ನವದೆಹಲಿ:ದೇಶಗಳಿಗೆ ವಲಸೆ ಹೋಗುವಲ್ಲಿ ಮತ್ತು ವಿದೇಶಿ ಪೌರತ್ವ ಪಡೆಯುವ ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಇತ್ತೀಚಿನ ವರದಿಯೊಂದರಲ್ಲಿ ಹೇಳಿದೆ. ಆ ಪೈಕಿ ಅಮೆರಿಕದ ಪೌರತ್ವವೇ ಅಗ್ರಸ್ಥಾನದಲ್ಲಿದೆ. ಆದರೆ, ವಿದೇಶೀಯರಿಗೆ ಪೌರತ್ವ ಮಂಜೂರು ಮಾಡುವಲ್ಲಿ ಕೆನಡಾ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ.
ಶ್ರೀಮಂತ ದೇಶಗಳ ಪೌರತ್ವ ಗಳಿಸುವವರಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ ಎಂದು ‘ಅಂತಾರಾಷ್ಟ್ರೀಯ ವಲಸೆ ಮುನ್ನೋಟ: 2023’ ಶೀರ್ಷಿಕೆಯ ವರದಿ ತಿಳಿಸಿದೆ. ಕೆನಡಾದಲ್ಲಿ ಪೌರತ್ವ ನೀಡಿಕೆ ಪ್ರಮಾಣ 2021 ಮತ್ತು 2022ರ ನಡುವೆ ಶೇಕಡ 174ರಷ್ಟು ಏರಿಕೆ ದಾಖಲಾಗಿದೆ. ಇದರೊಂದಿಗೆ ವಲಸಿಗರಲ್ಲಿ ಪೌರತ್ವ ಪಡೆಯುವ ನೆಚ್ಚಿನ ತಾಣವಾಗಿ ಕೆನಡಾ ಹೊರಹೊಮ್ಮಿದೆ.
ಕಳೆದ ವರ್ಷ ಒಇಸಿಡಿ ದೇಶಗಳ ಪೌರತ್ವ ಪಡೆದವರ ಸಂಖ್ಯೆ ಒಟ್ಟು 28 ಲಕ್ಷಕ್ಕೆ ಏರಿದೆ ಎಂದು ಹೇಳಿರುವ ವರದಿ ದೇಶವಾರು ವಿವರವನ್ನು ಒದಗಿಸಿಲ್ಲ. ಆದರೆ, 2019ರಿಂದ ಒಇಸಿಡಿ ದೇಶಗಳ ಪೌರತ್ವ ಗಳಿಸುವಲ್ಲಿ ಭಾರತ ಪ್ರಮುಖ ಮೂಲವಾಗಿರುವುದನ್ನು ಅದು ಎತ್ತಿ ತೋರಿಸಿದೆ. 1.3 ಲಕ್ಷ ಭಾರತೀಯರು 2021ರಲ್ಲಿ ಒಂದು ಒಇಸಿಡಿ ರಾಷ್ಟ್ರದ ನಾಗರಿಕತ್ವ ಪಡೆದಿದ್ದಾರೆ. 2019ರಲ್ಲಿ ಅದು 1.5 ಲಕ್ಷ ಆಗಿತ್ತು. 57,000 ಚೀನೀಯರು ಒಇಸಿಡಿ ಪೌರತ್ವ ಪಡೆಯುವುದರೊಂದಿಗೆ ಐದನೇ ಸ್ಥಾನದಲ್ಲಿದೆ.
ಹುಲಿ ಉಗುರು ಪ್ರಕರಣ: ನಟ ದರ್ಶನ್​, ವಿನಯ್​ ಗುರೂಜಿ ವಿರುದ್ಧ ದೂರು ದಾಖಲು

ಬಿಕ್ಕಟ್ಟು: ಇಂಧನ ಕೊರತೆಯಿಂದ ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನ ಏರ್‌ಲೈನ್ಸ್, 26 ವಿಮಾನಗಳ ಹಾರಾಟ ರದ್ದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + nineteen =
Remember me
