ಚೆನ್ನೈ:ಐಐಟಿ ಮದ್ರಾಸ್​ ಕಾಲೇಜಿನ ಮಹಿಳಾ ಶೌಚಗೃಹದಲ್ಲಿ ಅಸಿಸ್ಟೆಂಟ್​ ಪ್ರೊಫೆಸರ್​ ಒಬ್ಬ ತನ್ನ ಮೊಬೈಲ್​ ಕ್ಯಾಮರಾ ಆನ್​ ಮಾಡಿ ಇಟ್ಟುಬಂದಿರುವ ಘಟನೆ ನಡೆದಿದೆ. ಆರೋಪಿಯು ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವುದು ವರದಿಯಾಗಿದೆ.
ಬುಧವಾರ ಸಂಜೆ ಕಾಲೇಜಿನ ಮಹಿಳಾ ಶೌಚಗೃಹಕ್ಕೆ ಪಿಎಚ್​ಡಿ ವಿದ್ಯಾರ್ಥಿನಿಯೊಬ್ಬಳು ಹೋದಾಗ ಅಲ್ಲಿ ಮೊಬೈಲ್​ ಇರುವುದು ಕಂಡುಬಂದಿದೆ. ಆ ಮೊಬೈಲ್​ ಕ್ಯಾಮರಾ ತನ್ನತ್ತಲೇ ತಿರುಗಿರುವುದನ್ನು ಗಮನಿಸಿದ ವಿದ್ಯಾರ್ಥಿನಿ ತಕ್ಷಣ ಆ ಮೊಬೈಲ್​ನ್ನು ತೆಗೆದು ನೋಡಿದ್ದಾಳೆ. ಆಗ ಅದರಲ್ಲಿ ಕ್ಯಾಮರಾ ಆನ್​ ಇರುವುದು ಗೊತ್ತಾಗಿದೆ. ಕೂಡಲೇ ಪುರುಷರ ಶೌಚಗೃಹದತ್ತ ಹೋದ ಮಹಿಳೆ ಅಲ್ಲಿನ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಸೆಕ್ಯುರಿಟಿಯನ್ನು ಕರೆದಿದ್ದಾಳೆ. ಸೆಕ್ಯುರಿಟಿ ಬಂದು ಶೌಚಗೃಹದೊಳಗೆ ನೋಡಿದಾಗ ಅಲ್ಲಿ ಆ ಮೊಬೈಲ್​ ಇಟ್ಟ ವ್ಯಕ್ತಿ​ ಇರುವುದು ಪತ್ತೆಯಾಗಿದೆ.
ಆರೋಪಿಯನ್ನು ಏರೋಸ್ಪೇಸ್​ ಇಂಜಿನಿಯರಿಂಗ್​ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ​ ಸುಭಾಮ್​ ಬ್ಯಾನರ್ಜಿ ಎಂದು ಪೊಲೀಸರು ಗುರುತಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + twenty =
Remember me
