ಕೋಲ್ಕತಾ:ಕರೊನಾ ವೈರಸ್‌ ಹಾವಳಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗಿನ ಸ್ಥಿತಿ ಹೇಗಿದೆ ಎಂದರೆ ಯಾರನ್ನೂ ನಂಬುವಂತಿಲ್ಲ. ಅದರಲ್ಲಿಯೂ ಹೊರ ಊರುಗಳಿಂದ, ರಾಜ್ಯಗಳಿಂದ ಬಂದವರ ಬಗ್ಗೆ ಬಹು ಎಚ್ಚರಿಕೆ ವಹಿಸುವುದು ಇಂದಿನ ಅನಿವಾರ್ಯತೆ ಆಗಿದೆ.
ಇದೇ ಕಾರಣಕ್ಕೆ ಅಮ್ಮ-ಮಗ ಇಬ್ಬರೂ ಸ್ಮಶಾನದಲ್ಲಿ ಮಲಗಬೇಕಾಗಿ ಬಂದ ದಾರುಣ ಘಟನೆ, ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ನಡೆದಿದೆ.
ದೆಹಲಿಯಿಂದ ಹೌರಾ ಜಿಲ್ಲೆಯಲ್ಲಿರುವ ತಮ್ಮ ಮನೆಗೆ ವಾಪಸಾದ ಅಮ್ಮ-ಮಗನನ್ನು ಕರೊನಾ ಹರಡುವ ಭೀತಿಯಿಂದ ಸ್ಥಳೀಯರು ತಡೆದ ಹಿನ್ನೆಲೆಯಲ್ಲಿ ಈ ಸ್ಥಿತಿ ತಲೆದೋರಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮಾಸ್ಕ್‌ ಹಾಕದವರಿಗೆ ಬಿದ್ದದ್ದು ಒಂದು ಕೋಟಿ ರೂಪಾಯಿ ದಂಡ!
ಮೊಹುವಾ ಮುಖರ್ಜಿ ಮತ್ತು ಮಗ ರೋಹಿತ್ ಶುಕ್ರವಾರ ರಾಜಧಾನಿ ಎಕ್ಸ್​​ಪ್ರೆಸ್​​ನಲ್ಲಿ ದೆಹಲಿಯಿಂದ ಹಿಂದಿರುಗಿದ್ದರು. ಹೇಳಿ ಕೇಳಿ ದೆಹಲಿ ಮೊದಲೇ ಕರೊನಾ ಹಾಟ್‌ಸ್ಪಾಟ್‌. ಇನ್ನು ಕೇಳಬೇಕೆ? ಇವರಿಬ್ಬರೂ ಬರುತ್ತಿದ್ದಂತೆಯೇ ಸ್ಥಳೀಯರು ಊರಿನ ಒಳಗೆ ಪ್ರವೇಶವೇ ಕೊಡಲಿಲ್ಲ!
ವಿಧವೆಯಾಗಿರುವ ಮೊಹುವಾ ದೆಹಲಿಯಲ್ಲಿ ಮಗ ರೋಹಿತ್​ ಜತೆ ಚಿನ್ನಾಭರಣ ವ್ಯವಹಾರ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರ ವ್ಯವಹಾರದಲ್ಲಿ ನಷ್ಟ ಆಗತೊಡಗಿತು. ಆದ್ದರಿಂದ ದೆಹಲಿ ಬಿಟ್ಟು ತವರು ಸೇರುವ ಹಿನ್ನೆಲೆಯಲ್ಲಿ, ಇಬ್ಬರೂ ಪಶ್ಚಿಮ ಬಂಗಾಳದ ರಘುದೆಬ್ಪುರ್-ದಕ್ಬಂಗಲೋಗೆ ವಾಪಸಾಗುತ್ತಿದ್ದರು.
ಊರಿಗೆ ಬರುವ ಮಧ್ಯೆಯೇ ಅವರನ್ನು ಸ್ಥಳೀಯರು ತಡೆದಿದ್ದಾರೆ. ನೀವು ಕರೊನಾ ಸೋಂಕು ಅಂಟಿಸಿಕೊಂಡು ಬಂದಿದ್ದೀರಿ, ಇಲ್ಲಿಗೆ ಬರಬೇಡಿ ಎಂದು ಹೇಳಿದ್ದಾರೆ. ನಂತರ ಮೊಹವಾ ಅವರು ಪಂಚಾಯತ್​ ಸದಸ್ಯರ ಜತೆ ದೆಹಲಿಯಿಂದ ಬಂದಿರುವ ವಿಷಯವನ್ನು ತಿಳಿಸಿದ್ದಾರೆ. ಆದರೂ ಸ್ಥಳೀಯರ ಅವರ ಮಾತು ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ಇಡೀ ರಾತ್ರಿ ತಾಯಿ-ಮಗ ಸ್ಮಶಾನದಲ್ಲಿ ಕಾಲ ಕಳೆದಿದ್ದಾರೆ.
ಈ ಘಟನೆ ಬಗ್ಗೆ ಶನಿವಾರ ಬೆಳಗ್ಗೆ ಪೊಲೀಸರಿಗೆ ವಿಷಯ ತಿಳಿದಿದೆ. ಬಳಿಕ ತಮ್ಮ ಊರಾದ ರಘುದೆಬ್ಪುರ್-ದಕ್ಬಂಗಲೋ ಮನೆಗೆ ತೆರಳುವಂತೆ ಹೇಳಿದ್ದಾರೆ. ಬಳಿಕ ಅಲ್ಲಿ 14 ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಿದ್ದಾರೆ.(ಏಜೆನ್ಸೀಸ್‌)
ಭೂಮಿಯೊಳಗಿಂದ ಮನುಷ್ಯರ ಚೀರಾಟ? ಬೆಚ್ಚಿಬಿದ್ದಿದ್ದಾರೆ ಚೀನಿಯರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + nineteen =
Remember me
