ಮುಂಬೈ:ವಿಶ್ವದ ಟಾಪ್​ ಮೋಸ್ಟ್​ ಬಿಲೇನಿಯರ್​ಗಳಲ್ಲಿ ಒಬ್ಬರಾದ ಮುಖೇಶ್​ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ವಿವಾಹ ಕಾರ್ಯಕ್ರಮವು ಜುಲೈ 12ರಂದು ಮುಂಬೈನಲ್ಲಿ ನಡೆಯಲಿದ್ದು, ಆಮಂತ್ರಣ ಪತ್ರಿಕೆಯ ಫೋಟೋಗಳು ಸಖತ್​ ವೈರಲ್​ ಆಗಿದೆ.
ಮುಂಬೈ ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಜಿಯೋ ಕನ್ವೆನ್ಷನ್​ ಸೆಂಟರ್​ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಸಾಂಪ್ರದಾಯಿಕ ಕೆಂಪು ಮತ್ತು ಚಿನ್ನದ ಕಾರ್ಡ್ ಆಗಿರುವ ‘ಸೇವ್‌ ದಿ ಡೇಟ್‌’ ಆಮಂತ್ರಣ ಪತ್ರಿಕೆಯನ್ನು ಅತಿಥಿಗಳು ಸ್ವೀಕರಿಸುತ್ತಿದ್ದಾರೆ.
Anant Ambani and Radhika’s Wedding to be held in Mumbai on 12th July at the Jio World Convention Centre in BKC. Wedding to be performed in accordance with the traditional Hindu Vedic way.The main wedding ceremonies will start on Friday, 12th July with the auspicious Shubh…pic.twitter.com/YKnaAIAs7o
ಇದನ್ನೂ ಓದಿ:ಈಗಷ್ಟೇ ಆರಂಭವಾಗಿದೆ ಮಾಡುವುದು ಸಾಕಷ್ಟಿದೆ; ಕೋಚ್​ ವದಂತಿಯ ಕುರಿತು ಗೌತಮ್​ ಗಂಭೀರ್​ ನೀಡಿದ ಹೇಳಿಕೆ ವೈರಲ್
ಮದುವೆ ಸಂಭ್ರಮದ ಕಾರ್ಯಕ್ರಮಗಳು (ಜು.12 ರಿಂದ 14) ಮೂರು ದಿನಗಳ ಕಾಲ ಜರುಗಲಿವೆ. ಜು.12 ರಂದು ಶುಭ ವಿವಾಹದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ. ಜು.13 ರ ಶನಿವಾರ ಶುಭ ಆಶೀರ್ವಾದ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ ಇರಲಿದೆ. ಜು.14ರ ಭಾನುವಾರದಂದು ಅದ್ಧೂರಿ ವಿವಾಹ ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿದೆ.
ನೀತಾ ಮತ್ತು ಮುಖೇಶ್ ಅಂಬಾನಿ ಈ ವಾರ ಯುರೋಪ್‌ನಲ್ಲಿ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗಾಗಿ ನಾಲ್ಕು ದಿನಗಳ ವಿವಾಹ ಪೂರ್ವ ಸಮಾರಂಭವನ್ನು ಆಯೋಜಿಸುತ್ತಿದ್ದಾರೆ. ರಾಜಕೀಯ, ಕ್ರೀಡೆ, ಚಿತ್ರರಂಗ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
