ನವದೆಹಲಿ:ಐಸ್ ಕ್ರೀಂ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅಂಗಡಿಯಲ್ಲಿ ಸಿಗುವ ಐಸ್ ಕ್ರೀಂನಂತೆ ಮನೆಯಲ್ಲಿ ಮಾಡಬೇಕು ಎಂದು ಯೋಚಿಸುತ್ತಾ ಇದ್ದೀರಾ? ಆದರೆ ಮನೆಯಲ್ಲಿ ಫ್ರಿಡ್ಜ್ ಇಲ್ಲ, ಐಸ್ ಕ್ರೀಂ ಮಾಡೋಕೆ ಆಗಲ್ಲ ಅಂತ ನೀವು ಇನ್ಮುಂದೆ ಚಿಂತೆ ಮಾಡ್ಬೇಕಾಗಿಲ್ಲ.
ಫ್ರಿಡ್ಜ್ ಇಲ್ಲದೆ ಹೇಗೆ ಐಸ್ ಕ್ರೀಂ ತಯಾರಿಸಬಹುದು ಎಂದು ಮಹಿಳೆ ಸೂಪರ್ ಐಡಿಯಾ ನೀಡಿದ್ದಾಳೆ. ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಮೆಚ್ಚುಗೆ ಸೂಚಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕುರ್ಚಿಗಾಗಿ ತನ್ನ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಭೂಪ!ವಿಡಿಯೋದಲ್ಲಿ ಏನಿದೆ?:ಮಹಿಳೆಯೊಬ್ಬರು ಮೊದಲು ಐಸ್ ಕ್ರೀಂ ತಯಾರಿಸಲು ಮಿಶ್ರಣ ಸಿದ್ಧಪಡಿಸಿಕೊಳ್ತಾರೆ. ನಂತ್ರ ಅದನ್ನು ಹಿಡಿಕೆ ಇರುವ ಸ್ಟೀಲ್ ಪಾತ್ರೆಗೆ ಹಾಕಿ, ಮುಚ್ಚಳ ಮುಚ್ಚುತ್ತಾರೆ. ನಂತ್ರ ಸ್ಟೂಲ್ ಮೇಲೆ ಇಟ್ಟಿರುವ ಇನ್ನೊಂದು ದೊಡ್ಡ ಸ್ಟೀಲ್ ಪಾತ್ರೆಯ ಮಧ್ಯದಲ್ಲಿ ಐಸ್ ಕ್ರೀಂ ತುಂಬಿದ ಪಾತ್ರೆಯನ್ನು ಇಡ್ತಾರೆ. ನಂತ್ರ ದೊಡ್ಡ ಪಾತ್ರೆಯ ತುಂಬ ಐಸ್ ಕ್ಯೂಬ್ ಹಾಕುತ್ತಾರೆ. ಇದಾದ ಬಳಿಕ ಸೀಲಿಂಗ್ ಫ್ಯಾನ್ ಗೆ ಕಟ್ಟಿದ್ದ ಹಗ್ಗವನ್ನು ಐಸ್ ಕ್ರೀಂ ತುಂಬಿದ ಪಾತ್ರೆಯ ಹಿಡಿಕೆಗೆ ಬಿಗಿದು ಫ್ಯಾನ್ ಆನ್ ಮಾಡುತ್ತಾರೆ. ಫ್ಯಾನ್ ವೇಗವಾಗಿ ತಿರುಗುತ್ತಿದ್ದಂತೆ ಈ ಪಾತ್ರೆ ಕೂಡ ತಿರುಗುತ್ತದೆ.
ಪಾತ್ರೆಯ ಸುತ್ತ ಐಸ್ ಇದ್ದ ಕಾರಣ, ಐಸ್ ಕ್ರೀಮ್ ಮಿಶ್ರಣ ಕ್ರಮೇಣ ಗಟ್ಟಿಯಾಗ್ತಾ ಬರುತ್ತದೆ. ಸ್ವಲ್ಪ ಸಮಯ ಫ್ಯಾನ್ ಉರಿಸಿದ ನಂತ್ರ ಮಹಿಳೆ ಐಸ್ ಕ್ರೀಂ ತುಂಬಿದ ಪಾತ್ರೆಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಅದ್ರ ಮುಚ್ಚಳ ತೆಗೆದು, ಸ್ಪೂನ್ ಸಹಾಯದಿಂದ ಇನ್ನೊಂದು ಪಾತ್ರೆಗೆ ಐಸ್ ಕ್ರೀಂ ಸಿದ್ಧವಾಗಿರುತ್ತದೆ.
Where there’s a will, there’s a way.Hand-made & Fan-made ice cream. Only in India…pic.twitter.com/NhZd3Fu2NX
— anand mahindra (@anandmahindra)March 29, 2023

ಕುರ್ಚಿಗಾಗಿ ತನ್ನ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಭೂಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + fifteen =
Remember me
