ಮಹಾರಾಷ್ಟ್ರ:ಮುಂಬೈನ ಜುಹು ಬೀಚ್ ಬಳಿಯಿರುವ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಅವರ ಜಲ್ಸಾ ಎಂಬ ಬಂಗಲೆಯ ಸಮೀಪದ ಬಂಗಲೆಯನ್ನು ಹರಾಜಿಗೆ ಇಡಲಾಗಿದೆ. ಡಾಯ್ಚ್ ಬ್ಯಾಂಕ್ ಈ ಬಂಗಲೆಯನ್ನು 25 ಕೋಟಿ ರೂಪಾಯಿಗಳ ಮೀಸಲು ಬೆಲೆಯೊಂದಿಗೆ ಹರಾಜು ಹಾಕಿದೆ.
ಇದನ್ನೂ ಓದಿ:ಚುನಾವಣಾ ಆಯೋಗಕ್ಕೆ ಬಾಂಡ್​ಗಳ ವಿವರ ಸಲ್ಲಿಸಿದ ಎಸ್​​ಬಿಐ!
ಬಂಗಲೆಯ ಕಾರ್ಪೆಟ್ ಪ್ರದೇಶವು 1,164 ಚದರ ಅಡಿ ಮತ್ತು 2,175 ಚದರ ಅಡಿ ತೆರೆದ ಪ್ರದೇಶವನ್ನು ಹೊಂದಿದೆ. ಬ್ಯಾಂಕ್ ಹೊರಡಿಸಿದ ಸಾರ್ವಜನಿಕ ಸುತ್ತೋಲೆ ಪ್ರಕಾರ ಮಾರ್ಚ್ 27 ರಂದು ಹರಾಜು ನಿಗದಿಪಡಿಸಲಾಗಿದೆ. 2002ರ ಆರ್ಥಿಕ ಆಸ್ತಿಗಳ ಭದ್ರತೆ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿ ಕಾಯಿದೆ ಅಡಿಯಲ್ಲಿ ಬಂಗಲೆಯನ್ನು ಡಾಯ್ಚ ಬ್ಯಾಂಕ್ ಹರಾಜು ಮಾಡುತ್ತಿದೆ.
ಸಾರ್ವಜನಿಕ ಸೂಚನೆಯ ಪ್ರಕಾರ, ಬ್ಯಾಂಕ್ ಏಪ್ರಿಲ್ 2022ರಲ್ಲಿ ಡಿಮ್ಯಾಂಡ್ ನೋಟಿಸ್ ಕಳುಹಿಸಿದೆ. ಸಾಲಗಾರರು ಮತ್ತು ಸಹ-ಸಾಲಗಾರರಾದ ಸೆವೆನ್ ಸ್ಟಾರ್ ಸ್ಯಾಟಲೈಟ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರೊಂದಿಗೆ 12.89 ಕೋಟಿ ರೂ. ಬಾಕಿ ಮೊತ್ತವನ್ನು 60 ದಿನಗಳಲ್ಲಿ ಮರುಪಾವತಿಸಲು ಕೇಳಲಾಗಿದೆ.

A post shared by Amitabh Bachchan (@amitabhbachchan)

ಸಾಲಗಾರರು ಮತ್ತು ಸಹ-ಸಾಲಗಾರರು ಬಾಕಿಯನ್ನು ಮರುಪಾವತಿಸಲು ವಿಫಲವಾದ ಕಾರಣ ಅಡಮಾನವಿಟ್ಟ ಆಸ್ತಿಯನ್ನು ಬ್ಯಾಂಕ್​ ಸ್ವಾಧೀನಪಡಿಸಿಕೊಂಡಿದೆ ಎಂದು ಸಾರ್ವಜನಿಕ ಸುತ್ತೋಲೆಯಲ್ಲಿ ತಿಳಿಸಿದೆ. ಮಾರ್ಚ್ 27 ರಂದು ನಡೆದ ಹರಾಜಿನ ಮೀಸಲು ಬೆಲೆ 25 ಕೋಟಿ ಮತ್ತು ಇಎಂಡಿ ಮೊತ್ತ 2.50 ಕೋಟಿ ಎಂದು ವರದಿಯಾಗಿದೆ.
ಬಿಗ್​-ಬಿ ಅಮಿತಾಭ್​ ಬಚ್ಚನ್ ಅವರು ಆಗಾಗ ತಮ್ಮ ಫೋಟೋಗಳನ್ನು ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅರಮನೆಯಂತಹ ಮನೆಯಲ್ಲಿ ಇರುತ್ತಾರೆ ಅಮಿತಾಭ್​ ಬಚ್ಚನ್​. ಬಿಗ್​-ಬಿ ಮನೆಯಲ್ಲಿ ಅಗತ್ಯದ ಎಲ್ಲ ಐಷಾರಾಮಿ ವಸ್ತುಗಳೂ ಇವೆಯಂತೆ.
ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಇದೇ ರೀತಿಯ ಬಂಗಲೆ ಒಪ್ಪಂದದಲ್ಲಿ, ಮ್ಯಾಕ್ಲಿಯೊಡ್ಸ್ ಫಾರ್ಮಾಸ್ಯುಟಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಗಿರ್ಧಾರಿ ಲಾಲ್ ಬಾವ್ರಿ ಅವರು ಫೆಬ್ರವರಿ 2024 ರಲ್ಲಿ ಮುಂಬೈನ ವಿಲೆ ಪಾರ್ಲೆ ಪ್ರದೇಶದಲ್ಲಿ 7,000 ಚದರ ಅಡಿಗಳಷ್ಟು ಜಾಗದಲ್ಲಿ 3,600 ಚದರ ಅಡಿ ಬಂಗಲೆಯನ್ನು 101 ಕೋಟಿ ರೂ.ಗೆ ಖರೀದಿಸಿದರು. ಇದರ ನಂತರ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ಡಿಸೆಂಬರ್‌ನಲ್ಲಿ ಮುಂಬೈನ ಖಾರ್ ಪ್ರದೇಶದಲ್ಲಿ 5,416 ಚದರ ಅಡಿ ಬಂಗಲೆಯನ್ನು 70.83 ಕೋಟಿ ರೂ.ಗೆ ಖರೀದಿಸಿದ್ದರು.
5,8 ಮತ್ತು 9ನೇ ತರಗತಿಗಳ ಬೋರ್ಡ್​ ಪರೀಕ್ಷೆಗೆ ಸುಪ್ರೀಂ ತಡೆ! ಗೊಂದಲದಲ್ಲಿ ವಿದ್ಯಾರ್ಥಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
