ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಹಪೂರ್ವ ಪಾರ್ಟಿಯನ್ನು ಯುರೋಪ್‌ನಲ್ಲಿ ಕ್ರೂಸ್ ಹಡಗಿನಲ್ಲಿ ಆಯೋಜಿಸಿದ್ದಾರೆ. ಬಾಲಿವುಡ್​​​ ಸೆಲಿಬ್ರಿಟಿಗಳು ಸೇರಿದಂತೆ ಕ್ರೂಸ್‌ನಲ್ಲಿರುವ 800 ಮಂದಿ ಅತಿಥಿಗಳು ಪಾರ್ಟಿ ಮತ್ತು ಸಂಗೀತವನ್ನು ಆನಂದಿಸುತ್ತಿದ್ದಾರೆ. ಅತಿಥಿಗಳಿಗೆ ನೀಡುತ್ತಿರುವ ಮೆನು ಮನೆಯನ್ನು ನೆನಪಿಸುವಂತಿದೆ ಎನ್ನಲಾಗಿದೆ. ಅದಕ್ಕೆಲ್ಲಾ ಕಾರಣ ಬೆಂಗಳೂರಿನ ರಾಮೇಶ್ವರಂ ಕೆಫೆ.
ಇದನ್ನು ಓದಿ:https://www.vijayavani.net/12-5-lakh-tourists-visited-to-jammu-kashmir-on-this-year
ಬೆಂಗಳೂರಿನ ರಾಮೇಶ್ವರಂ ಕೆಫೆಯು ದಕ್ಷಿಣ ಭಾರತದ ತಿನಿಸು ಮತ್ತು ಫಿಲ್ಟರ್ ಕಾಫಿಯನ್ನು ಕ್ರೂಸ್‌ನಲ್ಲಿರುವ ಅತಿಥಿಗಳಿಗೆ ನೀಡುತ್ತಿದೆ. ಈ ಬಗ್ಗೆ ರಾಮೇಶ್ವರಂ ಕೆಫೆಯು ಇನ್‌ಸ್ಟಾಗ್ರಾಮ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದೆ ಮತ್ತು ತಮ್ಮ ತಂಡದ ಕ್ರೂಸ್‌ನ ಚಿತ್ರಗಳನ್ನು ಶೇರ್​ ಮಾಡಿದೆ.
ಫೋಟೋಗಳನ್ನು ಹಂಚಿಕೊಂಡಿರುವ ರಾಮೇಶ್ವರಂ ಕೆಫೆ, ಮತ್ತೊಂದು ಮೈಲಿಗಲ್ಲು ಮತ್ತೊಂದು ಸಾಧನೆ. ಸ್ಪೇನ್​ನಲ್ಲಿ ನಡೆಯುತ್ತಿರುವ ವಿಶ್ವದ ಅತ್ಯುತ್ತಮ ಪೂರ್ವವಿವಾಹ ಸಮಾರಂಭದಲ್ಲಿ ಭಾಗವಾಗಲು ಸಂತೋಷವಾಗುತ್ತಿದೆ. ರಾಮೇಶ್ವರಂ ಕೆಫೆ ದಕ್ಷಿಣದಲ್ಲಿ ಅತ್ಯುತ್ತಮವಾದ ದಕ್ಷಿಣ ಭಾರತೀಯ ಆಹಾರವನ್ನು ಒದಗಿಸುವ ಏಕೈಕ ರೆಸ್ಟೋರೆಂಟ್ ಆಗಿದೆ ಎಂದು ಪೋಸ್ಟ್​​​ನಲ್ಲಿ ಬರೆಯಲಾಗಿದೆ.
A post shared by The Rameshwaram Cafe (@therameshwaramcafe)
ಈವೆಂಟ್‌ಗೆ ಹಾಜರಾಗುವ ಸೆಲಿಬ್ರಿಟಿಗಳು ರಾಮೇಶ್ವರಂ ಕೆಫೆ ನೀಡುವ ಆಹಾರವನ್ನು ಆನಂದಿಸುತ್ತಿದ್ದಾರೆ. “ಅವರು ಪುಡಿ ಇಡ್ಲಿ ಮತ್ತು ಪುಡಿ ದೋಸೆಯನ್ನು ಆನಂದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಶೇರ್​ ಮಾಡಿರುವ ಪೋಸ್ಟ್​​ ಇದುವರೆಗು 7,700ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.
ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ಜುಲೈ 12ರಂದು ಮುಂಬೈನಲ್ಲಿ ವಿವಾಹವಾಗಲಿದ್ದಾರೆ. ವರದಿಯ ಪ್ರಕಾರ, ನಗರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸಮಾರಂಭ ನಡೆಯಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 19 =
Remember me
