ಚೆನ್ನೈ:ಕರೊನಾ ಅನೇಕ ಕುಟುಂಬಗಳನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಅದೆಷ್ಟೋ ಕುಟುಂಬಗಳು ತಮ್ಮ ಆಧಾರ ಸ್ಥಂಬಗಳನ್ನೇ ಕಳೆದುಕೊಂಡು ಅನಾಥವಾಗಿಬಿಟ್ಟಿವೆ. ಅದೇ ರೀತಿ ಮನೆಯ ಸರ್ವಸ್ವವಾಗಿದ್ದ ಮಗಳನ್ನು ಕರೊನಾಗೆ ಬಲಿಕೊಟ್ಟ ತಂದೆಯೊಬ್ಬ ಅದೇ ನೋವಿನಿಂದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಅಪ್ಪ ಪಿ ಕೃಷ್ಣನ್​(82) ಮತ್ತು ಮಗಳು ಶಶಿಕಲಾ (32)ಳದ್ದೇ ಒಂದು ಕುಟುಂಬ. ಮಗಳು ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್​ ನರ್ಸ್​ ಆಗಿ ಕೆಲಸ ಮಾಡಿ, ಅಪ್ಪನನ್ನು ನೋಡಿಕೊಳ್ಳುತ್ತಿದ್ದಳು. ಕರೊನಾ ಲಸಿಕೆಯ ಎರಡೂ ಡೋಸೇಜ್​ ಪಡೆದುಕೊಂಡಿದ್ದರು ಶಶಿಕಲಾಗೆ ಕೆಲ ವಾರಗಳ ಹಿಂದೆ ಕರೊನಾ ಹತ್ತಿಬಿಟ್ಟಿದೆ. ಮೊದಲಿಗೆ ಹೋಂ ಐಸೋಲೇಷನ್​ಗೆ ಒಳಗಾಗಿದ್ದ ಅವಳ ಆರೋಗ್ಯ ಇನ್ನಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಕಷ್ಟು ಕಾಲ ಕರೊನಾ ಜತೆಗೆ ಹೋರಾಡಿದ ಶಶಿಕಲಾ ಇತ್ತೀಚೆಗೆ ಅದೇ ಸೋಂಕಿಗೆ ಬಲಿಯಾಗಿದ್ದಾಳೆ. ಆ ನೋವಿನಿಂದ ಬಳಲುತ್ತಿದ್ದ ತಂದೆ ಕೃಷ್ಣನ್​ ಗುರುವಾರದಂದು ಅಪಾರ್ಟ್​ಮೆಂಟ್​ನ ಮೊದಲನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೆಳಕ್ಕೆ ಬಿದ್ದ ಕೃಷ್ಣನ್ ಅಳಲನ್ನು ಕೇಳಿಸಿಕೊಂಡು ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಕೈ ಮತ್ತು ಕಾಲುಗಳಿಗೆ ಬಲವಾಗಿ ಪೆಟ್ಟು ಬಿದ್ದಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)
ಗಂಡ ಹೆಂಡತಿಯ ಜಗಳಕ್ಕೆ ಮುದ್ದು ಕಂದ ಬಲಿ! ಮಲತಂದೆಯಿಂದ ನಡೆದೇ ಹೋಯಿತು ಘೋರ ಕೃತ್ಯ

ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

ಅಲೆದಾಡುತ್ತಿದ್ದ ವಿದೇಶಿಗನನ್ನು ಜರ್ಮನಿಗೆ ಕಳುಹಿಸಿದ ಪೊಲೀಸರು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 7 =
Remember me
