ಮುಂಬೈ:ಬ್ರಿಟನ್ ಮೂಲದ ಬಾಲಿವುಡ್ ನಟಿ ಆಮಿ ಜಾಕ್ಸನ್ ಬಗ್ಗೆ ಹೆಚ್ಚು ಪರಿಚಯದ ಅಗತ್ಯವಿಲ್ಲ. ಬಾಲಿವುಡ್‌ನಿಂದ ಸೌತ್ ವರೆಗೂ ತಮ್ಮ ನಟನಾ ಕೌಶಲ್ಯವನ್ನು ಪಸರಿಸಿರುವ ಆಮಿ, ಬಹಳ ದಿನಗಳಿಂದ ಚಿತ್ರರಂಗದಿಂದ ದೂರವಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
ಆಮಿ ಜಾಕ್ಸನ್ ಇತ್ತೀಚೆಗೆ ಒಂದು ಫೋಟೋ ಹಂಚಿಕೊಂಡಿದ್ದು, ಆಮಿ ಈ ಫೋಟೋದಲ್ಲಿರುವ ಲುಕ್‌ನಿಂದಾಗಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಆಮಿಯ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಈಗ ನಟಿಯನ್ನು ‘ಓಪೆನ್‌ಹೈಮರ್’ ಚಿತ್ರದ ಖ್ಯಾತಿಯ ಹಾಲಿವುಡ್ ಸೂಪರ್‌ಸ್ಟಾರ್ ಸಿಲಿಯನ್ ಮರ್ಫಿ ಅವರೊಂದಿಗೆ ಹೋಲಿಸುತ್ತಿದ್ದಾರೆ.
ಬುಧವಾರ, ಆಮಿ ಜಾಕ್ಸನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್​​​ನಲ್ಲಿ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಆಮಿ ಕೆಂಪು ಬಣ್ಣದ ಫಾರ್ಮಲ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಟಿಯ ಮೇಕಪ್ ಲುಕ್ ಮತ್ತು ಹೇರ್ ಕಟ್ ನೋಡಿ ನೆಟ್ಟಿಗರು ಹಾಲಿವುಡ್ ನಟ ಸಿಲಿಯನ್ ಮರ್ಫಿ ಅವರನ್ನು ನೆನಪಿಸಿಕೊಂಡಿದ್ದಾರೆ.

ಆಮಿ ಜಾಕ್ಸನ್ ಅವರ ಈ ಫೋಟೋಗಳಿಗೆ ಕಾಮೆಂಟ್ ಮಾಡಿರುವ ಅನೇಕರು ” ಥೇಟ್ ಮಿಲಿಯನ್ ಮರ್ಫಿಯಂತೆ ಕಾಣುತ್ತಾರೆ.” “ನೀವು ಓಪನ್‌ಹೈಮರ್‌ನಲ್ಲಿ ಅದ್ಭುತವಾಗಿ ಕೆಲಸ ಮಾಡಿದ್ದೀರಿ”, “ಇದು ನಿಮ್ಮ ಮೇಕಪ್ ಅಥವಾ ಶಸ್ತ್ರಚಿಕಿತ್ಸೆಯೇ” ಎಂದು ನನಗೆ ತಿಳಿದಿಲ್ಲ, ಆದರೆ ನಿಮ್ಮ ಮೂಲ ರೂಪದಲ್ಲಿ ನೀವು ಹೆಚ್ಚು ಸುಂದರವಾಗಿ ಕಾಣುತ್ತೀರಿ.” “ನಾವು ಚಿತ್ರಗಳಲ್ಲಿ ನೋಡಿದ ಆಮಿ ಅತ್ಯಂತ ಸುಂದರಿ ” ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.ಆಮಿ ಜಾಕ್ಸನ್ ತಮ್ಮ ಗ್ಲಾಮರಸ್​​​ಗೆ ಹೆಸರುವಾಸಿಯಾಗಿದ್ದಾರೆ . ಪ್ರಸ್ತುತ, ಅವರ ಇತ್ತೀಚಿನ ಲುಕ್ ಚರ್ಚೆಗೆ ಗ್ರಾಸವಾಗಿದೆ. ಆಮಿ ಜಾಕ್ಸನ್ ಹಿಂದಿ ಚಿತ್ರರಂಗದಿಂದ ದಕ್ಷಿಣ ಚಿತ್ರರಂಗದವರೆಗೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಅವರು ದಿ ವಿಲನ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಬಂದೂಕು ತೋರಿಸಿ ಮಹಿಳೆಯರ ಮೇಲೆ ಹಲ್ಲೆ, ಸಾಮೂಹಿಕ ಅತ್ಯಾಚಾರ: ಓರ್ವ ಮಹಿಳೆ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 10 =
Remember me
