ನವದೆಹಲಿ:ಆಸ್ಸಾಂನ ನಿಷೇಧಿತ ದಂಗೆಕೋರರ(ಉಗ್ರರು) ಗುಂಪಾಗಿದ್ದ ನಿಷೇಧಿತ ನ್ಯಾಷನಲ್​ ಡೆಮಾಕ್ರಟಿಕ್​ ಫ್ರಂಟ್​ ಆಫ್​ ಬೋಡೋಲ್ಯಾಂಡ್​ನ ಎಲ್ಲ ಬಣಗಳೊಂದಿಗೆ ಕೇಂದ್ರ ಸರ್ಕಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.
ಕೇಂದ್ರ ಗೃಹ ಸಚಿವ ಅಮಿತ್​ ಷಾ ಒಪ್ಪಂದಕ್ಕೆ ಸಹಿ ಮಾಡಿದ್ದು, ಇದರ ಅನ್ವಯ ಎನ್​ಡಿಎಫ್​ಬಿ ಸಂಘಟನೆಯ 1550 ಕಾರ್ಯಕರ್ತರು 130 ಶಸ್ತ್ರಗಳೊಂದಿಗೆ ಜನವರಿ 30ರಂದು ಶರಣಾಗಲಿದ್ದಾರೆ. ಅವರಿಗೆ ಸರ್ಕಾರ ರಾಜಕೀಯ ಆರ್ಥಿಕ ಸವಲತ್ತುಗಳನ್ನು ಒದಗಿಸಲಿದೆ.
ಈಶಾನ್ಯ ಭಾಗದಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುವ ಸಲುವಾಗಿ ಕೇಂದ್ರಸರ್ಕಾರ, ರಾಜ್ಯಸರ್ಕಾರದೊಂದಿಗೆ ಸೇರಿ ಈ ಬೋಡೊ ಒಪ್ಪಂದಕ್ಕೆ ಸಹಿ ಹಾಕಿದೆ.
ಬೋಡೋಲ್ಯಾಂಡ್​ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನಡೆಸುತ್ತಿದ್ದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ನಿಷೇಧಿತ ಸಂಘಟನೆಯ ಆಲ್​ ಬೋಡೊ ಸ್ಟುಡೆಂಟ್​ ಯೂನಿಯನ್​ (ಎಬಿಎಸ್​ಯು)ಕೂಡ ಈ ಒಪ್ಪಂದಕ್ಕೆ ಸಹಿದಾರನಾಗಿದೆ.ಕೇಂದ್ರ ಗೃಹಸಚಿವ ಅಮಿತ್​ ಷಾ ಮತ್ತು ಆಸ್ಸಾಂ ಮುಖ್ಯಮಂತ್ರಿ ಸರ್ಬಾನಂದಾ ಸೊನೊವಾಲ್​ ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ನಿಷೇಧಿತ ನ್ಯಾಷನಲ್​ ಡೆಮಾಕ್ರಟಿಕ್​ ಫ್ರಂಟ್​ ಆಫ್​ ಬೋಡೋಲ್ಯಾಂಡ್​ ಸಂಘಟನೆಯ ಎಲ್ಲ ಬಣಗಳ ಪ್ರತಿನಿಧಿಗಳೂ ಇದ್ದರು.
ಇಂದು ಕೇಂದ್ರ ಸರ್ಕಾರ, ಆಸ್ಸಾಂ ಸರ್ಕಾರ ಮತ್ತು ಬೋಡೊ ಪ್ರತಿನಿಧಿಗಳು ಒಂದು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಅಗ್ರಿಮೆಂಟ್​ನಿಂದ ಆಸ್ಸಾಂ ರಾಜ್ಯ ಮತ್ತು ಬೋಡೊ ಜನಾಂಗದವರ ಬದುಕು ಹಸನಾಗಲಿದೆ. ಬೋಡೊ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಾವು ಕ್ರಮ ಕೈಗೊಳ್ಳುವ ಜತೆ, ಜನಾಂಗದವರಿಗೆ ಆರ್ಥಿಕ ಮತ್ತು ರಾಜಕೀಯ ಸವಲತ್ತುಗಳನ್ನು ನೀಡುತ್ತೇವೆ ಎಂದು ಅಮಿತ್​ ಷಾ ಹೇಳಿದ್ದಾರೆ. ಅಲ್ಲದೆ, ನಾವು ನೀಡಿದ ಎಲ್ಲ ಭರವಸೆಗಳನ್ನು ಕೊಟ್ಟ ಸಮಯದ ಮಿತಿಯೊಳಗೆ ಈಡೇರಿಸುತ್ತೇವೆ ಎಂದು ತಿಳಿಸಿದ್ದಾರೆ.
ಬೋಡೋಲ್ಯಾಂಡ್​ ಪ್ರತ್ಯೇಕ ರಾಜ್ಯವಾಗಬೇಕು ಅಥವಾ ಕೇಂದ್ರಾಡಳಿತ ಪ್ರದೇಶವಾಗಬೇಕು ಎಂಬುದು ಈ ಸಂಘಟನೆಯ ಬೇಡಿಕೆ. ಇದಕ್ಕಾಗಿ ಹಿಂಸಾತ್ಮಕ ಮಾರ್ಗವನ್ನು ಹಿಡಿದು ಚಳವಳಿಯಲ್ಲಿ ತೊಡಗಿಕೊಂಡಿರುವ ಎನ್​ಡಿಎಫ್​ಬಿ ಸಂಘಟನೆ ಉಗ್ರ ಗುಂಪು ಎಂದೆನಿಸಿಕೊಂಡಿದೆ. ಇವರ ಹೋರಾಟದಿಂದಾಗಿ ಅದೆಷ್ಟೋ ಜನರ ಪ್ರಾಣ ಹೋಗಿದೆ. ಸಾರ್ವಜನಿಕ, ಖಾಸಗಿ ಆಸ್ತಿಪಾಸ್ತಿಗಳು ನಾಶವಾಗಿದೆ. ಈಶಾನ್ಯ ಭಾಗದಲ್ಲಿ ಶಾಂತಿ ಕದಡಿದೆ.ಕಳೆದ 27 ವರ್ಷಗಳಲ್ಲಿ ಇದು ಮೂರನೇ ಬೋಡೊ ಒಪ್ಪಂದ. ಮೊದಲ ಬಾರಿಗೆ 1993ರಲ್ಲಿ ಆಲ್​ ಬೋಡೊ ಸ್ಟುಡೆಂಟ್​​ ಯೂನಿಯನ್​ ಜತೆ ಒಪ್ಪಂದವಾಗಿತ್ತು. ಅದರ ಅನ್ವಯ ಸೀಮಿತ ರಾಜಕೀಯ ಅಧಿಕಾರ ಹೊಂದಿರುವ ಬೋಡೋಲ್ಯಾಂಡ್​ ಸ್ವಾಯತ್ತ ಮಂಡಳಿ ರಚನೆಯಾಗಿತ್ತು.
ಹಾಗೇ ಎರಡನೇ ಬೋಡೊ ಒಪ್ಪಂದಕ್ಕೆ ಸಹಿ ಬಿದ್ದಿದ್ದು 2003ರಲ್ಲಿ. ಅದು ಬೋಡೊ ಲಿಬರೇಶನ್​ ಟೈಗರ್ಸ್​ ಎಂಬ ಉಗ್ರ ಸಂಘಟನೆಯೊಂದಿಗೆ ಆಗಿತ್ತು. ಇದಾದ ಬಳಿಕ ಬೋಡೋಲ್ಯಾಂಡ್​ ಪ್ರಾದೇಶಿಕ ಮಂಡಳಿ ರಚನೆ ಮಾಡಲಾಗಿತ್ತು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
