ಮೇರಠ್ :ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಸೌಹಾರ್ದತೆ ಕಾಪಾಡಬೇಕು ಎನ್ನುವ ದೃಷ್ಟಿಯಲ್ಲಿ ಉತ್ತರ ಪ್ರದೇಶದ ಮೇರಠ್​ ​ ನಗರದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳ ಮದುವೆ ಆಮಂತ್ರಣ ಪತ್ರದಲ್ಲಿ ಹಿಂದೂ ದೇವರುಗಳ ಫೋಟೋ ಮುದ್ರಣ ಮಾಡಿಸಿದ್ದಾನೆ.
ಮೇರಠ್​ ಬಳಿ ಇರುವ ಹಸ್ತಿನಾಪುರದ ನಿವಾಸಿ ಮೊಹಮ್ಮದ್​ ಸರಾಫತ್​ ಅವರ ಮಗಳು ಅಸ್ಮಾಗೆ ಮಾರ್ಚ್ 4ರಂದು ಮದುವೆ ನಿಶ್ಚಯವಾಗಿದೆ. ಮಗಳ ಮದುವೆಗೆ ಬಂಧುಗಳ ಜತೆ ಮುಸ್ಲಿಂ ಮತ್ತು ಹಿಂದೂ ಸ್ನೇಹಿತರನ್ನು ಆಮಂತ್ರಿಸುತ್ತಿರುವ ಸರಾಫತ್​ ಸೌಹಾರ್ದತೆಯನ್ನು ಸಾರುವಂತಹ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾನೆ. ಆಮಂತ್ರಣ ಪತ್ರದ ಮುಖಪುಟದಲ್ಲಿ ಗಣಪತಿಯ ಫೋಟೋ ಮತ್ತು ರಾಧಾಕೃಷ್ಣರ ಫೋಟೋವನ್ನು ಮುದ್ರಿಸಲಾಗಿದೆ. ಜತೆಗೆ ಮುಸ್ಲಿಂ ಸಮುದಾಯದ ಚಿಹ್ನೆಯಾಗಿರುವ ಅರ್ಧ ಚಂದ್ರ ಮತ್ತು ನಕ್ಷತ್ರದ ಮುದ್ರಣವನ್ನೂ ಸಹ ಮಾಡಲಾಗಿದೆ.
ಕೋಮು ದ್ವೇಷ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸೌಹಾರ್ದತೆಯನ್ನು ಪ್ರದರ್ಶಿಸುವುದು ಒಳ್ಳೆಯದು ಎಂದು ನನಗನಿಸಿತು. ನನ್ನ ಈ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ದೊರಕಿದೆ ಎಂದು ಸರಫತ್​ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಈ ವಿಶೇಷ ಆಮಂತ್ರಣವನ್ನು ಹಿಂದಿಯಲ್ಲಿ ಮುದ್ರಣ ಮಾಡಿಸಿರುವ ಸರಫತ್​, ಹಿಂದಿ ಭಾಷೆ ಬಾರದ ತನ್ನ ಬಂಧುಗಳು ಮತ್ತು ಮುಸ್ಲಿಂ ಸ್ನೇಹಿತರಿಗಾಗಿ ಉರ್ದು ಭಾಷೆಯಲ್ಲಿ ಮತ್ತೊಂದು ಆಮಂತ್ರಣ ಪತ್ರಿಕೆ ಮಾಡಿಸಿದ್ದಾನೆ ಎನ್ನಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + ten =
Remember me
