ಮುಂಬೈ:ದೇಶದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಅವರ ಪ್ರೀ ವೆಡ್ಡಿಂಗ್​ ಸಂಭ್ರಮ ಗುಜರಾತಿನ ಜಾಮ್​ನಗರದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಸಿನಿಮಾ, ಕ್ರೀಡೆ ಹಾಗೂ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರ ದಂಡೇ ಸಂಭ್ರಮದಲ್ಲಿ ಭಾಗಿಯಾಗಿತ್ತು. ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಸಹ ಭಾಗಿಯಾದರು. ಈ ವೇಳೆ ಜುಕರ್​ಬರ್ಗ್​ ಮತ್ತು ಅನಂತ್​ ಅಂಬಾನಿ ನಡುವೆ ನಡೆದ ಸಂಭಾಷಣೆಗೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಮಾರ್ಕ್​ ಜುಕರ್​ಬರ್ಗ್​ ಅವರ ಪತ್ನಿ, ಅನಂತ್​ ಅಂಬಾನಿ ಧರಿಸಿದ್ದ ವಾಚ್ ಗಮನಿಸಿ, ಅದನ್ನು ಹೊಗಳಿದರು. ಈ ವೇಳೆ ಜುಕರ್​​ಬರ್ಗ್​ ಸಹ ವಾಚ್​ ಬಗ್ಗೆ ವಿಚಾರಿಸುತ್ತಾರೆ. ಇದೀಗ ಆ ವಾಚ್​ ಎಲ್ಲೆಡೆ ಹಾಟ್​ ಟಾಪಿಕ್​ ಆಗಿದೆ. ರಿಚರ್ಡ್​ ಮಿಲ್ಲೆ ಬ್ರ್ಯಾಂಡ್​ (ರಿಚರ್ಡ್ ಮಿಲ್ಲೆ RM 56-02) ನ ಈ ವಾಚ್​ನ ಮೌಲ್ಯ ಬರೋಬ್ಬರಿ 18.2 ಕೋಟಿ ರೂಪಾಯಿ. ಹಾಗಾದರೆ ಈ ವಾಚ್​ನಲ್ಲಿ ಅಂಥಾ ವಿಶೇಷತೆ ಏನಿದೆ ಅಂತೀರಾ! ಮುಂದೆ ಓದಿ.
ಮಾಧ್ಯಮ ವರದಿಗಳ ಪ್ರಕಾರ ಅನಂತ್​ ಅಂಬಾನಿ ವಾಚ್​ ಬೆಲೆ 18 ಕೋಟಿ ರೂಪಾಯಿ. ಈ ಬೆಲೆಯಲ್ಲಿ ಟೀಮ್​ ಇಂಡಿಯಾ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್​ ಮೂರು ಫ್ಲ್ಯಾಟ್​ ಖರೀದಿಸಬಹುದು. ಯಶಸ್ವಿ ಜೈಸ್ವಾಲ್​ ಮಾತು ಈಗ್ಯಾಕೆ ಬಂತು ಅಂದರೆ, ಇತ್ತೀಚೆಗೆ ಜೈಸ್ವಾಲ್​ 5.4 ಕೋಟಿ ರೂ. ಮೌಲ್ಯದ ಫ್ಲ್ಯಾಟ್​ ಖರೀದಿ ಮಾಡಿದರು. ಅನಂತ್​ ವಾಚ್​ ಬೆಲೆಯಲ್ಲಿ ಈ ರೀತಿಯ ಮೂರು ಫ್ಲ್ಯಾಟ್​ ಖರೀದಿ ಮಾಡಬಹುದು. ಅಂದಹಾಗೆ ರಿಚರ್ಡ್​ ಮಿಲ್ಲೆ ಬ್ರ್ಯಾಂಡ್​ ಅನ್ನು 1999ರಲ್ಲಿ ಫ್ರೆಂಚ್​ ಉದ್ಯಮಿ ಸ್ಥಾಪಿಸಿದರು. ವಿಶ್ವದಲ್ಲಿ ಅನೇಕ ಸೆಲೆಬ್ರಿಟಿಗಳು ಈ ಬ್ರ್ಯಾಂಡ್​ ವಾಚ್​ಗಳನ್ನು ಧರಿಸುತ್ತಾರೆ. ಸ್ಪೇನ್​ನ ಲೆಜೆಂಡರಿ ಟೆನ್ನಿಸ್​ ಆಟಗಾರ ರಾಫೆಲ್​ ನಡಾಲ್​ ಕೂಡ ಈ ವಾಚ್​ ಧರಿಸಿದ್ದಾರೆ.
ಈ ವಾಚ್​ನಲ್ಲಿ ಅಂಥದ್ದೇನಿದೆ?ಪ್ರೀ ವೆಡ್ಡಿಂಗ್​ನ ಎರಡನೇ ದಿನದ ಸಂಭ್ರಮದ ಸಮಯದಲ್ಲಿ ಅನಂತ್​ ಅಂಬಾನಿ ಧರಿಸಿದ್ದ ವಾಚ್​, ಅಮೂಲ್ಯವಾದ ಹರಳುಗಳು, ವಜ್ರಗಳು ಮತ್ತು ಪಚ್ಚೆಗಳನ್ನು ಹೊಂದಿದೆ. 18 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ, ಅನಂತ್​ ಅಂಬಾನಿಗೆ ಇದು ದೊಡ್ಡ ಸಂಗತಿಯೇನಲ್ಲ. ಅನಂತ್​ ಅಂಬಾನಿಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ಈಗಾಗಲೇ ಅವರ ಬಳಿ ರೋಲ್ಸ್ ರಾಯ್ಸ್ ಫ್ಯಾಂಟಮ್, BMW i8, SUV Mercedes Benz G63 AMG, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಮತ್ತು ಇನ್ನೂ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಇನ್ನೂ ಮೂರು ದಿನಗಳ ಪ್ರೀ ವೆಡ್ಡಿಂಗ್​ ಸಂಭ್ರಮಕ್ಕೆ ಸುಮಾರು ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ. ಪಾಪ್ ಗಾಯಕಿ ರಿಹಾನ್ನಾ 75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಪ್ರೀ ವೆಡ್ಡಿಂಗ್​ಗೆ ಬಂದ ಅತಿಥಿಗಳಿಗೆ 2,500 ಬಗೆಯ ಖಾದ್ಯಗಳನ್ನು ಬಡಿಸಲಾಯಿತು ಎಂದೂ ಹೇಳಲಾಗಿದೆ. ಇದಲ್ಲದೆ, ಅನಂತ್ ಅಂಬಾನಿ ಅವರ ಪ್ರೀ ವೆಡ್ಡಿಂಗ್​ ಚಿತ್ರೀಕರಣಕ್ಕಾಗಿ ಮನೀಶ್ ಮಲ್ಹೋತ್ರಾ ಅವರು 50 ವಿಭಿನ್ನ ಬಟ್ಟೆಗಳನ್ನು ಡಿಸೈನ್​ ಮಾಡಿದರು ಎಂದು ತಿಳಿದುಬಂದಿದೆ. ಮತ್ತೊಂದೆಡೆ ರಾಧಿಕಾ ಮರ್ಚೆಂಟ್ ಅವರ ಉಡುಪು, ಚಿನ್ನಾಭರಣ ಸೇರಿದಂತೆ ಮತ್ತಿತರ ವಸ್ತುಗಳು ಸಹ ಕೋಟ್ಯಂತರ ರೂ. ಬೆಲೆ ಬಾಳುತ್ತವೆ.(ಏಜೆನ್ಸೀಸ್​)
ಡಾನ್ಸ್ ಮಾಡುವಾಗ ಎದೆ ಸೀಳು ಕಾಣಿಸದಂತೆ ಜಾಕೆಟ್​​ನಿಂದ ಮರೆಮಾಚಿಕೊಂಡ ರಾಧಿಕಾ; ಹೆಚ್ಚಾಯ್ತು ಅಭಿಮಾನಿಗಳ ಸಂಖ್ಯೆ

ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ಕುಣಿದು ಕುಪ್ಪಳಿಸಿದ ಸೆಲೆಬ್ರಿಟಿಗಳಿಗೆ ಟಾಂಗ್​ ಕೊಟ್ರಾ ಕಂಗನಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − 10 =
Remember me
