ಮುಂಬೈ:ನೆರೆ ಹೊರೆಯವರನ್ನು ನಂಬುವಾಗ ನೂರು ಬಾರಿ ಯೋಚಿಸಬೇಕು ಎನ್ನುತ್ತಾರೆ. ಆದರೆ ಆ ಬಾಲಕಿ ಆ ಮನೆಯವರನ್ನು ಅಜ್ಜ ಅಜ್ಜಿ ಎಂದೇ ಪ್ರೀತಿಯಿಂದ ಕರೆಯುತ್ತಿದ್ದಳು. ಆದರೆ ಅವರು ಮಾಡಿದ್ದು ಮಾಡಬಾರದ ಕೆಲಸ. ಇದೀಗ ಅದೇ ತಪ್ಪಿಗೆ ವೃದ್ಧ ದಂಪತಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ಮಹಾರಾಷ್ಟ್ರದಲ್ಲಿ ಇಂತದ್ದೊಂದು ಘಟನೆ ಎಂಟು ವರ್ಷಗಳ ಹಿಂದೆ ನಡೆದಿತ್ತು. 2013ರ ಸೆಪ್ಟೆಂಬರ್​ 4ರಂದು ನಾಲ್ಕು ವರ್ಷದ ಬಾಲಕಿ ಸ್ಕೂಲಿನಿಂದ ಮನೆಗೆ ಬಂದು ಟಿವಿ ನೋಡುತ್ತಾ ಕುಳಿತಿದ್ದಳು. ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಆಕೆ ನಾಲ್ಕನೇ ಮಹಡಿಯಲ್ಲಿದ್ದ ಸ್ನೇಹಿತರ ಮನೆಗೆ ಆಟವಾಡಲು ಹೋಗಿದ್ದಳು. ಆದರೆ ಸ್ನೇಹಿತೆ ಮಲಗಿದ್ದ ಹಿನ್ನೆಲೆಯಲ್ಲಿ ಮನೆಗೆ ವಾಪಾಸಾಗಿದ್ದಳು. ಆ ವೇಳೆ ನೆರೆ ಮನೆಯ ಅಜ್ಜ ಅಜ್ಜಿ ಆಕೆಯನ್ನು ಪ್ರೀತಿಯಿಂದ ಮಾತನಾಡಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಮನೆಗೆ ಕರೆದುಕೊಂಡು ಹೋಗಿ ಜೋಕಾಲಿ ಮೇಲೆ ಕೂರಿಸಿದ ವೃದ್ಧ ಬಾಲಕಿಯ ಬಟ್ಟೆಯನ್ನು ಬಿಚ್ಚಿದ್ದಾನೆ. ಆಕೆ ಓಡಿ ಹೋಗಲು ಪ್ರಯತ್ನಿಸಿದಾಗ ಕೆನ್ನೆಗೆ ಏಟು ಕೊಟ್ಟಿದ್ದಾನೆ. ಅದಾದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ಇದಕ್ಕೆ ವೃದ್ಧನ ಪತ್ನಿಯೂ ಸಾಥ್​ ನೀಡಿದ್ದಾಳೆ.
ವೃದ್ಧ ದಂಪತಿಯಿಂದ ಹೇಗೋ ತಪ್ಪಿಸಿಕೊಂಡ ಬಾಲಕಿ ಮನೆಗೆ ಬಂದು ಸೇರಿದ್ದಾಳೆ. ರಾತ್ರಿ ಆಕೆಯ ಅಮ್ಮ ಮನೆಗೆ ಬಂದ ನಂತರ ನಡೆದ ವಿಚಾರವನ್ನು ಹೇಳಿದ್ದಾಳೆ. ನಂತರ ಆಕೆಯ ಗುಪ್ತಾಂಗವನ್ನು ಪರಿಶೀಲಿಸಿದ ತಾಯಿಗೆ ಏನಾಗಿರಬಹುದೆಂಬ ಸೂಕ್ಷ್ಮತೆ ಅರಿವಿಗೆ ಬಂದಿದೆ. ತಕ್ಷಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ದೂರು ದಾಖಲಿಸಲಾಗಿದೆ.
ಆ ಪ್ರಕರಣದ ತೀರ್ಪು ಎಂಟು ವರ್ಷಗಳ ನಂತರ ಹೊರಬಿದ್ದಿದೆ. ಇದೀಗ 87 ವರ್ಷ ಮತ್ತು 81 ವರ್ಷವಾಗಿರುವ ಅಪರಾಧಿ ದಂಪತಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

‘ಹೌದ್ರೀ.. ನಾನು ರಮೇಶ್​ ಜಾರಕಿಹೊಳಿಗೆ ಧೈರ್ಯ ಹೇಳಿದ್ದು ನಿಜ.. ರಾಜಕಾರಣಿಗಳಿಗೆ ಮನುಷ್ಯತ್ವ ಇರಬೇಕ್ರೀ’

ಬಿಡುಗಡೆಯಾದ ದಿನವೇ ಲೀಕ್​ ಆದ ರಾಬರ್ಟ್​! 3,200ಕ್ಕೂ ಹೆಚ್ಚು ಲಿಂಕ್​ ಪತ್ತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × three =
Remember me
