ರಾಂಚಿ:ಮದುವೆ ಎಂದರೆ ಸಪ್ತಪದಿ, ಆದರೆ ಇಲ್ಲೊಬ್ಬ ಏಳು ಹೆಜ್ಜೆಗೆ ಸುಮ್ಮನಾಗದೆ ಏಳು ಮದುವೆಯನ್ನೇ ಆಗಿಬಿಟ್ಟಿದ್ದಾನೆ. ಹೀಗೆ ಒಂದರ ಹಿಂದೊಂದರಂತೆ ಮದುವೆಯಾಗಿ ವಂಚಿಸಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಇಂಥ ಒಬ್ಬ ನಯವಂಚಕನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.
ಅಸ್ಲಾಂ ಖಾನ್​ (50) ಬಂಧಿತ ವಂಚಕ. ಈತನನ್ನು ಜಾರ್ಖಂಡ್​ನ ರಾಂಚಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈತ ಒಬ್ಬ ಅಪ್ರಾಪ್ತ ವಯಸ್ಸಿನವಳೂ ಸೇರಿದಂತೆ ಒಟ್ಟು ಏಳು ಮಂದಿಯನ್ನು ವಿವಾಹವಾಗಿದ್ದ. ಹೀಗೆ ವಂಚಿಸುತ್ತಿದ್ದ ಈತ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ತನ್ನನ್ನು ಸಂಜಯ್​ ಕಸೇರ ಎಂದು ಸಾಮಾನ್ಯವಾಗಿ ಪರಿಚಯಿಸಿಕೊಳ್ಳುತ್ತಿದ್ದ ಅಸ್ಲಾಂ ಖಾನ್​, ನಯವಾದ ಮಾತುಗಳನ್ನಾಡಿ ಬಲೆಗೆ ಬೀಳಿಸಿಕೊಂಡು ಮದುವೆಯಾಗುತ್ತಿದ್ದ. ತನ್ನ ನಿಜವಾದ ಹೆಸರು, ಧರ್ಮ ಎರಡನ್ನೂ ಮರೆಮಾಚಿ ಮದುವೆಯಾಗುತ್ತಿದ್ದ ಈತ ಸಾಮಾನ್ಯವಾಗಿ ಬುಡಕಟ್ಟು ಜನಾಂಗದವರನ್ನೇ ಗುರಿಯಾಗಿಸಿ ಮದುವೆಯಾಗುತ್ತಿದ್ದ.
ನಕಲಿ ಪೊಲೀಸ್: ಸಮವಸ್ತ್ರ ತೊಟ್ಟು ತನ್ನನ್ನು ಪೊಲೀಸ್ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ ಈತ 2022ರ ಡಿ. 8ರಂದು ಅಪ್ರಾಪ್ತ ವಯಸ್ಸಿನ ಹಿಂದು ಹುಡುಗಿಯನ್ನು ಮದುವೆಯಾಗಿದ್ದ. ಆಗ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿ ಅವರು ಸ್ಥಳಕ್ಕೆ ಧಾವಿಸಿದಾಗ ಈತ ಪರಾರಿಯಾಗಿದ್ದ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪತ್ತೆ ಹಚ್ಚಿ ಬಂಧಿಸಿದಾಗ ಈತ ಇದಕ್ಕೂ ಮೊದಲು ಆರು ಮದುವೆಯಾಗಿರುವುದು ಬೆಳಕಿಗೆ ಬಂದಿತ್ತು. ತಲೆಮರೆಸಿಕೊಂಡು ಸದ್ದಾಂ ಎಂಬ ಹೆಸರು ಹೇಳಿಕೊಂಡು ರಾಂಚಿಯಲ್ಲಿದ್ದ ಈತನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಪೊಲೀಸ್ ಸಬ್​ ಇನ್​ಸ್ಪೆಕ್ಟರ್​​ ಕಿವಿಯನ್ನೇ ಕಚ್ಚಿದ ಪಾನಮತ್ತ ಬೈಕ್ ಸವಾರ!

ರಾಜ್ಯಕ್ಕೆ ಎದುರಾಗಿದೆ ಒಂದು ಹೊಸ ಆತಂಕ; ಸರ್ಕಾರದ ಮೊರೆ ಹೋದ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಸಂಘ

ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

ಗೆಳೆಯನ ಕೊಂದು ಶವ ಎಸೆಯುವಾಗ ತಾನೂ ಪ್ರಪಾತಕ್ಕೆ ಬಿದ್ದು ಹೆಣವಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
