ಕೊಚ್ಚಿ:ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಕಾವು ಜೋರಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಮೂರು ಹಂತಗಳಲ್ಲಿ ಲೋಕಸಭೆ ಚುನಾವಣೆ ಮುಗಿದಿದೆ. ಮತದಾರರು ತಮ್ಮ ಊರುಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಂದು (ಮೇ 13) ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ.
ಮತದಾನ ಮಾಡುವಾಗ ಚುನಾವಣಾಧಿಕಾರಿಗಳು ಮತದಾರನ ಬೆರಳಿಗೆ ಶಾಯಿ ಗುರುತು ಹಾಕುವುದು ಎಲ್ಲರಿಗೂ ತಿಳಿದಿದೆ. ಈ ಶಾಯಿ ಗುರುತು ಮೋಸದ ಮತಗಳನ್ನು ತಡೆಯುತ್ತದೆ. ಪ್ರತಿ ಚುನಾವಣೆಯಲ್ಲೂ ಪ್ರತಿಯೊಬ್ಬ ಮತದಾರನ ಬೆರಳಿಗೂ ಈ ಶಾಯಿ ಗುರುತನ್ನು ಹಾಕುತ್ತಾರೆ. ಈ ಶಾಯಿಯ ಕಲೆಯು ಕೆಲವು ತಿಂಗಳವರೆಗೆ ಇರುತ್ತದೆ. ಆದರೆ ಇಲ್ಲೊಬ್ಬ ಮಹಿಳೆಗೆ ಈ ಶಾಯಿಯ ಗುರುತು ಸುಮಾರು 9 ವರ್ಷಗಳಿಂದಲೂ ಇದೆ. ಇದರಿಂದಾಗಿ ಮೂರು ಬಾರಿ ಮತದಾನ ಮಾಡಲು ಸಹ ಸಾಧ್ಯವಾಗಿಲ್ಲ. 9 ವರ್ಷಗಳಿಂದ ಆಕೆಯ ಬೆರಳಿನ ಶಾಯಿಯ ಕಲೆ ಮಾಸಿಲ್ಲ. ಕೊನೆಗೆ ಆಕೆ ಏನು ಮಾಡಿದಳು ಎಂಬುದನ್ನು ನಾವೀಗ ತಿಳಿಯೋಣ.
ಮತದಾರರ ಬೆರಳಿನ ಶಾಯಿ ಕಲೆಯಿಂದ ಅವರು ಮತ ಚಲಾಯಿಸಿದ್ದಾರೋ ಇಲ್ಲವೋ ಎನ್ನುವುದನ್ನು ನಿಖರವಾಗಿ ಹೇಳಬಹುದು. ಚುನಾವಣಾ ಮತದಾನದ ದಿನದಂದು ಮತ ಚಲಾಯಿಸಲು ಹೋಗುವ ಮತದಾರರು ತಮ್ಮ ಎಡಗೈ ತೋರು ಬೆರಳಿಗೆ ಶಾಯಿಯ ಗುರುತು ಹಾಕಿಸಿಕೊಳ್ಳುತ್ತಾರೆ. ಈ ಕಲೆ ಕೆಲವು ದಿನಗಳ ಕಾಲ ಹಾಗೆಯೇ ಇರುತ್ತದೆ. ನಂತರ ಅದು ಅಳಿಸಿ ಹೋಗುತ್ತದೆ. ಆದರೆ ಈ ಮಹಿಳೆಗೆ ವರ್ಷಗಳು ಕಳೆದರೂ ಶಾಯಿ ಮಾಸಿಲ್ಲ. ಸದ್ಯ ಲೋಕಸಭಾ ಚುನಾವಣೆ ನಡೆಯುತ್ತಿರುವಾಗಲೇ ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಶಾಯಿ ಗುರುತು ಮಾಯವಾಗದ ಕಾರಣ ಮೂರು ಬಾರಿ ಮತದಾನದ ಹಕ್ಕನ್ನು ಚಲಾಯಿಸಲು ಈ ಮಹಿಳೆಗೆ ಸಾಧ್ಯವಾಗಲಿಲ್ಲ. ಆ ಮಹಿಳೆ ಹೆಸರು ಉಷಾ. ಇವರು ಕೇರಳ ಮೂಲದವರು.
2016ರಲ್ಲಿ ಕೇರಳ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಕುಲಪುಳ್ಳಿಯ ಎಯುಪಿ ಶಾಲೆಯಲ್ಲಿ 62 ವರ್ಷದ ಉಷಾ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದರು. ಆಗ ಚುನಾವಣಾಧಿಕಾರಿಗಳು ಹಾಕಿದ ಶಾಯಿಯ ಗುರುತು ಕೆಲವೇ ದಿನಗಳಲ್ಲಿ ಮಾಯವಾಗುತ್ತವೆ ಎಂದು ಭಾವಿಸಿದ್ದರು. ಆದರೆ ತಿಂಗಳುಗಳು ಕಳೆದರು ಶಾಯಿ ಗುರುತುಗಳು ಮಾತ್ರ ಮರೆಯಾಗಿಲ್ಲ. ಶಾಯಿ ಕಲೆಯನ್ನು ಹೋಗಿಸಲು ಸಾಕಷ್ಟು ಪ್ರಯತ್ನಿಸಲಾಗಿದೆ. ಆದರೆ ಯಾವುದೇ ಫಲ ಸಿಗಲಿಲ್ಲ. ವಿಧಾನಸಭಾ ಚುನಾವಣೆ ಬಳಿಕ ಕೇರಳದಲ್ಲಿ ಸ್ಥಳೀಯ ಚುನಾವಣೆಗಳು ನಡೆದವು. ಈ ಚುನಾವಣೆಯಲ್ಲಿ ಉಷಾ ಅವರಿಗೆ ಮತದಾನ ಮಾಡಲು ಅಧಿಕಾರಿಗಳು ಅವಕಾಶ ನೀಡಲಿಲ್ಲ. ಏಕೆಂದರೆ ಆಕೆಯ ಬೆರಳಿನಲ್ಲಿ ಅದಾಗಲೇ ಶಾಯಿಯ ಗುರುತು ಇತ್ತು.
2019ರ ಲೋಕಸಭೆ ಹಾಗೂ 2021ರ ವಿಧಾನಸಭೆ ಚುನಾವಣೆ ಸಮಯದಲ್ಲೂ ಶಾಯಿ ಗುರುತು ಮಾಸದ ಕಾರಣ ಮತಗಟ್ಟೆ ಕೇಂದ್ರಗಳಲ್ಲಿ ಹಲವು ವಾದ-ವಿವಾದಗಳು ನಡೆಯಿತು. ಆದರೂ ಉಷಾ ಅವರು ಮತದಾನ ಮಾಡಲು ಆಗಲಿಲ್ಲ. ಇದೀಗ ಪ್ರಸ್ತುತ ನಡೆಯುತ್ತಿರುವ 2024ರ ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಿದ್ದ ಡಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ವೈ.ಶಿಹಾಬುದ್ದೀನ್ ಅವರ ಬಳಿ ತೆರಳಿ, ಸುಮಾರು ಒಂಬತ್ತು ವರ್ಷಗಳ ನಂತರವೂ ತನ್ನ ಬೆರಳಿನ ಶಾಯಿಯ ಗುರುತು ಮಾಸಿಲ್ಲ ಎಂದು ಉಷಾ ಹೇಳಿಕೊಂಡಿದ್ದರು. ಈ ವಿಷಯವನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತಂದಾಗ ಅಧಿಕಾರಿಗಳು ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಬರೋಬ್ಬರಿ 9 ವರ್ಷಗಳ ಬಳಿಕ ಉಷಾ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.(ಏಜೆನ್ಸೀಸ್​)
ಪೆನ್​ಡ್ರೖೆವ್ ಪ್ರಕರಣ ಕಾಂಗ್ರೆಸ್ಸಿಗರ ಬಂಧನ ಏಕಿಲ್ಲ?

ಕೇಜ್ರಿವಾಲ್ ಗ್ಯಾರಂಟಿ VS ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:one × three =
Remember me
