– ರಾಜಕಾರಣಿಯಾಗಿ ಹುಟ್ಟಿಲ್ಲ ರಾಜಕಾರಣಿಯಾಗಿ ಸಾಯುವುದಿಲ್ಲ
– ಮೋದಿ ಪ್ರಚಾರ ಬಯಸದೇ ಸಾಕಷ್ಟು ಯೋಜನೆಗಳನ್ನು ಕೊಟ್ರು
ಕಾರವಾರ:ರಾಜಕಾರಣಿಯಾಗಿ ಹುಟ್ಟಿಲ್ಲ ರಾಜಕಾರಣಿಯಾಗಿ ಸಾಯುವುದಿಲ್ಲ. ಭಗವಂತ ಅವಕಾಶ ಕೊಟ್ಟಿದ್ದರಿಂದ ಅಲ್ಪಸ್ವಲ್ಪ ಕೆಲಸ ಮಾಡಿದ್ದೇನೆಂದು ಸಂಸದ  ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅಭಿವೃದ್ಧಿ ಎನ್ನುವುದು ಭಾಷಣದ ಚರ್ಚೆ ವಿಷಯವಾಗಿದೆ. ನಾವು ಅಷ್ಟು ಅನುದಾನ ತಂದೆವು ಇಷ್ಟು ಅನುದಾನ ತಂದೆವು ,ಅಷ್ಟು ಕಡಿದೆವು ಇಷ್ಟು ಕಡಿದು ರಾಶಿ ಹಾಕಿದೆವು ಅನ್ನೋದು ಭಾಷಣದಲ್ಲಿ ಚಂದ. ಮೋದಿಗೆ ಓಟು ಕೊಡುವರು ಧರ್ಮಕ್ಕೋಸ್ಕರ ಕೊಡುತ್ತಾರೆ. ಒಂದು ಸಾವಿರ ವರ್ಷದಿಂದ ನಮ್ಮ ಮೇಲೆ ಯಾರು ದಬ್ಬಾಳಿಕೆ ನಡೆಸುತ್ತಿದ್ರೋ ಅದಕ್ಕೆ ಪ್ರತಿಯಾಗಿ ರಾಮಮಂದಿರ ಕಟ್ಟಿ ನಿಲ್ಲಿಸಿದ್ದೇವೆ.  ಮೋದಿ ಪ್ರಚಾರ ಬಯಸದೇ ಸಾಕಷ್ಟು ಯೋಜನೆಗಳನ್ನು ಕೊಟ್ರು ಎಂದಿದ್ದಾರೆ.
ಹಿಂದುಳಿದವರಿಗೆ ಹಾಗೂ ಎಸ್ಸಿ- ಎಸ್ಟಿಗಳಿಗೆ ನೀಡಿದ‌ 11 ಸಾವಿರ ಕೋಟಿ ರೂ. ನಾಪತ್ತೆಯಾಗಿಬಿಟ್ಟಿದೆ.  ರಾಜ್ಯ ಸರ್ಕಾರ ದಿವಾಳಿಯಾಗಿಬಿಟ್ಟಿದ್ದು, ಸಿದ್ಧರಾಮಯ್ಯನ ಸರ್ಕಾರದ ತರ ಮೋದಿ ಸರ್ಕಾರ ದಿವಾಳಿ ಆಗಿಲ್ಲ.. ರಾಜ್ಯವನ್ನು ಲೂಟಿ ಹೊಡೆದು ದಿವಾಳಿ ಮಾಡಿ ಓಟು ತಗೋಬೇಕು ಎಂದು ಹೊರಟಿದ್ದಾರೆ. ಇಷ್ಟು ಹೇಸಿಗೆ ಸರ್ಕಾರ ನಾನೆಲ್ಲೂ ನೋಡಿಲ್ಲ.. ಇಷ್ಟು ದರಿದ್ರ ಸರ್ಕಾರ ನೋಡಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜಕಾರಣಿಯಾಗಿ ಹುಟ್ಟಿಲ್ಲ ರಾಜಕಾರಣಿಯಾಗಿ ಸಾಯುವುದಿಲ್ಲ. ಭಗವಂತ ಅವಕಾಶ ಕೊಟ್ಟಿದ್ದರಿಂದ ಅಲ್ಪಸ್ವಲ್ಪ ಕೆಲಸ ಮಾಡಿದ್ದೇನೆ. ಕಳೆದ ಎರಡು ಚುನಾವಣೆಯಲ್ಲೇ ಹೇಳಿದ್ದೆ ಬೇಡ ರಾಜಕಾರಣ ನಮ್ಮನ್ನು ಬಿಟ್ಟುಬಿಡಿ ಎಂದಿದ್ದೆ. ಆದರೆ ಸಂಘಟನೆಯವರು ಬಿಡವಲ್ಲರೂ ಮತ್ತೆ ಮತ್ತೆ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಮತ್ತೆ ಚುನಾವಣೆಗೆ ಹೋಗುವುದಿಲ್ಲ ಬೇಡ ನನಗೆ ಎಂದಿದ್ದೆ. ಮಂದಿ ಮುಂದೆ ಹೋದ್ರೆ ನಿಮಗೆ ಬೇರೆ ಕ್ಯಾಂಡಿಡೇಟ್ ಸಿಗೋದಿಲ್ಲ. ಮತ್ತೆ ನನಗೇ  ಕೊಡುತ್ತೀರಾ..ಹಾಗಾಗಿ ಮಂದಿ ಮುಂದೆ ನಾನು ಹೋಗಂಗಿಲ್ಲ ಎಂದಿದ್ದೆ. ಈ ಮಧ್ಯ ಕರೋನಾ ಬಂತು ನನ್ನ ಆರೋಗ್ಯ ಸಹ ತಪ್ಪಿತು.. ರೋಗಿ ಬಯಸಿದ್ದು ಹಾಲು ವೈದ್ಯ ಕೊಟ್ಟಿದ್ದು ಹಾಲು ಎನ್ನುವಂತಾಯಿತು.. ರಾಜಕಾರಣ ಬೇಡ ಎಂದು ಗಟ್ಟಿ ಮನಸ್ಸು ಮಾಡಿ ಕುಳಿತಿದ್ದೆ ಅದೇನೋ ಗೊತ್ತಿಲ್ಲ ವಾಪಾಸ್ ಯೂ ಟರ್ನ್ ಮಾಡಿ ಬರುತಿದ್ದೇನೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ನಾವು ಕೊಟ್ಟಿರೋ ಸಾವಿರಾರು ಕೋಟಿ ರೂ. ದುಡ್ಡಿಗೆ ಮೊದಲು ಲೆಕ್ಕಾ ಕೊಡಿ ಆಮೇಲೆ ಮುಂದಿನದ್ದು ಕೊಡ್ತೀವಿ. ಈ ದೇಶದಲ್ಲಿ ತೆರಿಗೆ ಕಟ್ಟುವವರು 99.‌9 ಶೇ. ಜನರು ಹಿಂದುಗಳು. ನಮ್ಮ ದುಡ್ಡು ತೆಗೆದುಕೊಂಡು ಹೋಗಿ ಮಸೀದಿಗೆ, ಚರ್ಚಿಗೆ ಯಾಕೆ ಕೊಟ್ರಿ…? ನಾವು ಕೇಳಬೇಕಾ ಬೇಡಾ ನಾಳೆ..? ನಮ್ಮ ತೆರಿಗೆ ಹಣ ನಮಗೆ ಕೊಡಿ . ನಮ್ಮ ದೇವಸ್ಥಾನಗಳು ಹಾಳು ಬಿದ್ದಿವೆ, ಅದಕ್ಕೆ ನೀಡಲು ರಾಜ್ಯ ಸರಕಾರದಲ್ಲಿ ದುಡ್ಡಿಲ್ಲ. ಆದರೆ, ಮಸೀದಿಗೆ ಕೊಡಲು ಸರಕಾರಲ್ಲಿ ದುಡ್ಡಿದೆ. ಮಸೀದಿಗೆ ಹಣ ಕೊಡ್ತೀರಾ, ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ದುಡ್ಡು ಕೊಡ್ತೀರಾ? ನಮ್ಮ ದೇವರು ಏನು ಅಪರಾದ ಮಾಡಿದ್ದಾನೆ..?ನಮ್ಮ ಹಿಂದುಗಳು ಕೊಟ್ಟಿರುವ ಟ್ಯಾಕ್ಸ್ ಹಣವಿದು ಎಂದಿದ್ದಾರೆ.
ನಾವು ಕೊಟ್ಟಿರೋ ತೆರಿಗೆ ಮೇಲೆ ಸರ್ಕಾರ ನಡೀತಿದೆ. ನಾವು ಹಿಂದುಗಳ ತೆರಿಗೆ ಹಿಂದುಗಳ ಹಕ್ಕು ಅಂತ ಕುಳಿತುಕೊಂಡರೇ ಪರಿಸ್ಥಿತಿ ಏನಾಗುತ್ತೆ? ನಾವು ಸಣ್ಣ ಬುದ್ಧಿ ಮಾಡುವುದಿಲ್ಲ. ದಯವಿಟ್ಟು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಮಾಡಿದ್ದು ಅಪಪ್ರಚಾರ ಮಾತ್ರ..ಪ್ರಚಾರ ಯಾವತ್ತೂ ಕಾಂಗ್ರೆಸ್ ಮಾಡಿಲ್ಲ. ಸ್ವಾತಂತ್ರ ಬಂದ ನಂತರ ಎಲ್ಲಾ ರಸ್ತೆಗಳು, ಸರ್ಕಲ್, ಯೋಜನೆಗಳಲ್ಲಿ ಗಾಂಧಿ ಹೆಸರುಗಳೇ .. ಅಪ್ಪ ಗಾಂಧಿ, ಮಗ ಗಾಂಧಿ, ಅಜ್ಜ ಗಾಂಧಿ, ಮೊಮ್ಮಗ ಗಾಂಧಿ ಎಲ್ಲಾ ಗಾಂಧಿ ಹೆಸರುಗಳೇ. ಮೋದಿಯವರು ಎಲ್ಲಿಯಾದರೂ ಒಂದು ಹೆಸರು ಇಟ್ಟುಕೊಂಡಿದ್ದಾರಾ..? ನಮಗೆ ಕೆಲಸ ಮಾಡುವುದು ಮಾತ್ರ ಬೇಕು ,ಅವರಿಗೆ ಹೆಸರು ಮಾತ್ರ ಬೇಕು. ಬ್ರಾಂಡ್ ಬ್ರಾಂಡ್ ನೋಡೇ ಓಟು ಹಾಕಬೇಕು. ಅಪಪ್ರಚಾರ ಮಾಡುತ್ತಾ ದೇಶವನ್ನು ಲೂಟಿ ಹೊಡೆದ ಕುಟುಂಬವನ್ನೇ ಎಲ್ಲಾ ಕಡೆ ಇಟ್ಟುಕೊಂಡು ತಿರುಗುತ್ತಾರಲ್ ಎಂದು ಕಿಡಿಕಾರಿದ್ದಾರೆ.
ಬಾಟಲಿ ಹಾಲು ಕುಡಿದುಕೊಂಡು ಇಷ್ಟೆಲ್ಲಾ ಕುಸ್ತಿಗೆ ಬರುವವರ ಎದುರು ಅಮ್ಮನ ಎದೆಹಾಲು ಕುಡಿದವರಿಗೆ ನಮಗೆ ಎಷ್ಟು ಧೈರ್ಯ ಇರಬಾರದು ಬಾಟಲಿ ಹಾಲು ಕುಡಿದುಕೊಂಡು ಇಷ್ಟೆಲ್ಲಾ ಗಲಾಟೆ ಮಾಡ್ತಾರೆ ಇವರು ಎಂದು ಪ್ರಶ್ನೆ ಮಾಡಿದ್ದಾರೆ.
ಚಪ್ಪಲಿ ಮಾರಿ ಕೋಟ್ಯಧಿಪತಿಯಾದ; ನೂರಾರು ಯುವಕರಿಗೆ ಸ್ಫೂರ್ತಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 × two =
Remember me
