ನವದೆಹಲಿ:ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ ಟ್ವೀಟ್​ ಮಾಡುತ್ತಾ, ಸ್ಫೂರ್ತಿದಾಯಕ ಹಾಗೂ ಆಕರ್ಷಕ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರು ನಿಯಮಿತವಾಗಿ ತಮ್ಮ ಸ್ವಂತ ಒಳನೋಟಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ, ಜನರು ತಮ್ಮ ಸ್ವಂತ ಪ್ರಗತಿಯನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತಾರೆ.
ಆನಂದ್​ ಮಹೀಂದ್ರಾ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್‌ಗಳಲ್ಲಿ ಇದೂ ಒಂದಾಗಿದ್ದು ಅನೇಕರ ಗಮನ ಸೆಳೆದಿದೆ. ಅವರು ಹಂಚಿಕೊಂಡ ವಿಡಿಯೋ ಸ್ಟೆಪ್ಲರ್​ ಹೊರತುಪಡಿಸಿ ಏನನ್ನೂ ಬಳಸದೆ ಸಣ್ಣ ವಾಹನವನ್ನು ರಚಿಸುವಲ್ಲಿ ಯಶಸ್ವಿಯಾದ ಮಹಿಳೆಯ ಜಾಣ್ಮೆಯನ್ನು ಪ್ರದರ್ಶಿಸುತ್ತದೆ. ಆ ಮಹಿಳೆ ಯಾವುದೇ ರೀತಿಯ ಅಂಟು ಪದಾರ್ಥ ಅಥವಾ ಹೆಚ್ಚುವರಿ ವಸ್ತುಗಳನ್ನು ಬಳಸದೆಯೇ ಪುಟಾಣಿ ವಾಹನ ತಯಾರಿಸುವಲ್ಲಿ ಯಶ್ವಿ ಆದದ್ದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ.
ಆನಂದ್​ ಮಹೀಂದ್ರಾ, “ಕೇವಲ ಸರಳವಾದ ಸ್ಟೆಪ್ಲರ್​ ಬಳಸಿ ತಮ್ಮ ಕಲ್ಪನೆಯನ್ನು ನಿಜವಾಗಿಸಿದ್ದು ಹೇಗೆ? ಅದ್ಭುತ ಸೃಜನಶೀಲತೆ ಹೊಂದಿರುವ ಅವರು ಕಾರು ತಯಾರಿಕೆ ಮತ್ತು ವಿನ್ಯಾಸದಲ್ಲಿ ಕೆಲಸ ಮಾಡಬೇಕು. ನಾವು ಅವಳನ್ನು ನೇಮಿಸಿಕೊಳ್ಳಲು ಸಿದ್ಧರಿದ್ದೇವೆ!” ಎಂದು ಬರೆದಿದ್ದಾರೆ. ಪೋಸ್ಟ್ ತ್ವರಿತವಾಗಿ ಜನರ ಗಮನವನ್ನು ಸೆಳೆದಿದ್ದು 15 ಲಕ್ಷ ವೀಕ್ಷಣೆಗಳನ್ನು ಮತ್ತು ಅಸಂಖ್ಯಾತ ಪ್ರತಿಕ್ರಿಯೆಗಳನ್ನು ಗಳಿಸಿತು.
How on earth did she come up with this idea using just simple staples?? Incredibly creative but she should work on real car manufacturing &design now. We’ll be ready to recruit her!pic.twitter.com/UBxjxvm91P— anand mahindra (@anandmahindra)July 8, 2023
How on earth did she come up with this idea using just simple staples?? Incredibly creative but she should work on real car manufacturing &design now. We’ll be ready to recruit her!pic.twitter.com/UBxjxvm91P
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
