ಹೈದರಾಬಾದ್​:ಖ್ಯಾತ ನಟಿ ಹಾಗೂ ರಾಜಕೀಯದಲ್ಲೂ ಸಕ್ರಿಯರಾಗಿರುವ ಪ್ರಸ್ತುತ ಆಂದ್ರಪ್ರದೇಶದ ಸಚಿವೆಯಾಗಿರುವ ರೋಜಾ ಅವರಿಗೆ ವೃದ್ಧ ವ್ಯಕ್ತಿಯೊಬ್ಬರು ಬೇಡಿಕೆಯೊಂದನ್ನು ನೀಡಿದ್ದಾರೆ.
ಅದೂ…ಸಾಮಾನ್ಯ ಬೇಡಿಕೆಯಲ್ಲ. ಅವರ ಸಮಸ್ಯೆಯನ್ನು ಕೇಳಿರುವ ಸಚಿವೆ ರೋಜಾ ಅವರೇ ಗಾಬರಿಯಾಗಿದ್ದಾರೆ. ಅರೆ… ಅವರು ಗಾಬರಿಯಾಗಲು ಕಾರಣವೂ ಇದೆ.
ಆಂದ್ರದ ವೈಎಸ್​​ಆರ್​ಸಿಪಿ ಸರ್ಕಾರವೂ ಮನೆ ಬಾಗಿಲಿಗೂ ಸರ್ಕಾರ ಎನ್ನುವ ಹೊಸ ಯೋಜನೆಯೊಂದನ್ನು ಆರಂಭಿಸಿದೆ. ಇದರ ಭಾಗವಾಗಿ ಪಕ್ಷದ ಪ್ರತಿನಿಧಿಗಳು, ನಾಯಕರು ಹಾಗೂ ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಪ್ರದೇಶದ ಜನರ ಅಹವಾಲನ್ನು ಸ್ವೀಕರಿಸಿ ಪರಿಹಾರ ಕೊಡಲು ಮನೆ ಮನೆಗೆ ಭೇಟಿ ಕೊಡುತ್ತಿದ್ದಾರೆ.
ಈ ರೀತಿ ರೋಜಾ ಅವರು ಸಹ ಗ್ರಾಮವೊಂದರಲ್ಲಿ ಜನರ ಸಮಸ್ಯೆಯನ್ನು ಕೇಳಲು ಬಂದಿದ್ದರು. ಪುತ್ತೂರಿನ ಶಿರುಗುರಾಜಪಾಲೆಂ ಎಂಬ ಗ್ರಾಮಕ್ಕೆ ಬಂದ ರೋಜಾ ಅವರಿಗೆ ವೃದ್ಧರೊಬ್ಬರು ಈ ಪ್ರಶ್ನೆಯನ್ನು ಕೇಳಿಯೇಬಿಟ್ಟರು. ಒಬ್ಬ ವಯಸ್ಸಾದ ವ್ಯಕ್ತಿ ಮಂತ್ರಿಯ ಮುಂದೆ ಕೆಟ್ಟ ಬೇಡಿಕೆಯನ್ನು ಕೇಳಿ ಕೆಲವರಿಗೆ ಕೋಪ ಬಂದರೆ ಮತ್ತೆ ಕೆಲವರಿಗೆ ಗಾಬರಿಯೂ ಆಗಿದೆ.
ಮಂತ್ರಿ ರೋಜಾ ಅವರು ಜನರ ಸಮಸ್ಯೆಗಳನ್ನು ಆಲಿಸುವ ವೇಳೆ ಅಲ್ಲಿಗೆ ಬಂದ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು, ತಾನು ಒಂಟಿಯಾಗಿ ಜೀವಿಸುತ್ತಿದ್ದೇನೆ, ತನಗೆ ಜೋಡಿ ಬೇಕು, ತನಗೆ ಮದುವೆಯನ್ನು ಮಾಡಿಸಿ ಎಂಬ ಮನವಿಯನ್ನು ಸಚಿವರ ಮುಂದಿಟ್ಟಿದ್ದಾರೆ. ಇದರಿಂದ ಕೆಲಕ್ಷಣ ಗಾಬರಿಯಾದ ರೋಜಾ ಅವರು ತಮ್ಮನ್ನು ಸಾವರಿಸಿಕೊಂಡು ಪೆನ್ಷನ್​ ಬೇಕಾದರೆ ನಾವು ಕೊಡಿಸಬಲ್ಲೆವು, ಆದರೆ ಹುಡುಗಿಯನ್ನು ನೀಡಿ ಮದುವೆ ಮಾಡುವುದು ನಮ್ಮಿಂದ ಆಗುವುದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಆತ, ನನಗೆ ಪೆನ್ಷನ್​​ ಬರುತ್ತಿದೆ. ಒಬ್ಬಂಟಿಯಾಗಿ ಬದುಕಲು ಕಷ್ಟವಾಗುತ್ತಿದೆ. ಈ ವೃದ್ಧನ ಬೇಡಿಕೆಯಿಂದ ಕಂಗಾಲಾದ ಸಚಿವೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − fourteen =
Remember me
