ಕಠ್ಮಂಡು:ಪ್ರಪಂಚದ ಮೂರನೇ ಅತಿ ಎತ್ತರ ಶಿಖರ ಏರುತ್ತಿರುವಾಗಲೇ ಭಾರತದ ಪರ್ವತಾರೋಹಿ ಸಾವನ್ನಪ್ಪಿದ್ದಾರೆ. ಸದ್ಯ ಈ ಪರ್ವತ ನೆರೆಯ ದೇಶ ನೇಪಾಳಕ್ಕೆ ಸೇರಿದೆ.
ಹಿಮಾಲಯ ಪರ್ವತವನ್ನು ಹೊಂದಿಕೊಂಡಿರುವ ಕಾಂಚನಜುಂಗಾ ಪರ್ವತ ಏರುವಾಗಲೇ ಪರ್ವತಾರೋಹಿ ನಾರಾಯಣ ಐಯ್ಯರ್​ (52) ಸಾವನ್ನಪ್ಪಿದ್ದು, ಈ ವರ್ಷ ಮೃತಪಟ್ಟ ಮೂವರು ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದಾರೆ.
8200 ಮೀಟರ್​ ಎತ್ತರವಿರುವ ಕಾಂಚನಜುಂಗಾ ಪರ್ವತವನ್ನು ಪರ್ವತಾರೋಹಿಗಳ ತಂಡ ಏರುತ್ತಿತ್ತು. ಮಾರ್ಗ ಮಧ್ಯದಲ್ಲೇ ಸುಸ್ತಾಗಿ ಬಿದ್ದ ನಾರಾಯಣ ಅಯ್ಯರ್​ ಅಲ್ಲೇ ಅಸುನೀಗಿದ್ದಾರೆ, ಇವರಿಗೆ ಇಬ್ಬರಿಂದ ಮಾರ್ಗದರ್ಶನ ನೀಡಲಾಗುತ್ತಿತ್ತು ಎಂದು ತಂಡದ ಪ್ರಮುಖ ನವೀಶ್​ ಕರ್ಕಿ ತಿಳಿಸಿದ್ದಾರೆ.
ಸದ್ಯ ಅವರ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದು, ಪರ್ವತದಿಂದ ಮೃತದೇಹವನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಇನ್ನು ಈ ವರ್ಷ 68 ವಿದೇಶಿ ಪರ್ವತಾರೋಹಿಗಳಿಗೆ ಮಾತ್ರ ಪರ್ವತ ಏರಲು ನೇಪಾಳ ಸರ್ಕಾರ ಅನುಮತಿ ನೀಡಿತ್ತು ಎಂದು ಅವರು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − four =
Remember me
