
ಗಾಂಧಿನಗರ:ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಬೇಕೆಂದರೆ ಸಂಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು. ಇಲ್ಲವಾದರೆ ಮುಂದೆ ಕೆಲಸ ಮಾಡುವಾಗ ಹಲವು ಕಷ್ಟಗಳು ನಮ್ಮನ್ನಾವರಿಸಬಹುದು. ಆದರೆ ಸಂಸ್ಥೆಯ ಬಗ್ಗೆ ತಿಳಿದುಕೊಳ್ಳದ ಯುವತಿಯರು ಕೆಲಸಕ್ಕೆ ಸೇರಿ, ಪೋರ್ನ್​ ನಟಿಯರಾಗಿ ಬದಲಾದ ಘಟನೆ ಗುಜರಾತ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಟ್ರೋಫಿ ಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ವ್ಯಕ್ತಿಗೇ ಸಿಕ್ಕಿತು ಗ್ರ್ಯಾಮಿ ಅವಾರ್ಡ್ಸ್​​ಗೆ ನಾಮಿನೇಶನ್​ ಭಾಗ್ಯ
ರಾಜ್ಯದ ಅಕೋಟಾ ಏರಿಯಾದಲ್ಲಿ ಆರ್ಕಿಟೆಕ್ ಸಂಸ್ಥೆಯೊಂದಿತ್ತು. ನಿಲೇಶ್​ ಗುಪ್ತಾ ಒಡೆತನದ ಆ ಸಂಸ್ಥೆಯಲ್ಲಿ ಯುವತಿಯರನ್ನು ಆರ್ಕಿಟೆಕ್​ ಕೆಲಸ ಮಾಡಲು ಸೇರಿಸಿಕೊಳ್ಳಲಾಗುತ್ತಿತ್ತು. ಕೆಲಸದ ಸಂದರ್ಶನ ಮಾಡುವ ಸಮಯದಲ್ಲಿ, ‘ನೀವು ಕ್ಲೈಂಟ್​ಗಳೊಂದಿಗೆ ಚಾಟ್​ ಮಾಡಬೇಕಾಗುತ್ತದೆ’ ಎಂದು ಹೇಳಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು. ನಂತರ ಅವರನ್ನು ಕ್ಲೈಂಟ್​ ಚಾಟ್​ ಬದಲಾಗಿ ಸೆಕ್ಸ್​ ಚಾಟ್​ ಮತ್ತು ವಿಡಿಯೋ ಕಾಲ್​ ಪೋರ್ನೋಗ್ರಫಿಗೆ ಬಳಸಿಕೊಳ್ಳಲಾಗುತ್ತಿತ್ತು.
ನಿಲೇಶ್​ ಗುಪ್ತಾ ಆಗ್ರ ಮೂಲದವನು. 44 ವರ್ಷದ ಆತನಿಗೆ 2012ರಲ್ಲಿ ಮೊದಲನೇ ಪತ್ನಿಯಿಂದ ವಿಚ್ಛೇದನವಾಗಿದೆ. ಅದಾದ ನಂತರ ರಷ್ಯಾ ಮೂಲದ ಮಹಿಳೆಯನ್ನು ಮದುವೆಯಾದ ಆತ ಈ ಆರ್ಕಿಟೆಕ್​ ಸಂಸ್ಥೆಯನ್ನು ತೆರೆದು ಕೆಲಸ ಆರಂಭಿಸಿದ್ದಾನೆ. ಕಳೆದ ವರ್ಷ ರಷ್ಯಾಕ್ಕೆ ತೆರಳಿದ್ದ ಆತನ ಪತ್ನಿ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮರಳಿ ವಾಪಾಸು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಆ ಪ್ರದೇಶದಲ್ಲಿ ಕಾನೂನು ಬಾಹಿರ ಕೆಲಸಗಳು ನಡೆಯುತ್ತಿರುವುದಾಗಿ ಪೊಲೀಸ್​ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿಟ್ಟ ಪೊಲೀಸರು ಇದೀಗ ಸಂಸ್ಥೆಯ ನಿಜ ಬಣ್ಣವನ್ನು ಬೆಳಕಿಗೆ ತಂದಿದ್ದಾರೆ.
ಇದನ್ನೂ ಓದಿ:25 ವರ್ಷ ಹಿಂದೆ ಕೊಲೆ ಮಾಡಿದ್ದ ವ್ಯಕ್ತಿ ಈಗ ಸಿಕ್ಕಿಬಿದ್ದ; ಕೇಸ್ ಸಾಲ್ವ್​ ಆದ ಬಗೆಯೇ ರೋಚಕ
ಈ ಸಂಸ್ಥೆಯು ಯುರೋಪ್​ನ ಪೋರ್ನ್​ ವೆಬ್​ಸೈಟ್​ ಒಂದಕ್ಕೆ ವಿಡಿಯೋಗಳನ್ನು ನೀಡುತ್ತಿತ್ತು ಎನ್ನಲಾಗಿದೆ. ಗ್ರಾಹಕರ ಗುರುತನ್ನು ಮರೆಮಾಡಲು ವೆಬ್‌ಸೈಟ್ ಟೋಕನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿತ್ತು. ನಂತರ ಟೋಕನ್​ಗಳನ್ನು ಬಿಟ್​ಕಾಯಿನ್​ಗಳಾಗಿ ಪರಿವರ್ತಿಸಲಾಗುತ್ತಿತ್ತು ಎನ್ನಲಾಗಿದೆ.
ಸಂಸ್ಥೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಎರಡು ಸೆಕ್ಟ್​ ಟಾಯ್​, 11 ಲ್ಯಾಪ್​ಟಾಪ್​, 2 ವೆಬ್​ಕಾಮ್​, 2 ರೂಟರ್​, 2 ಟಿವಿ, 1 ಮೊಬೈಲ್​ ಮತ್ತು ಆರೋಪಿಯ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಚೇರಿಯಲ್ಲಿ 19 ಯುವತಿಯರಿಗೆ ಸೇರಿರುವ 19 ಪಾಸ್​ಪೋರ್ಟ್​ಗಳು ಸಿಕ್ಕಿವೆ ಎನ್ನಲಾಗಿದೆ. (ಏಜೆನ್ಸೀಸ್​)
ಮದುವೆಯಾದ ಕ್ರಷ್​​ನೊಂದಿಗೆ ಅಕ್ರಮ ಸಂಬಂಧ ಹೊಂದಲು ಒತ್ತಾಯಿಸಿದ; ಒಪ್ಪದಿದ್ದಾಗ ಆತ ಮಾಡಿದ್ದೇನು?
VIDEO| ರಸ್ತೆ ಮೇಲೆ ರಾಜಾರೋಷವಾಗಿ ಓಡಾಡಿದ ಚಿರತೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿರತೆಯ ಓಡಾಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − nine =
Remember me
