ನವದೆಹಲಿ:ದಿ ವಿಲನ್ ನಟಿ ಆ್ಯಮಿ ಜಾಕ್ಸನ್ ಅವರು ಮಗ ಹುಟ್ಟಿದ 6 ವರ್ಷಗಳ ನಂತರ ತಮ್ಮ ದೀರ್ಘ ಕಾಲದ ಗೆಳೆಯನನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.
ಇಟಲಿಯಲ್ಲಿ ನಟ ಎಡ್ ವೆಸ್ಟ್​ವೀಕ್ ಜೊತೆ ಮೋಹಕ ಸುಂದರಿ ಆ್ಯಮಿ ಜಾಕ್ಸನ್​ ಮದುವೆಯಾಗಿರುವ ಫೋಟೋ ಸದ್ಯ ಇಬ್ಬರ ಇನ್​ಸ್ಟಾಗ್ರಾಮ್​ನಲ್ಲಿ ಹರಿದಾಡುತ್ತಿವೆ. ನಟ ಎಡ್ ವೆಸ್ಟ್​ವೀಕ್ ಆ್ಯಮಿ ಜಾಕ್ಸನ್​ ಜೊತೆ ವಿವಾಹವಾಗಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಈಗಷ್ಟೇ ಪ್ರಯಾಣ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ.
ಶ್ವೇತವರ್ಣದ ಗೌನ್​ನಲ್ಲಿ ಆ್ಯಮಿ ಎಂಬ ಸೌಂದರ್ಯರಾಶಿ ಮಿನುಗುತ್ತಿದ್ದರೆ ಎಡ್​ ವೆಸ್ಟ್​ವೀಕ್ ಕೂಡ ಬೀಳಿ ಬ್ಲೇಜರ್ ಮೇಲೆ ಮನ್ಮಥನ ರೂಪ ಹೊದ್ದುಕೊಂಡು ನಿಂತಂತೆ ಕಾಣುತ್ತಾರೆ, ಇಟಲಿಯ ಅಮಾಲ್ಫಿ ಕೋಸ್ಟ್​ನಲ್ಲಿ ಈ ಜೋಡಿ ಮದುವೆಯೆಂಬ ಹೊಸ ಪ್ರಯಾಣಕ್ಕೆ ಕಾಲಿಟ್ಟಿದ್ದಾರೆ.  2021ರಿಂದಲೂ ಈ ಜೋಡಿ ಡೇಟಿಂಗ್ ಮೀಟಿಂಗ್ ಅಂತ ಸುತ್ತಾಡುತ್ತಲೇ ಇತ್ತು. ಈಗ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
A post shared by Canadian Weddings (@canadianweddingss)

2019ರಲ್ಲ ಜಾರ್ಜ್‌ ಮತ್ತು ಆಮಿ ರಿಲೇಷನ್‌ಶಿಪ್‌ನಲ್ಲಿದ್ದರು. ಜಾಂಬಿಯಾದಲ್ಲಿ ಪ್ರಪೋಸ್ ಮಾಡಿದ್ದರು. ಜಾರ್ಜ್ ಜೊತೆಗಿನ ಮದುವೆಗೂ ಮುನ್ನವೇ ಆಮಿ ಜಾಕ್ಸನ್ ಗರ್ಭಿಣಿಯಾದರು. ಗರ್ಭಿಣಿಯಾದ ಬಳಿಕ ಜಾರ್ಜ್ ಜೊತೆಗೆ ಆಮಿ ಜಾಕ್ಸನ್ ಎಂಗೇಜ್ಮೆಂಟ್ ಮಾಡಿಕೊಂಡರು.  ಈ ಜೋಡಿಗೆ 2019ರಲ್ಲಿ ಗಂಡು ಮಗ ಜನಿಸಿತು.ಮಗ ಹುಟ್ಟಿದ ಮೇಲೂ ಸಣ್ಣ ಪುಟ್ಟ ಕಿರಿಕಿರಿ ಇದ್ದ ಕಾರಣ ಬ್ರೇಕಪ್ ಮಾಡಿಕೊಂಡರು. ನಂತರ  2022ರಲ್ಲಿ ಆಮಿ ಮತ್ತು ಎಡ್ ವೆಸ್ಟ್ವಿಕ್ ಡೇಟ್‌ ಮಾಡಲು ಶುರು ಮಾಡಿದ್ದರು.
2024 ಜನವರಿ 29ರಂದು ಎಡ್ ವೆಸ್ಟ್ವಿಕ್ ಪ್ರಪೋಸ್ ಮಾಡಿದ್ದ. ನಟಿ ತಮ್ಮ ಮದುವೆ ನಿಶ್ಚಯವಾದಾಗಿನಿಂದಲೂ ಪತಿಯೊಂದಿಗೆ ಸಖತ್ ರೊಮ್ಯಾಂಟಿಕ್ ಆಗಿರುವ ಹಲವಾರು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಿದ್ದಾರೆ. ಸದ್ಯ ಅವರು ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 8 =
Remember me
