ಮಹಾರಾಷ್ಟ್ರ:ಸಂತ ಎಂದು ಗುರುತಿಸಿಕೊಂಡಿರುವ ಗುರುದಾಸ್ ಮಹಾರಾಜ್ ಎಂಬುವರು ಬಿಸಿಬಿಸಿ ಕಾವಲಿಗೆಯ ಮೇಲೆ ಕುಳಿತು ಭಕ್ತರಿಗೆ ಆಶೀರ್ವಾದ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವರದಿಯ ಪ್ರಕಾರ ಇವರು ಅಮರಾವತಿ ಜಿಲ್ಲೆಯ ತಿವಾಸಾ ತಾಲೂಕಿನಲ್ಲಿ ಗೋಸಂರಕ್ಷಣಾ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಂತ ಗುರುದಾಸ್ ಮಹಾರಾಜ್ ಪ್ರತಿಕ್ರಿಯಿಸಿದ್ದು, ಇದರಲ್ಲೇನು ವಿಶೇಷವಿಲ್ಲ. ಮಹಾಶಿವರಾತ್ರಿಯಂದು ಆಶ್ರಮದಲ್ಲಿ ವಿಶೇಷವಾದ ಪೂಜೆ ಇತ್ತು. ಈ ವೇಳೆ ನಾನು ಬಿಸಿ ಕಾವಲಿಗೆಯ ಮೇಲೆ ಕುಳಿತು, ಆಶೀರ್ವಾದ ನೀಡಿದ್ದೆ. ಇದನ್ನು ಭಕ್ತರೊಬ್ಬರು ವಿಡಿಯೋ ಮಾಡಿದ್ದು, ತಡವಾಗಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.ಇದನ್ನೂ ಓದಿ:ಈ ಮರದ ಭದ್ರತೆಗೆ ಇದುವರೆಗೂ ಖರ್ಚಾಗಿದ್ದು 64 ಲಕ್ಷ ರೂ.!
ದೈವಿಕ ಶಕ್ತಿಯು ನನ್ನ ದೇಹವನ್ನು ಪ್ರವೇಶಿಸಿದಾಗ, ನಾನು ಏನು ಮಾಡುತ್ತಿದ್ದೇನೆ ಮತ್ತುಎಲ್ಲಿ ಕುಳಿತಿದ್ದೇನೆ ಎಂದು ತಿಳಿದಿರುವುದಿಲ್ಲ. ನಾನು ಗೌತಮ ಬುದ್ಧ, ಭಗವಾನ್ ಶ್ರೀರಾಮಚಂದ್ರ, ಯೇಸು ಕ್ರಿಸ್ತ, ಸಂತ ಗಾಡ್ಗೆ ಮತ್ತು ಬಾಬಾ ಕೃಖ್ನಾಜಿ ಮಹಾರಾಜರ ಅನುಯಾಯಿ. ನಾನೊಬ್ಬ ಅದ್ಭುತ ಬಾಬಾ ಅಲ್ಲ. ಯಾರೂ ನನ್ನನ್ನು ಬಾಬಾ ಎಂದು ಕರೆಯಬಾರದು ಎಂದು ಗುರುದಾಸ್ ಮಹಾರಾಜ್ ಹೇಳಿದ್ದಾರೆ.
ಅಲ್ಲದೆ ಬಿಸಿ ಕಾವಲಿಗೆ ಮೇಲೆ ಕುಳಿತುಕೊಂಡು ಆಶೀರ್ವಾದ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಯಾರೂ ಶೇರ್ ಮಾಡಬಾರದೆಂದು ಗುರುದಾಸ್ ಮಹಾರಾಜ್ ವಿನಂತಿಸಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಗುರುದಾಸ್ ಮಾಹಾರಾಜ್ ಜನರ ನಂಬಿಕೆಗೆ ದ್ರೋಹ ಮಾಡುತ್ತಿದ್ದಾರೆ. ಮೂಢನಂಬಿಕೆಗಳನ್ನು ಭಿತ್ತರಿಸುವ ಕೆಲಸ ಮಾಡಬಾರದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿವೆ.(ಏಜೆನ್ಸೀಸ್) ಇದನ್ನೂ ಓದಿ:ಬಳ್ಳಾರಿ | 30 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಶಾಲಾ ಬಸ್​ಗೆ ಬೆಂಕಿ; ತಪ್ಪಿದ ಅನಾಹುತ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × four =
Remember me
