ಲಖನೌ:ಹುಟ್ಟಿದಾಗಿನಿಂದ ಹೆತ್ತು ಹೊತ್ತು ಸಾಕಿದ ತಂದೆ ತಾಯಿಯನ್ನು ಮದುವೆಯ ನಂತರ ಬಿಟ್ಟು ಬರುವ ಹೆಣ್ಣ ಮಕ್ಕಳು ತನ್ನ ಪತಿಯ ತಂದೆ ತಾಯಿಯನ್ನೇ ಅಪ್ಪ ಅಮ್ಮನ ರೂಪದಲ್ಲಿ ನೋಡಲು ಬಯಸುತ್ತಾರೆ. ಆದರೆ ಕೆಲವು ಪಾಪಿಗಳು ಸೊಸೆಯನ್ನು ಮಗಳ ರೂಪದಲ್ಲಿ ನೋಡುವುದನ್ನು ಬಿಟ್ಟು ಚಿತ್ರಹಿಂಸೆ ಕೊಡಲಾರಂಭಿಸುತ್ತಾರೆ. ಇಲ್ಲೊಬ್ಬ ಮಾವ, ಸೊಸೆಯನ್ನು ಅತ್ಯಾಚಾರ ಮಾಡಿದ್ದಷ್ಟೇ ಅಲ್ಲದೆ ಅದನ್ನು ಪ್ರಶ್ನಿಸಿದ ಮಗನನ್ನೂ ಕೊಂದು ಹಾಕಿದ್ದಾನೆ.
ಇದನ್ನೂ ಓದಿ:ಆತ ಸತ್ತು ನಾಲ್ಕು ವರ್ಷವಾಗಿತ್ತು; ಆದರೂ ಆತನ ಹೆಸರಿಗೆ ಸರ್ಕಾರದಿಂದ ಹಣ ಬಂತು, ವಿತ್​ಡ್ರಾ ಆಯ್ತು
ಉತ್ತರ ಪ್ರದೇಶದ ಮೊರಾದಾಬಾದ್​ ಜಿಲ್ಲೆಯ ಮಜೋಲಾದ ಹನುಮಾನ್​ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಇತ್ತೀಚೆಗೆ ಮನೆಯವರೆಲ್ಲರು 56 ವರ್ಷದ ಮಾವ ಮತ್ತು ಸೊಸೆಯನ್ನು ಮನೆಯಲ್ಲೇ ಬಿಟ್ಟು ಮದುವೆಗೆ ಹೋಗಿದ್ದರು. ಈ ಸಮಯವನ್ನು ತನ್ನ ಕಾಮದಾಸೆಗೆ ಬಳಸಿಕೊಂಡ ಮಾವ ಸೊಸೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಮಾವನ ದುಷ್ಕೃತ್ಯದಿಂದಾಗಿ ಅಘಾತಕ್ಕೊಳಗಾಗಿದ್ದ ಸೊಸೆ ಶನಿವಾರದಂದು ತನ್ನ ಪತಿ ಮತ್ತು ಅತ್ತೆಯ ಎದುರು ಮಾವ ಮಾಡಿದ ಕೃತ್ಯವನ್ನು ಬಿಡಿಸಿ ಹೇಳಿದ್ದಾಳೆ. ಈ ವಿಚಾರವಾಗಿ ಅಪ್ಪ ಮಗನ ನಡುವೆ ಜಗಳ ಆರಂಭವಾಗಿದೆ. ತಪ್ಪು ಮಾಡಿರುವ ಅಪ್ಪನನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಮಗ ಬೆದರಿಸಿದ್ದಾನೆ. ಜಗಳ ತಾರಕಕ್ಕೇರುವಷ್ಟರಲ್ಲಿ ಕಿರಿಯ ಮಗ ಬಂದಿದ್ದು ಆತ ತಂದೆಯ ಬೆಂಬಲಕ್ಕೆ ನಿಂತಿದ್ದಾನೆ. ಅಷ್ಟರಲ್ಲಾಗಲೇ ಸಿಟ್ಟು ನೆತ್ತಿಗೇರಿದ್ದ ತಂದೆ, ತನ್ನ ಬಳಿ ಇದ್ದ ಪಿಸ್ತೂಲಿನಿಂದ ಮಗನಿಗೆ ಗುಂಡು ಹಾರಿಸಿದ್ದಾನೆ. ತಪ್ಪೇ ಮಾಡದ ಮಗನ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಇದನ್ನೂ ಓದಿ:ಲಿಫ್ಟ್​ನ ಎರಡು ಬಾಗಿಲ ಮಧ್ಯೆ ಸಿಲುಕಿ ಐದು ವರ್ಷದ ಬಾಲಕ ಸಾವು; ಬೆಚ್ಚಿ ಬೀಳಿಸುತ್ತೆ ಫೋಟೋ
ಸದ್ಯ ಅಪ್ಪನ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿದೆ. ಸಹಾಯಕ್ಕೆ ನಿಂತ ಕಿರಿಯ ಮಗನ ಮೇಲೂ ಪ್ರಕರಣ ದಾಖಲಾಗಿದೆ. ಸೊಸೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅತ್ಯಾಚಾರದ ವರದಿ ಬಂದ ನಂತರ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಇನ್ನು ಮುಂದೆ ರೈಲ್ವೆ ನಿಲ್ದಾಣದಲ್ಲಿ ಟೀ ಕುಡಿಯೋಕೆ ಸಿಗಲ್ಲ ಪ್ಲಾಸ್ಟಿಕ್​ ಕಪ್​; ಮಣ್ಣಿನ ಲೋಟದಲ್ಲೇ ಸವಿಯಿರಿ ಬಿಸಿಬಿಸಿ ಚಹಾ!

ಜೈಲಿನ ಅಧಿಕಾರಿಗೇ ಗ್ರೀಟಿಂಗ್​ ಕೊಟ್ಟ ರಾಗಿಣಿ; ಇಬ್ಬರ ನಡವಳಿಕೆ ಹೇಗಿದೆ ಗೊತ್ತಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + 10 =
Remember me
