ನವದೆಹಲಿ:ದಕ್ಷಿಣ ಭಾರತದಲ್ಲಿ ಬಾಳೆ ಎಲೆ ಮೇಲೆ ಊಟ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ಆದ್ದರಿಂದ, ಮದುವೆ, ಮುಂಜಿ ಕಾರ್ಯಕ್ರಮಗಳು ಸೇರಿ ಶುಭ ಕಾರ್ಯಕ್ರಮಗಳು ಸೇರಿ ಯಾವುದೇ ಕಾರ್ಯಕ್ರಮವಾದರೂ ಬಾಳೆ ಎಲೆ ಊಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಕರೊನಾ ವೈರಸ್​ ಸೋಂಕಿನ ಹಿನ್ನೆಲೆಯಲ್ಲಿ ಈ ಅಂಶ ಉತ್ತರ ಭಾರತೀಯರಿಗೂ ಮನವರಿಕೆಯಾದಂತಿದೆ.
ದೇಶದ ಪ್ರಖ್ಯಾತ ವಾಹನ ತಯಾರಿಕಾ ಕಂಪನಿ ಮಹೀಂದ್ರಾದಲ್ಲಿ ಪೇಪರ್​ ಪ್ಲೇಟ್​ಗಳ ಬದಲು ಬಾಳೆ ಎಲೆ ಮೇಲೆ ಊಟ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕಂಪನಿಯ ಈ ಕ್ರಮದ ಹಿಂದೆ ಮಾಜಿ ಪತ್ರಕರ್ತೆಯೊಬ್ಬರ ಸಲಹೆಯೂ ಇದೆ.
ಆಗಿದ್ದೇನೆಂದರೆ, ನಿವೃತ್ತ ಪತ್ರಕರ್ತೆ ಪದ್ಮಾ ರಾಮನಾಥ್​ ಎಂಬುವರು ಮಹೀಂದ್ರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್​ ಮಹೀಂದ್ರಾ ಅವರಿಗೆ ಇ-ಮೇಲ್​ ಸಂದೇಶ ರವಾನಿಸಿ, ಕೋವಿಡ್​ 19 ಪಿಡುಗಿನ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್​ಡೌನ್​ ಘೋಷಿಸಲಾಗಿದೆ. ಬಾಳೆಹಣ್ಣು ಬೆಳೆಯುವ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಅವರಿಂದ ಬಾಳೆ ಎಲೆಗಳನ್ನು ಖರೀದಿಸಿ, ಅದರ ಮೇಲೆ ಊಟ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ರೈತರಿಗೂ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರಂತೆ.
ಇದನ್ನು ತಕ್ಷಣವೇ ಒಪ್ಪಿಕೊಂಡ ಆನಂದ್​ ಮಹೀಂದ್ರಾ ತಮ್ಮ ಸಮೂಹದ ಎಲ್ಲಾ ಫ್ಯಾಕ್ಟರಿಗಳಲ್ಲಿ ಬಾಳೆ ಎಲೆ ಊಟವನ್ನು ಕಡ್ಡಾಯಗೊಳಿಸಿ ಆದೇಶಿಸಿದರು. ಅಲ್ಲದೆ, ಬಾಳೆ ಎಲೆಗಳನ್ನು ಖರೀದಿಸಿ ಫ್ಯಾಕ್ಟರಿಯ ಕ್ಯಾಂಟೀನ್​ಗೆ ತಲುಪಿಸಲೂ ಮುಂದಾದರು.
ಈ ವಿಷಯವನ್ನು ಆನಂದ್​ ಮಹೀಂದ್ರಾ ಟ್ವೀಟ್​ ಮೂಲಕ ಹಂಚಿಕೊಂಡಿದ್ದು, ಕೇವಲ ಒಂದು ಗಂಟೆ ಅವಧಿಯಲ್ಲಿ 13 ಸಾವಿರಕ್ಕೂ ಹೆಚ್ಚು ಶೇರ್​ ಆಗಿದೆ. ಒಟ್ಟಾರೆ, ಆನಂದ್​ ಮಹೀಂದ್ರಾ ಅವರು ಸಂಕಷ್ಟದಲ್ಲಿರುವ ಬಾಳೆ ಬೆಳೆಗಾರರಿಗೆ ಆರ್ಥಿಕವಾಗಿ ನೆರವಾಗಿದ್ದಲ್ಲದೆ, ತಮ್ಮ ಸಮೂಹದ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆರೋಗ್ಯದಾಯಕ ರೀತಿಯಲ್ಲಿ ಬಾಳೆ ಎಲೆ ಮೇಲೆ ಊಟ ಮಾಡುವ ಸೌಭಾಗ್ಯವನ್ನೂ ಕರುಣಿಸಿ, ಅವರ ಆರೋಗ್ಯ ಕಾಪಾಡಲು ಮುಂದಾಗಿದ್ದಾರೆ.
A retired journalist, Padma Ramnath mailed me out of the blue & suggested that if our canteens used banana leaves as plates, it would help struggling banana farmers who were having trouble selling their produce. Our proactive factory teams acted instantly on the idea…Thank you!pic.twitter.com/ouUx7xfMdK— anand mahindra (@anandmahindra)April 9, 2020
A retired journalist, Padma Ramnath mailed me out of the blue & suggested that if our canteens used banana leaves as plates, it would help struggling banana farmers who were having trouble selling their produce. Our proactive factory teams acted instantly on the idea…Thank you!pic.twitter.com/ouUx7xfMdK
ರಸ್ತೆಯಲ್ಲಿ ವಾಹನಗಳೇ ಇಲ್ಲ, ರಿಪೇರಿಗೆ ಇದೇ ಸಕಾಲ: ಡಾಂಬರು ಹಾಕಲು ಆದೇಶಿಸಿದ ತೆಲಂಗಾಣ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 10 =
Remember me
