ನವದೆಹಲಿ:ಕಿರುಕುಳ ಆರೋಪ ದಾಖಲಾದ ಬೆನ್ನಲ್ಲೇ ಉತ್ತರಾಖಂಡ್​​ನ ಮಾಜಿ ಸಚಿವ ರಾಜೇಂದ್ರ ಬಹುಗುಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರಾಖಂಡದ ಪ್ರಭಾವಿ ರಾಜಕಾರಣಿ ಎನಿಸಿಕೊಂಡಿದ್ದ ರಾಜೇಂದ್ರ ಬಹುಗುಣ ತಮ್ಮ ನಿವಾಸದಲ್ಲಿ ತಲೆಗೆ ಸ್ವತಃ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗುಂಡುಹಾರಿಸಿಕೊಂಡ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು. ನಿನ್ನೆಯಷ್ಟೇ ಬಹುಗುಣ ಅವರ ಸೊಸೆ ಹಾಗೂ ಮೊಮ್ಮಗಳ ವಿರುದ್ಧ ಲೈಂಗಿಕ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಸಂಬಂಧ ದೂರು ಕೂಡ ದಾಖಲಾಗಿತ್ತು.
ಇದರಿಂದ ಮನನೊಂದಿದ್ದ ರಾಜೇಂದ್ರ ಬಹುಗುಣ ಸ್ವಯಂಪ್ರೇರಿತರಾಗಿ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.(ಏಜೆನ್ಸೀಸ್​)
ಪ್ಯಾನ್​ ಇಂಡಿಯಾ ಸಿನಿಮಾ ಮೊದಲೇ ಇತ್ತು ಎಂದ ಕಮಲ್​ ಹಾಸನ್​: ಕೆಜಿಎಫ್​​-2, ಆರ್​​ಆರ್​ಆರ್​​ ಬಗ್ಗೆ ಅಚ್ಚರಿ ಹೇಳಿಕೆ

ಮಲಗಿರುವಾಗಲೇ ಕೊನೆಯುಸಿರೆಳೆದ ಹಾಲಿವುಡ್​ ಖ್ಯಾತ ನಟ! ಸಾವಿಗೆ ಕಾರಣ ಮಾತ್ರ ನಿಗೂಢ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + eighteen =
Remember me
