ನವದೆಹಲಿ:ಕರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಹೇರಲಾಗಿರುವ ಲಾಕ್​ಡೌನ್​ನಿಂದಾಗಿ ಇಡೀ ದೇಶದ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ಪ್ರತಿದಿನ ಸುಮಾರು 4.64 ಬಿಲಿಯನ್ ಡಾಲರ್ (ಸುಮಾರು 35 ಸಾವಿರ ಕೋಟಿ ರೂ.) ನಷ್ಟವಾಗುತ್ತಿದೆ.
21 ದಿನಗಳಲ್ಲಿ ಭಾರತಕ್ಕೆ ಆಗಲಿರುವ ಒಟ್ಟು ನಷ್ಟ 98 ಬಿಲಿಯನ್ ಡಾಲರ್ (7.35 ಲಕ್ಷ ಕೋಟಿ ರೂ.) ಎಂದು ಅಕ್ಯೂಟ್ ರೇಟಿಂಗ್ಸ್ ಮತ್ತು ಸಂಶೋಧನಾ ಸಂಸ್ಥೆ ಗುರುವಾರ ಅಂದಾಜು ಮಾಡಿದೆ. ಏಪ್ರಿಲ್ 15ರಿಂದ ರಾಷ್ಟ್ರವ್ಯಾಪಿ ಲಾಕ್​ಡೌನ್ ತೆರವು ಮಾಡಲಾಗುತ್ತದೆ. ಆದರೆ ಆರ್ಥಿಕ ಚಟುವಟಿಕೆಗಳು ದೀರ್ಘ ಕಾಲದ ವರೆಗೆ ಅಸ್ತವ್ಯಸ್ತಗೊಳ್ಳುವುದು ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಅವಲಂಬಿಸಿರುತ್ತದೆ. ಪ್ರಸ್ತುತ ದೇಶ ಹಾಗೂ ಜಗತ್ತಿನಾದ್ಯಂತ ಆರ್ಥಿಕತೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ.
2020ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈಗಾಗಲೇ ಭವಿಷ್ಯ ನುಡಿದಿದೆ. 2020-21ನೇ ಆರ್ಥಿಕ ವರ್ಷದ ಏಪ್ರಿಲ್-ಜೂನ್ ಅವಧಿಯ ಜಿಡಿಪಿಯಲ್ಲಿ (ಒಟ್ಟು ದೇಶೀಯ ಉತ್ಪನ್ನ) ಕುಸಿತವಾಗುವ ಸಂಭವಿಸಲಿದೆ ಎಂದು ಅಕ್ಯೂಟ್ ರೇಟಿಂಗ್ಸ್ ಆತಂಕ ವ್ಯಕ್ತಪಡಿಸಿದೆ.
ಪರಿಸ್ಥಿತಿ ಸುಧಾರಿಸಿದರೆ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಸ್ವಲ್ಪ ಬೆಳವಣಿಗೆ ಆಗಬಹುದು ಎಂದು ಅಕ್ಯೂಟ್ ಸಿಇಒ ಶಂಕರ್ ಚಕ್ರವರ್ತಿ ಹೇಳಿದ್ದಾರೆ. ಕೈಗಾರಿಕಾ ಚಟುವಟಿಕೆಗಳ ಮೇಲೆ ಲಾಕ್​ಡೌನ್ ಪರಿಣಾಮ ತೀವ್ರವಾಗಿದ್ದು ಔಷಧ, ಅನಿಲ, ವಿದ್ಯುತ್ ಮತ್ತು ವೈದ್ಯಕೀಯ ಸಲಕರಣೆಗಳ ಕ್ಷೇತ್ರ ಬಿಟ್ಟು ಉಳಿದ ಎಲ್ಲ ವಲಯಗಳಲ್ಲಿ ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆ ಕುಂಠಿತವಾಗಲಿದೆ.
ಆಯುರ್ವೇದ, ಹೋಮಿಯೋಪಥಿ ಮೂಲಕ ಕರೊನಾ ಸೋಂಕು ಗೆದ್ದ ಬ್ರಿಟನ್​ ರಾಜ, ಬೆಂಗಳೂರಿನಿಂದ ಚಿಕಿತ್ಸೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − thirteen =
Remember me
