ಪಂಜಾಬ್​​:ವಾರಿಸ್​ ಪಂಜಾಬ್​ ದೇ ಸಂಘಟನೆಯ ಮುಖ್ಯಸ್ಥ, ಸಿಖ್​ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್​ಪಾಲ್​ ಸಿಂಗ್​ ಪಟಿಯಾಲದಲ್ಲಿ ಮೊಬೈಲ್​ನಲ್ಲಿ ಮಾತನಾಡುತ್ತ ಓಡಾಡುತ್ತಿರುವ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಮೊದಲ ವಿಡಿಯೋದಲ್ಲಿ ಕಂಡು ಬರುವ ಹಾಗೆ ಅಮೃತ್​ಪಾಲ್​ ಬಿಳಿ ಬಣ್ಣದ ವಸ್ತ್ರದಿಂದ ತನ್ನ ಮುಖವನ್ನು ಮರೆಮಾಚಿಕೊಂಡು ಕೈಯಲ್ಲಿ ಒಂದು ಬ್ಯಾಗ್​ ಹಿಡಿದು ಹೋಗುತ್ತಿರುವ ದೃಶ್ಯ ಕಂಡು ಬರುತ್ತದೆ. ಈತನ ಜೊತೆಯಲ್ಲಿ ಸಹಚರ ಪಪಲ್​ಪ್ರೀತ್​ ಸಿಂಗ್​ ಇರುವುದು ಮೊದಲ ವಿಡಿಯೋದಲ್ಲಿ ಕಂಡು ಬರುತ್ತದೆ.

ಇದನ್ನೂ ಓದಿ:ಹೃದಯಾಘಾತಕ್ಕೀಡಾಗಿ ಮೃತಪಟ್ಟ ಕನ್ನಡ ಸಿನಿಮಾ ನಿರ್ದೇಶಕ

ಮತ್ತೊಂದು ವಿಡಿಯೋದಲ್ಲಿ ಕಂದು ಬಣ್ಣದ ಜಾಕೆಟ್​ ಧರಿಸಿರುವ ಅಮೃತ್​ಪಾಲ್​ ಒಂದೇ ಸ್ಥಳದಲ್ಲಿ ಏಕಾಂಗಿಯಾಗಿ ಫೋನಿನಲ್ಲಿ ಮಾತನಾಡುತ್ತಿರುವುದು ಕಂಡು ಬರುತ್ತದೆ. ಆದರೆ, ಈ ಬಗ್ಗೆ ಪಂಜಾಬ್ ಪೊಲೀಸರು ಯಾವುದೇ ಪ್ರತಿಕ್ರಿಯೆಯನ್ನ ನೀಡಿಲ್ಲ.
ಗುರುವಾರ ಹರಿಯಾಣದ ಕುರುಕ್ಷೇತ್ರದ ಶಹಬಾದ್​ನಲ್ಲಿ ಮನೆಯೊಂದರಲ್ಲಿ ಅಮೃತ್​ಪಾಲ್​ ಹಾಗೂ ಪಪಲ್​ಪ್ರೀತ್​ ಸಿಂಗ್​ಗೆ ಆಶ್ರಯ ನೀಡಿದ ಅನುಮಾದ ಮೇರೆಗೆ ಪೊಲೀಸರು ಬಲ್ಜಿತ್​ ಕೌರ್​ ಎಂಬ ಮಹಿಳೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 5 =
Remember me
