ಮುಂಬೈ:ಅನಂತ್​​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಚಾರ ಎಲ್ಲರಿಗೂ ಗೊತ್ತಿದೆ. ಅಂಬಾನಿ ಕುಟುಂಬದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ನಂತರ ನಡೆದ ಮತ್ತೊಂದು ಅದ್ಧೂರಿ ಸಂಭ್ರಮ ಎಂದರೆ ಅದು ಗಣೇಶ ಹಬ್ಬ.
ಇದನ್ನು ಓದಿ:ನನ್ನ ಜೀವನದಲ್ಲಿ 2 ಬ್ರೇಕಪ್ ಆಗಿದ್ದು ಇದೇ ಕಾರಣಕ್ಕೆ; ಮಿಲ್ಕಿ ಬ್ಯೂಟಿ ಏನೇಳಿದ್ರು ಗೊತ್ತಾ?
ತಮ್ಮ ಮುಂಬೈ ನಿವಾಸವಾದ ಆಂಟಿಲಿಯಾಕ್ಕೆ ಸೆಪ್ಟೆಂಬರ್ 7ರಂದು ಗಣಪನನ್ನು ಬರಮಾಡಿಕೊಂಡ ಕುಟುಂಬ ನವವಿವಾಹಿತರಾದ ಅನಂತ್​ ಮತ್ತು ರಾಧಿಕ ಅವರಿಂದ ಆರತಿ ಮಾಡಿಸಿತು. ಗಣೇಶನ ಆಗಮನದ ದಿನದಂದು ದೇಸಿ ಲುಕ್​ನಲ್ಲಿ ಮಿಂಚಿದ ಅಂಬಾನಿ ಕುಟುಂಬ ಹಾಗೂ ಮರುದಿನ ಗಣೇಶ ವಿಸರ್ಜನೆ ಸಮಾರಂಭದಲ್ಲಿ ನವದಂಪತಿ ಧೋಲ್​​ ಬೀಟ್​​ಗೆ ಡ್ಯಾನ್ಸ್​ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
A post shared by Viral Bhayani (@viralbhayani)
ಅಂಬಾನಿ ಕುಟುಂಬದ ಸೊಸೆಯಾಗಿದ್ದರೂ ರಾಧಿಕಾ ಮರ್ಚೆಂಟ್​ ಸಿಂಪಲ್​ ಆಗಿರುತ್ತಾರೆ ಎಂಬುದು ಆಗಾಗ್ಗೆ ಜಾಲತಾಣದಲ್ಲಿ ವೈರಲ್​ ಆಗುವ ಫೋಟೋಗಳಿಂದ ತಿಳಿಯುತ್ತದೆ. ಇನ್ನೂ ಈ ಬಾರಿ ಗಣೇಶ ವಿಸರ್ಜನೆ ವೇಳೆ ಮುಖಕ್ಕೆ ಬಣ್ಣ ಬಳಿದುಕೊಂಡು ಪತಿ ಅನಂತ್​ ಅಂಬಾನಿ ಜತೆ ಮೋಜು ಮಸ್ತಿ ಮಾಡುತ್ತಾ ಕಳೆದಿರುವ ಸಂತೋಷದ ಕ್ಷಣಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಯಾವುದೇ ಬೆಲೆಬಾಳುವ ಆಭರಣಗಳನ್ನು ಧರಿಸದೆ ಸರಳವಾಗಿ ಅನಾರ್ಕಲಿ ಶೈಲಿಯ ಸಿಲ್ಕ್​​​​ ಶಾರ್ಟ್ ಕುರ್ತಾದಲ್ಲಿ ನೃತ್ಯ ಮಾಡುತ್ತಾ ಮಿಂಚಿರುವ ರಾಧಿಕಾರನ್ನು ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ. ಮದುವೆಯ ಪ್ರತಿ ಸಮಾರಂಭದಲ್ಲಿ ವಜ್ರ ಮತ್ತು ಪಚ್ಚೆಗಳನ್ನು ಧರಿಸಿದ್ದ ಅಂಬಾನಿ ಅವರ ಕಿರಿಯ ಸೊಸೆ ಗಣಪತಿ ನಿಮಜ್ಜನದ ಸಮಯದಲ್ಲಿ ಮಂಗಳಸೂತ್ರವನ್ನು ಮಾತ್ರ ಧರಿಸಿದ್ದರು.

ರಾಧಿಕಾ ತನ್ನ ಇಡೀ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಸರ್ಜನೆಗೆ ಗಣೇಶನನ್ನು ಕೊಂಡೊಯ್ಯತ್ತಿದ್ದ ರಥದಲ್ಲಿದ್ದರು. ಪಕ್ಕದಲ್ಲಿ ಅವರ ಅತ್ತೆ ನೀತಾ ಅಂಬಾನಿ ಪಿಂಕ್​ ಕಲರ್​ ಸೀರೆಯಲ್ಲಿ ಹಾಗೂ ಅನಂತ್ ಆರೆಂಜ್​ ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮದಲ್ಲಿ ಕಾಣಿಸಿಕೊಂಡರು. ಎಲ್ಲರೂ ಪ್ರಸಾದ ವಿತರಿಸುತ್ತಿರುವುದು ಕಂಡು ಬಂದಿದೆ. (ಏಜೆನ್ಸೀಸ್​)

A post shared by Manav Manglani (@manav.manglani)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − 9 =
Remember me
