ತಿರುಪತಿ: ಅನಂತಪುರ ಜಿಲ್ಲೆಯ ಡಿಸ್ಟ್ರಿಕ್ಟ್​ ಮೆಡಿಕಲ್ ಆ್ಯಂಡ್ ಹೆಲ್ತ್ ಆಫೀಸರ್​ (ಡಿಎಂಎಚ್​ಒ) ದಾಹವೆಂದು ನೀರು ಕುಡಿಯುವ ಬದಲು ಸೋಂಕುನಿವಾರಕ ದ್ರವವನ್ನು ಕುಡಿದು ಆಸ್ಪತ್ರೆಗೆ ಸೇರಿದ ವಿಲಕ್ಷಣ ಘಟನೆಯೊಂದು ತಡವಾಗಿ ವರದಿಯಾಗಿದೆ.
ಈ ಘಟನೆ ಗುರುವಾರ ಸಂಜೆ ನಡೆದಿದ್ದು, ಆಸ್ಪತ್ರೆಗೆ ದಾಖಲಾದ ವೈದ್ಯಾಧಿಕಾರಿ ಹೆಸರು ಅನಿಲ್ ಕುಮಾರ್ ಎಂಬ ಅಂಶ ಬೆಳಕಿಗೆ ಬಂದಿದೆ. ಅವರು ಸಂಜೆ ವಿಪರೀತ ನೀರಡಿಕೆಯಾದ ಕಾರಣ ಅಲ್ಲಿದ್ದ ನೌಕರರ ಬಳಿ ನೀರು ತಂದುಕೊಡುವಂತೆ ಕೇಳಿದ್ದಾರೆ. ಅವರು ತಂದುಕೊಟ್ಟ ನೀರನ್ನು ಇವರು ಕಣ್ಮುಚ್ಚಿ ಕುಡಿದುಬಿಟ್ಟಿದ್ದಾರೆ. ಅದು ಗಂಟಲು ಪ್ರವೇಶಿಸುತ್ತಲೇ ಅಸಹಜವೆನಿಸುವ ರುಚಿ ಕಂಡು ಬೆಚ್ಚಿಬಿದ್ದು ಗಮನಿಸಿದರೆ ಫಾರ್ಮಾಲಿನ್ ಮಿಶ್ರಿತ ನೀರೆಂಬುದು ಮನದಟ್ಟಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅವರು ದಾಖಲಾಗಿದ್ದಾರೆ. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಜಿಲ್ಲಾಧಿಕಾರಿ ಗಂಧಂ ಚಂದ್ರುಡು, ಸ್ಥಳೀಯ ಶಾಸಕ ಎ ವೆಂಕಟರಾಮಿ ರೆಡ್ಡಿ ಮತ್ತು ಇತರೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ಧಾವಿಸಿದ್ದರು.
ನೌಕರರು ನೀರು ತರುವಾಗ ಆಗಿರುವ ಪ್ರಮಾದ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆದ ಅನಿಲ್​ ಅವರ ಜೀವಕ್ಕೇನೂ ಅಪಾಯವಿಲ್ಲ. ನೀರಿನಲ್ಲಿ ಅಲ್ಪ ಪ್ರಮಾಣದ ಫಾರ್ಮಾಲಿನ್ ಮಿಶ್ರವಾಗಿತ್ತಷ್ಟೇ. ಹಾಗಾಗಿ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)
https://www.vijayavani.net/unlucky-man-quarantined-three-times-in-a-row/
ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 2 =
Remember me
