ನವದೆಹಲಿ:ಮುಖೇಶ್‌ ಅಂಬಾನಿ ಮಗನ ಮದುವೆ ಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿದೆ. ಅದ್ದೂರಿಯಾಗಿ ನಡೆದ ಈ ವಿವಾಹದಲ್ಲಿ ಆಭರಣ, ಉಡುಗೆ, ಊಟ ಹೀಗೆ ಹತ್ತಾರು ವಿಷಗಳು ಸಾಕಷ್ಟು ಸುದ್ದಿ ಮಾಡಿವೆ. ಹೀಗೆ ಅಂಬಾನಿಯ ಭಾವಿ ಸೊಸೆಗೆ ಸೀರೆ ಉಡಿಸಿ ಬರೋಬ್ಬರಿ 2ಲಕ್ಷ ರೂ ಸಂಭಾವನೆಯನ್ನು ಬೆಂಗಳೂರಿನ ಮಹಿಳೆ ಪಡೆದಿದ್ದಾರೆ ಎನ್ನಲಾಗಿದೆ.
ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಅವರ ವಿವಾಹ ಪೂರ್ವ ಸಮಾರಂಭ ಮಾರ್ಚ್ 1 ರಿಂದ 3ರ ವರೆಗೆ ಅದ್ಧೂರಿಯಾಗಿ ನಡೆದಿದೆ. ಅಂಬಾನಿಯ ಭಾವಿ ಸೊಸೆ ಸೀರೆಯಲ್ಲಿ ಮಿಂಚಿದ್ದು,ರಾಧಿಕಾಗೆ ಸೀರೆ ಉಡಿಸಿದ ಸ್ಟೈಲಿಸ್ಟ್​​​ಗೆ ಬರೋಬ್ಬರಿ 2 ಲಕ್ಷ ರೂ ಸಂಭಾವಣೆ ನೀಡಲಾಗಿದೆ.
ಡಾಲಿ ಜೈನ್ ಯಾರು? :ವಿಶೇಷತೆ ಏನೆಂದರೆ ಈ ಖ್ಯಾತ ಸೆಲೆಬ್ರೆಟಿ ಸ್ಟೈಲಿಸ್ಟ್ ಡಾಲಿ ಜೈನ್​​​ ಮೂಲತಃ ಬೆಂಗಳೂರಿನವರು. ಡಾಲಿ ಜೈನ್ ಬೆಂಗಳೂರಿನಲ್ಲಿ ಜನಿಸಿ, ಮದುವೆಯ ಬಳಿಕ ಕೋಲ್ಕತ್ತಾದಲ್ಲಿ ನೆಲೆಸಿದ್ದಾರೆ.ರೇಷ್ಮೆ ಸೀರೆಯನ್ನು 325 ವಿಧಗಳಲ್ಲಿ ಉಡುವ ದಾಖಲೆಯನ್ನೂ ಅವರು ಹೊಂದಿದ್ದಾರೆ.ಮದುವೆಗೆ ಮುಂಚೆಯೇ ಸೀರೆಗಳನ್ನು ಇಷ್ಟಪಡದ ಜೈನ್, ಮನೆಯಲ್ಲಿ ಮದುವೆಯಾದ ನಂತರ ಪ್ರತಿದಿನವೂ ಸೀರೆಗಳನ್ನು ಧರಿಸುವಂತೆ ಒತ್ತಾಯಿಸಲಾಯಿತು. ನಂತರ ಇವರು ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.
ಸಾಮಾನ್ಯ ಗೃಹಿಣಿಯಾಗಿದ್ದ ಡಾಲಿ ಜೈನ್​​​ ಈಗ ಸೆಲೆಬ್ರಿಟಿ ಸೀರೆ ಉಡಿಸುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಾರೆ. ಸೀರೆ ಉಡಿಸಲು 35,000 ರಿಂದ 2 ಲಕ್ಷ ರೂ. ಪಡೆಯುತ್ತಿದ್ದು, ಆಲಿಯಾ ಭಟ್ ನಿಂದ ಕತ್ರಿನಾ ಕೈಫ್ ಅವರ ವರೆಗೂ ಅದೆಷ್ಟು ಸೆಲೆಬ್ರಿಟಿ ಮದುವೆಗಳಲ್ಲಿ ವಧುವಿಗೆ ಸೀರೆ ಉಡಿಸಿದ್ದಾರೆ.
2011 ರಲ್ಲಿ, ಡಾಲಿ ಜೈನ್ ಅವರು ಅತ್ಯಂತ ವೇಗವಾಗಿ ಸೀರೆ ಉಡಿಸುವ ಮೂಲಕ ಅಂದರೆ 18.5 ಸೆಕೆಂಡುಗಳಲ್ಲಿ ಸೀರೆ ಉಡಿಸಿ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಮೆಹ್ತಾ, ಸೋನಮ್ ಕಪೂರ್, ಪ್ರಿಯಾಂಕಾ ಚೋಪ್ರಾ,ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ ಜಯಲಲಿತಾ ಮತ್ತು ದಿ ಶ್ರೀದೇವಿಯವರಿಗೆ ಸೀರೆ ಉಡಿಸಿದ್ದಾರೆ.
ಸೀರೆಯು ಭಾರತೀಯ ಸಾಂಪ್ರದಾಯಿಕ ಉಡುಪಾಗಿದ್ದು, ಶತಮಾನಗಳಿಂದ ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.ಸೀರೆಯು ಕೇವಲ ಬಟ್ಟೆಯ ತುಂಡಲ್ಲ, ಮಹಿಳೆಯ ಸೌಂದರ್ಯ ಹಾಗೂ ಸಂಸ್ಕೃತಿಯಾಗಿದೆ.
ಸೀಮಾ ಹೈದರ್‌ಗೆ ಪಾಕ್ ಪತಿಯಿಂದ 3 ಕೋಟಿ ರೂ. ಮಾನನಷ್ಟ ನೋಟಿಸ್; ಕ್ಷಮೆಯಾಚಿಸಿ ದಂಡ ಕಟ್ಟಿ ಇಲ್ಲವಾದ್ರೆ ಕಾನೂನು ಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
