ಪುಣೆ:ವಿಮಾನ ನಿಲ್ದಾಣದ ರನ್​ವೇನಲ್ಲಿ ಕಾಣಿಸಿಕೊಂಡ ವ್ಯಕ್ತಿ ಮತ್ತು ಜೀಪನ್ನು ರಕ್ಷಿಸುವ ಸಲುವಾಗಿ ಪೈಲೆಟ್​ ವಿಮಾನವನ್ನು ಬೇಗ ಮೇಲೆತ್ತಿದ್ದು, ಆಗ ವಿಮಾನದ ಕೆಳಮೈಗೆ ಹಾನಿಯಾಗಿರುವ ಘಟನೆ ಪುಣೆಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಪುಣೆಯಿಂದ ಶ್ರೀನಗರ ಹೊರಟಿದ್ದ ಎ321 ವಿಮಾನವು ನಿಲ್ದಾಣದಿಂದ ಟೇಕ್​ ಆಫ್​ ಮಾಡಿಕೊಂಡು ರನ್​ ವೇನಲ್ಲಿ ಹೋಗುತ್ತಿತ್ತು. ಆದರೆ ರನ್​ವೇನಲ್ಲಿ ಒಬ್ಬ ವ್ಯಕ್ತಿ ಮತ್ತು ಜೀಪು ಕಾಣಿಸಿಕೊಂಡ ಹಿನ್ನೆಲೆ ವ್ಯಕ್ತಿಯನ್ನು ರಕ್ಷಿಸುವ ಸಲುವಾಗಿ ವಿಮಾನದ ಪೈಲೆಟ್​ ನಿರ್ದಿಷ್ಟ ಅವಧಿಗಿಂತ ಮೊದಲೇ ವಿಮಾನವನ್ನು ರನ್​ವೇನಿಂದ ಮೇಲಕ್ಕೆತ್ತಿದ್ದಾನೆ. ಹಾಗಿದ್ದರೂ ವಿಮಾನದ ಕೆಳ ಮೇಲ್ಮೈಗೆ ಜೀಪು ತಾಗಿದ್ದು ವಿಮಾನಕ್ಕೆ ಸ್ವಲ್ಪ ಪ್ರಮಾಣದ ಹಾನಿಯುಂಟಾಗಿದೆ.
“ರನ್​ವೇನಲ್ಲಿ 222ಕಿ.ಮೀ. ವೇಗದಲ್ಲಿ ಹೊರಟಿದ್ದ ವಿಮಾನಕ್ಕೆ ರನ್​ವೇನಲ್ಲಿ ವ್ಯಕ್ತಿ ಮತ್ತು ಜೀಪು ಕಾಣಿಸಿಕೊಂಡಿದ್ದರಿಂದ ಪೈಲೆಟ್​ ತಕ್ಷಣವೇ ವಿಮಾನವನ್ನು ಮೇಲಕ್ಕೆತ್ತಿದ್ದಾರೆ. ಆದರೂ ಏನೂ ತೊಂದರೆಯಾಗದೆ ವಿಮಾನವು ದೆಹಲಿಗೆ ಬಂದಿಳಿದಿದೆ” ಎಂದು ಡೈರೆಕ್ಟರೇಟ್​ ಜನರಲ್​ ಆಫ್​ ಸಿವಿಲ್​ ಏವಿಯೇಷನ್​ (ಡಿಜಿಸಿಎ) ತಿಳಿಸಿದ್ದಾರೆ.
ಸದ್ಯ ವಿಮಾನವನ್ನು ಸೇವೆಯಿಂದ ಹಿಂಪಡೆಯಲಾಗಿದ್ದು ತನಿಖೆಗೆ ಒಳಪಡಿಸಲಾಗಿದೆ. ಪುಣೆಯ ಏರ್​ ಟ್ರಾಫಿಕ್​ ಕಂಟ್ರೋಲ್​ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 15 =
Remember me
