ಚೆನ್ನೈ:ತಮಿಳುನಾಡಿನ ಪ್ರಸಿದ್ಧ ಅಮ್ಮಾ ಕ್ಯಾಂಟೀನ್​ ಇನ್ನು ಮುಂದೆ ಅಣ್ಣ ಕ್ಯಾಂಟೀನ್​ ಆಗಿ ಬದಲಾಗಲಿದೆ. ಡಿಎಂಕೆ ಪಕ್ಷ ಆಡಳಿತಕ್ಕೆ ಬಂದ ಬೆನ್ನಲ್ಲೇ ಕ್ಯಾಂಟೀನ್​ನ ಹೆಸರು ಬದಲಾವಣೆ ಮಾಡುವುದಾಗಿ ತಿಳಿಸಿದೆ.
2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅಮ್ಮ ಕ್ಯಾಂಟೀನ್​ ಆರಂಭಿಸಿದ್ದರು. ಈವರೆಗೆ ಗ್ರೇಟರ್​ ಚೆನ್ನೈ ಕಾರ್ಪೋರೇಷನ್​ ವತಿಯಿಂದ 407 ಅಮ್ಮಾ ಕ್ಯಾಂಟೀನ್​ಗಳನ್ನು ಮಾಡಲಾಗಿದೆ. ಅದರಲ್ಲಿ ಒಂದು ರೂಪಾಯಿಗೆ ಇಡ್ಲಿ, 3 ರೂಪಾಯಿಗೆ ಒಂದು ಪ್ಲೇಟ್ ಅನ್ನ ಸಾಂಬಾರು ಮತ್ತು 3 ರೂಪಾಯಿಗೆ ಒಂದು ಪ್ಲೇಟ್​ ಚಪಾತಿ ನೀಡಲಾಗುತ್ತಿದೆ. ಬಡವರ ಹೊಟ್ಟೆ ಖಾಲಿ ಇರಬಾರದು ಎನ್ನುವ ಉದ್ದೇಶದೊಂದಿಗೆ ಆರಂಭಿಸಿದ್ದ ಕ್ಯಾಂಟೀನ್​ಗಳಿಗೆ ಡಿಎಂಕೆ ಪಕ್ಷದ ಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಸಿ.ಎನ್. ಅನ್ನಾ ದುರೈ ಸ್ಮರಣಾರ್ಥ ಅಣ್ಣ ಕ್ಯಾಂಟೀನ್​ ಎಂದು ಮರುನಾಮಕರಣ ಮಾಡುವುದಾಗಿ ತಿಳಿಸಲಾಗಿದೆ.
ಡಿಎಂಕೆ ಪಕ್ಷ ರಾಜ್ಯದಲ್ಲಿ ಗೆದ್ದರೆ ರಾಜ್ಯಾದ್ಯಂತ ಕಲೈಗ್ನಾರ್​ (ಕಲಾವಿದ) ಹೆಸರಿನಲ್ಲಿ 500 ಕ್ಯಾಂಟೀನ್​ಗಳನ್ನು ತೆರೆಯುವುದಾಗಿ ಹೇಳಿತ್ತು. ಗೆದ್ದ ಸಂಭ್ರಮದಲ್ಲಿರುವ ಪಕ್ಷ ತನ್ನ ಮೊದಲನೇ ಹೆಜ್ಜೆಯಾಗಿ ಈ ಕ್ಯಾಂಟೀನ್​ಗಳನ್ನು ನಿರ್ಮಿಸುವುದಾಗಿ ಹೇಳಿಕೊಂಡಿದೆ. (ಏಜೆನ್ಸೀಸ್​)
ಲಸಿಕೆ ಪಡೆಯುವಾಗ ಒದ್ದಾಡಿ, ಕೂಗಾಡಿದ ಮಹಿಳೆ! ವಿಡಿಯೋ ವೈರಲ್..

ಅಜ್ಜಿ ಮನೆಗೆ ಹೋದವಳ ಬಾಳಲ್ಲಿ ಎಂಟ್ರಿ ಕೊಟ್ಟ ಯುವಕ: ಕೇವಲ 8 ತಿಂಗಳಲ್ಲಿ ನಡೆಯಿತು ದುರಂತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
