ನವದೆಹಲಿ​:ವಿಶ್ವದ ಟಾಪ್​ ಮೋಸ್ಟ್ ಬಿಲೇನಿಯರ್​ಗಳಲ್ಲಿ ಒಬ್ಬರಾದ ಮುಕೇಶ್​-ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ವಿವಾಹ ಮಹೋತ್ಸವವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್​ ಕನ್ವೆನ್​ಷನ್​ ಸೆಂಟರ್​ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಸಿನಿಮಾ, ರಾಜಕೀಯ, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಮದುವೆಯಲ್ಲಿ ಪಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದರು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು.
ಇದೀಗ ಈ ನವ ಜೋಡಿ ಹನಿಮೂನ್ ಗೆ ಎಲ್ಲಿಗೆ ಹೋಗಲಿದ್ದಾರೆ ಎಂಬ ಕುತೂಹಲ ಹಲವರಲ್ಲಿ ಮೂಡಿದೆ. ಈ ನಿಟ್ಟಿನಲ್ಲಿ ಕೆಲವು ಸ್ಥಳಗಳಿಗೆ ಭೇಟಿ ನೀಡಬಹುದು ಎಂಬ ಗುಸುಗುಸು ಜೋರಾಗಿ ನಡೆಯುತ್ತಿದೆ. ಮೊದಲಿಗೆ ದಂಪತಿಗಳು ದಕ್ಷಿಣ ಆಫ್ರಿಕಾದ ಕ್ರುಗರ್ ನ್ಯಾಷನಲ್​ ಪಾರ್ಕ್​, ಸ್ವಿಟ್ಜರ್​ಲ್ಯಾಂಡ್, ಬ್ರಿಟಿಷ್ ವರ್ಜಿನ್ ದ್ವೀಪಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ದಂಪತಿ ಇದ್ಯಾವ ಸ್ಥಳಕ್ಕೆ ಹೋಗದೆ ಹನಿಮೂನ್​ಗೆ ನವಜೋಡಿ ಸಿಟಿ ಆಪ್​ ಲವ್​ ಪ್ಯಾರಿಸ್​ಗೆ ತೆರಳಿದ್ದಾರೆ.
#WATCH|#ParisOlympics2024| Reliance Industries Chairman Mukesh Ambani's son Anant Ambani says, "I am sure that with god's grace, the Indian team will perform very well and we will win many medals. I am sure the Indian team will make every Indian like me proud."Anant Ambani's…pic.twitter.com/HzDwTwNsKn
ಇದನ್ನೂ ಓದಿ:ರಾಜ್ಯ ಸರ್ಕಾರದಿಂದ ಸಮಗ್ರ ಸೈಬರ್ ಭದ್ರತಾ ನೀತಿ ಜಾರಿ; ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು
ಸಿಟಿ ಆಫ್​​ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್​ನಲ್ಲಿ ದಂಪತಿ ಕಾಣಿಸಿಕೊಂಡಿದ್ದು, ಕೈ ಕೈ ಹಿಡಿದು ಸುತ್ತಾಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿದೆ. ಇದಲ್ಲದೆ ಕ್ಯಾಮರಾಗಳಿಗೆ ದಂಪತಿ ಪೋಸ್​ ನೀಡಿದ್ದು, ಬಾಡಿಗಾರ್ಡ್​ಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ದಂಪತಿ ಪ್ಯಾರಿಸ್​ನಲ್ಲೇ ಹನಿಮೂನ್​ ಮಾಡಿಕೊಳ್ಳಲು ನಿರ್ಧಸಿರುವುದಾಗಿ ವರದಿಯಾಗಿದೆ.
ಈ ಹಿಂದೆ ಪ್ರೀ ವೆಡ್ಡಿಂಗ್ ಹಾಗೂ ಮದುವೆ​ ವಿಚಾರವಾಗಿ ಸುದ್ದಿ ಮಾಡಿದ್ದ ರಾಧಿಕಾ ಹಾಗೂ ಅನಂತ್​ ಇದೀಗ ತಮ್ಮ ಹನಿಮೂನ್​ ವಿಚಾರವಾಗಿಯೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ದಂಪತಿಗಳ ಫೋಟೋ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್​ ಹಾಕುತ್ತಿದ್ದಾರೆ.
Newly Wed Couple#anantambani&#radhikaEnjoying the beautiful streets of Paris 🇫🇷pic.twitter.com/45AknsNxLR
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
