ಹೈದರಾಬಾದ್:ಕಾಮ, ಅಕ್ರಮ ಸಂಬಂಧ ಎನ್ನುವುದು ಏನೆಲ್ಲಾ ಎಡವಟ್ಟು ಮಾಡಿಸಿಬಿಡುತ್ತದೆ ಎಂಬುದಕ್ಕೆ ಈಗಾಗಲೇ ಹಲವಾರು ನಡೆದ ಘಟನೆಗಳೇ ಸಾಕ್ಷಿಯಾಗಿವೆ.ಅಂಥದ್ದೇ ಒಂದು ಅತ್ಯಂತ ವಿಷಾದಕರ ಎನ್ನುವಂಥ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದೆ.
ಇಲ್ಲಿಯ ಮಹಿಳೆಗೆ ಮದುವೆಯಾಗಿ ಒಂದು ಮಗುವಿದ್ದರೂ ಇನ್ನೊಬ್ಬನ ಮೇಲೆ ಮೋಹ ಶುರುವಾಗಿತ್ತು. ಆತನ ಹೆಸರು ಕರುಣಾಕರನ್‌. ದಿನವೂ ಮಹಿಳೆಯ ಗಂಡ ಇಲ್ಲದ ಸಮಯದಲ್ಲಿ ಮನೆಗೆ ಬಂದು ತನ್ನ ಕೆಲಸ ಮುಗಿಸಿ ಹೋಗುತ್ತಿದ್ದ ಈತ.
ಆದರೆ ಮನೆಯಲ್ಲಿ ಮಹಿಳೆಯ ಜತೆ ಐದು ವರ್ಷದ ಮಗಳೂ ಇದ್ದಳು. ದಿನವೂ ಅಪರಿಚಿತ ವ್ಯಕ್ತಿ ಬರುತ್ತಿದ್ದುದನ್ನು ಆಕೆ ವಿಚಿತ್ರವಾಗಿ ಗಮನಿಸುತ್ತಿದ್ದಳು. ಮಾತ್ರವಲ್ಲದೇ ಆತ ಬಂದಾಗಲೂ ಅಮ್ಮನ ಹತ್ತಿರ ಬರುತ್ತಿದ್ದಳು. ಇದು ಕರುಣಾಕರನಿಗೆ ಸಹಿಸದಾಗಿತ್ತು.
ಅದೊಂದು ದಿನ ಈ ಮಗುವಿನ ಅಪ್ಪ ಬೇಗನೇ ಮನೆಗೆ ಬಂದಿದ್ದಾರೆ. ಆ ಸಮಯದಲ್ಲಿ ಕರುಣಾಕರನ್‌ ಮನೆಯಲ್ಲಿ ಇದ್ದ. ಅವರಿಬ್ಬರೂ ತಬ್ಬಿಕೊಂಡು ಇದ್ದುದನ್ನು ಕಂಡು ಕಂಗಾಲಾಗಿ ಹೋಗಿ ಕೂಗಾಡಿದರು. ಗಂಡನನ್ನು ಕಂಡು ಹೆದರಿದ ಹೆಂಡತಿ, ಓಡಿ ಬಂದಿದ್ದಾಳೆ. ಈ ಸಮಯದಲ್ಲಿ ಕಮಲಾಕರನ್‌, ನೀನು ನನ್ನ ಹತ್ತಿರ ಬಾ, ಇಲ್ಲದಿದ್ದರೆ ಮಗುವನ್ನು ಸಾಯಿಸುತ್ತೇನೆ ಎಂದಿದ್ದಾನೆ. ಹೆಂಡತಿ ಎಲ್ಲಿ ಹೋಗಬೇಕು ಎಂದು ಗಲಿಬಿಲಿಯಲ್ಲಿದ್ದಾಗ, ಮೊದಲೇ ಮಗುವಿನ ಮೇಲೆ ಸಿಟ್ಟಿನಲ್ಲಿದ್ದ ಕಮಲಾಕರನ್‌, ಅಲ್ಲಿಯೇ ಇದ್ದ ಬ್ಲೇಡಿನಿಂದ ಮಗುವಿನ ಹೊಟ್ಟೆಯನ್ನು ಸೀಳಿದ್ದಾನೆ. ಮಗು ಅಲ್ಲಿಯೇ ಪ್ರಾಣ ಕಳೆದುಕೊಂಡಿದೆ.
ಇದನ್ನೂ ಓದಿ:ಕೊಲೆ ಮಾಡಿ 38 ವರ್ಷಗಳ ನಂತರ ಸಿಕ್ಕಿಬಿದ್ದ ನಟೋರಿಯಸ್‌ ಕ್ರಿಮಿನಲ್‌!
ಅಮ್ಮನ ಕಾಮಕ್ಕೆ ಮುಗ್ಧ ಮಗುವಿನ ಅಂತ್ಯವಾಗಿದೆ. ಇದು ನಡೆದು 10 ದಿನಗಳಾಗಿವೆ.
ಮಗಳನ್ನು ತುಂಬಾ ಪ್ರೀತಿಸುತ್ತಿದ್ದ ಅದರ ಅಪ್ಪನಿಗೆ ಮಗುವಿನ ಶವವನ್ನು ನೋಡಿ ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ತನ್ನ ಎದುರಿಗೇ ಕಂದ ಮೃತಪಟ್ಟಿದ್ದು, ಅದರಲ್ಲಿಯೂ ತಾನು ಮನೆಗೆ ಬಂದಿದ್ದರಿಂದಲೇ ಮಗಳು ಸಾಯುವಂತಾಯಿತಲ್ಲ ಎಂದು ಖಿನ್ನತೆಗೆ ಜಾರಿದ್ದ ಅವರು, ಮಗುವಿನ ಯೋಚನೆಯಲ್ಲಿಯೇ ಇರತೊಡಗಿದರು.
ನಿನ್ನೆ ಸಂಜೆ ಮಗಳ ನೆನಪು ಅವರನ್ನು ಇನ್ನಿಲ್ಲದಂತೆ ಕಾಡಿದೆ. ಹಿಂದೆ ಮುಂದೆ ಯೋಚಿಸದ ಅವರು ರೈಲಿಗೆ ತಲೆ ಕೊಟ್ಟಿದ್ದಾರೆ! ರೈಲು ಹಳಿಗಳ ಪಕ್ಕದಲ್ಲಿಯೇ ಆಡುತ್ತಿದ್ದ ಮಕ್ಕಳು ಶವವನ್ನು ನೋಡಿದ್ದು ಅದನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 37 ವರ್ಷದ ಅಪ್ಪ, ಅಮ್ಮನ ಕಾಮಕ್ಕೆ ಬಲಿಯಾಗಿದ್ದಾರೆ. ತನಿಖೆ ನಡೆಸಿರುವ ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಪ್ರಕಾರ, ಇವಿಷ್ಟು ವಿಷಯಗಳು ಸಿಕ್ಕಿವೆ. ಪೊಲೀಸರು ಕರುಣಾಕರನ್‌ ಹಾಗೂ ಮಹಿಳೆ ವಿರುದ್ಧ ಕೇಸು ದಾಖಲು ಮಾಡಿಕೊಂಡಿದ್ದಾರೆ.
ಕೊಲೆ ಮಾಡಿ 38 ವರ್ಷಗಳ ನಂತರ ಸಿಕ್ಕಿಬಿದ್ದ ನಟೋರಿಯಸ್‌ ಕ್ರಿಮಿನಲ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 12 =
Remember me
