ನವದೆಹಲಿ: ಹಿರಿಯ ಐಪಿಎಸ್​ ಅಧಿಕಾರಿ ಆನಂದ್ ಪ್ರಕಾಶ್ ಮಹೇಶ್ವರಿ ಅವರು ಬುಧವಾರ ಜಗತ್ತಿನ ಅತಿದೊಡ್ಡ ಅರೆಸೇನಾ ಪಡೆಯಾಗಿರುವ ಸೆಂಟ್ರಲ್ ರಿಸರ್ವ್​ ಪೊಲೀಸ್ ಫೋರ್ಸ್​(ಸಿಆರ್​ಪಿಎಫ್​)ನ ಹೊಸ ಡೈರೆಕ್ಟರ್ ಜನರಲ್​ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮಹೇಶ್ವರಿ ಅವರು 1984ರ ಬ್ಯಾಚಿನ ಉತ್ತರ ಪ್ರದೇಶ ಕೆಡರ್​ನ ಅಧಿಕಾರಿ. ಅವರನ್ನು ಸಿಆರ್​ಪಿಎಫ್​ನ ನೂತನ ಮುಖ್ಯಸ್ಥರನ್ನಾಗಿ ಸರ್ಕಾರ ಜನವರಿ 13ರಂದು ನೇಮಕ ಮಾಡಿತ್ತು. ನಿಕಟಪೂರ್ವ ಡೈರೆಕ್ಟರ್ ಜನರಲ್​ ಆರ್.ಆರ್. ಭಟ್ನಾಗರ್ ಅವರ ಸೇವಾವಧಿ ಡಿಸೆಂಬರ್​ 31ಕ್ಕೆ ಕೊನೆಗೊಂಡಿತ್ತು. ಹಂಗಾಮಿ ಡಿಜಿ ಆಗಿ ಐಟಿಬಿಪಿ ಡೈರೆಕ್ಟರ್ ಜನರಲ್​ ಎಸ್​.ಎಸ್.ದೇಸ್ವಾಲ್ ಅವರು ಕಾರ್ಯನಿರ್ವಹಿಸುತ್ತಿದ್ದವರು. ಅವರಿಂದ ಮಹೇಶ್ವರಿ ಅಧಿಕಾರ ಸ್ವೀಕರಿಸಿದ್ದಾರೆ.
ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅವರು ನಿವೃತ್ತರಾಗಲಿದ್ದಾರೆ. ಸಿಆರ್​ಪಿಎಫ್ ಆಗಿ ಅಧಿಕಾರವಹಿಸುವ ಮುನ್ನ ಮಹೇಶ್ವರಿ ಅವರು ಗೃಹ ಸಚಿವಾಲಯದಲ್ಲಿ ಆಂತರಿಕ ಸುರಕ್ಷೆಯ ಸ್ಪೆಷಲ್ ಸೆಕ್ರಟರಿಯಾಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ಸಿಆರ್​ಪಿಎಫ್​ನ ಇನ್​ಸ್ಪೆಕ್ಟರ್ ಜನರಲ್​ ಮತ್ತು ಡೆಪ್ಯುಟಿ ಐಜಿ ಆಗಿ ಕೆಲಸ ಮಾಡಿದ್ದರು.
ಬ್ಯೂರೋ ಆಫ್​ ಪೊಲೀಸ್ ರಿಸರ್ಚ್​ ಆ್ಯಂಡ್ ಡೆವಲಪ್​ಮೆಂಟ್​(ಬಿಪಿಆರ್​ಡಿ)ನ ಮುಖ್ಯಸ್ಥರಾಗಿಯೂ, ಬಾರ್ಡರ್ ಸೆಕ್ಯುರಿಟಿ ಫೋರ್ಸ್​​ನ ಅಡಿಷನಲ್ ಡಿಜಿ ಆಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸಿಆರ್​ಪಿಎಫ್​ನಲ್ಲಿ 3.25 ಲಕ್ಷ ಸಿಬ್ಬಂದಿ ಇದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 15 =
Remember me
