿ ಒದ್ದಾಡಿದ ಮಕ್ಕಳು! ಮುಂದೇನಾಯ್ತು?
ಕತ್ರಿನಾ ಕೈಫ್​ ಕೂಡ ಇದಾಗಲೇ ತಮ್ಮ ಮೇಕಪ್ ಬ್ರಾಂಡ್ ಕೇ ಬ್ಯೂಟಿ ಮೂಲಕ ಮಹಾರಾಷ್ಟ್ರದ ಕೆಲವು ವಲಸೆ ಕಾರ್ಮಿಕರಿಗೆ ನೆರವು ನೀಡಿದ್ದಾರೆ. ಇದಾಗಲೇ ನಟ ಸೋನು ಸೂದ್​ ಸಹಸ್ರಾರು ಮಂದಿ ವಲಸೆ ಕಾರ್ಮಿಕರಿಗೆ ವಿಶೇಷ ರೀತಿಯಲ್ಲಿ ನೆರವು ನೀಡುವ ಮೂಲಕ ಮನೆಮಾತಾಗಿರುವುದು ಮಾತ್ರವಲ್ಲದೇ ಭವಿಷ್ಯದ ಅಮಿತಾಭ್​ ಎಂಬ ಬಿರುದು ಕೂಡ ಪಡೆದಿದ್ದಾರೆ(ಏಜೆನ್ಸೀಸ್​)
ಮಿತ್ರೋ ಆ್ಯಪ್​ ತನ್ನದೇ ಎಂದು ಹಸಿಸುಳ್ಳು ಹೇಳಿರುವ ಪಾಕ್​ನಿಂದೀಗ ನಕಲಿ ಆರೋಗ್ಯ ಸೇತು ಆ್ಯಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + eight =
Remember me
