ಮುಂಬೈ:ಭಾರತದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಅವರ ಪುತ್ರ ಅನಂತ್​ ಅಂಬಾನಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ವೀರೆನ್​ ಮರ್ಚೆಂಟ್​ ಅವರ ಪುತ್ರಿ ರಾಧಿಕಾ ಮರ್ಚೆಂಟ್​ ಅವರನ್ನು ಅನಂತ್​ ಅಂಬಾನಿ ವರಿಸಲಿದ್ದು, ಮೂಲಗಳ ಪ್ರಕಾರ 2024ರ ಮಾರ್ಚ್ 1 ರಿಂದ 3ರವರೆಗೆ ಗುಜರಾತಿನ ಜಾಮ್​ನಗರದಲ್ಲಿರುವ ರಿಲಯನ್ಸ್​ ಗ್ರೀನ್​ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ.​
ತಾಜಾ ಸಂಗತಿ ಏನೆಂದರೆ, ಮದುವೆಗೆ ಆಗಮಿಸುವ ಅತಿಥಿಗಳಿಗೆ ವಿಶೇಷ ಉಡುಗೊರೆ ಸಿಗಲಿದೆ. ಮಹಾಬಲೇಶ್ವರ ಮೂಲದ ದೃಷ್ಟಿಹೀನ ಕುಶಲಕರ್ಮಿಗಳು ತಯಾರಿಸಿದ ಕ್ಯಾಂಡಲ್​ ಡಿಸೈನ್​ಗಳು ಗಿಫ್ಟ್​ ಆಗಿ ಸಿಗಲಿದೆ. ಇದರ ಹಿಂದೆಯೂ ಒಂದು ಒಳ್ಳೆಯ ಉದ್ದೇಶವಿದೆ. ಈ ಪರಿಕಲ್ಪನೆ ಇಶಾ ಅಂಬಾನಿ ಅವರದ್ದಾಗಿದೆ. ಕರಕುಶಲತೆಯ ಅಮೂಲ್ಯ ಪರಂಪರೆಯನ್ನು ಬೆಂಬಲಿಸಲು ಸಮುದಾಯಗಳಿಗೆ ಸಹಕರಿಸಲು ಇಂಥದ್ದೊಂದು ಸ್ವದೇಶಿ ಉಪಕ್ರಮಕ್ಕೆ ಇಶಾ ಅಂಬಾನಿ ಬೆಂಬಲವಾಗಿ ನಿಂತಿದ್ದಾರೆ.
ಕಳೆದ ಕೆಲವು ವಾರಗಳಿಂದ ಅನಂತ್ ಅಂಬಾನಿ ಮತ್ತು ರಾಧಿಕಾ ಮೆಚಾಂಟ್ ಅವರ ಮದುವೆಗೆ ಸಂಬಂಧಿಸಿದ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಮದುವೆ ಕಾರ್ಯಕ್ರಮ ನಡೆಯುವ ಸ್ಥಳವನ್ನು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಲಿದ್ದಾರೆ ಎಂಬುದರ ಬಗ್ಗೆಯೂ ಕೆಲವರು ಮಾತನಾಡುತ್ತಿದ್ದರೆ, ಕೆಲವರು ಗಾಯಕ ದಿಲ್ಜಿತ್ ದೋಸಾಂಜ್ ಮತ್ತು ಪಾಪ್​ ಗಾಯಕಿ ರಿಹಾನ್ನಾ ಅವರು ಕೂಡ ಪ್ರದರ್ಶನ ನೀಡಲಿದ್ದಾರೆ ಎಂಬ ವದಂತಿಯೂ ಹರಿದಾಡುತ್ತಿದೆ.
ಅನಂತ್ ಅಂಬಾನಿ ತಮ್ಮ ವಿಲಾಸಿ ಜೀವನಶೈಲಿ, ದುಬಾರಿ ವಾಚ್‌ಗಳು ಮತ್ತು ವಿದೇಶಿ ಕಾರುಗಳು ಕ್ರೇಜ್​ನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಟ್ರೆಂಡ್​ ಆಗುತ್ತಿರುತ್ತಾರೆ. ಈ ಹಿಂದೆ 18 ತಿಂಗಳ ಅವಧಿಯಲ್ಲಿ 108 ಕೆಜಿ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದರು. ಅನಂತ್ ಅಂಬಾನಿ ಅವರು ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆಗಿನ ನಿಶ್ಚಿತಾರ್ಥವೂ ಕೂಡ ಬಹಳ ಚರ್ಚೆಯಾಯಿತು. 2023ರ ಜನವರಿ 19ರಂದು ನಡೆದ ಅದ್ಧೂರಿ ಸಮಾರಂಭದಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡರು.
ಭಾರತದ ಶ್ರೀಮಂತ ಕುಟುಂಬದ ಸದಸ್ಯರಾಗಿದ್ದರು ಕೂಡ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ತಮ್ಮ ವಿನಮ್ರ ನಡವಳಿಕೆ ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅನಂತ್ ಅಂಬಾನಿ ಬ್ರೌನ್ ವಿಶ್ವವಿದ್ಯಾನಿಲಯದಿಂದ ತಮ್ಮ ಅಧ್ಯಯನವನ್ನು ಮುಗಿಸಿ, ಈಗ ರಿಲಯನ್ಸ್ ನ್ಯೂ ಎನರ್ಜಿ ಬಿಸಿನೆಸ್ ಅನ್ನು ನಿರ್ವಹಿಸುತ್ತಿದ್ದಾರೆ. ರಿಲಯನ್ಸ್ 02ಸಿ ಮತ್ತು ರಿಲಯನ್ಸ್ ನ್ಯೂ ಸೋಲಾರ್ ಎನರ್ಜಿಯ ನಿರ್ದೇಶಕ ಹುದ್ದೆಯಲ್ಲಿದ್ದಾರೆ.(ಏಜೆನ್ಸೀಸ್​)
ಉತ್ತಮ S*x ಸೆಕ್ಸ್​ ಒಂದೊಳ್ಳೆ ಆಹಾರವಿದ್ದಂತೆ! ಅನುಪಮಾ ಡೈಲಾಗ್​ ಕೇಳಿ ಬೆರಗಾದ್ರು ಫ್ಯಾನ್ಸ್​

Karnataka Budget: 2 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 10 =
Remember me
