ನವದೆಹಲಿ:ಏಷ್ಯಾದ ಶ್ರೀಮಂತ ಉದ್ಯಮಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೂರು ದಿನಗಳ ಅದ್ದೂರಿ ವಿವಾಹ ಮಹೋತ್ಸವಕ್ಕೆ ಇನ್ನೇನು ತೆರೆ ಬೀಳಲಿದೆ. ಆದರೆ ಕಾಲ್ಪನಿಕ ಕಥೆಯಂತೆ ನೆರವೇರಿದ ವಿವಾಹ ಮತ್ತು ಸಂಬಂಧಿತ ಕಾರ್ಯಕ್ರಮಗಳು ವಿಶ್ವದ ಗಮನ ಸೆಳೆದವು.
ಇದನ್ನೂ ಓದಿ:‘ಕಾಲ್ಪನಿಕ ದೃಶ್ಯ ಕಾವ್ಯ’ ಅನಂತ್ ಅಂಬಾನಿ – ರಾಧಿಕಾ ಮದುವೆ: ಭಾವೋದ್ವೇಗಕ್ಕೆ ಒಳಗಾದ ವಧು!
ಇದರಲ್ಲಿ ಕಿಮ್ ಕಾರ್ಡಶಿಯಾನ್, ಶಾರುಖ್ ಖಾನ್ ಮತ್ತು ಯುಕೆ ಮಾಜಿ ಪ್ರಧಾನಿಗಳಾದ ಟೋನಿ ಬ್ಲೇರ್ ಮತ್ತು ಬೋರಿಸ್ ಜಾನ್ಸನ್ ಸೇರಿದಂತೆ ಸ್ಟಾರ್-ಸ್ಟಡ್ ಅತಿಥಿಗಳ ದಂಡೇ ನೆರೆದಿತ್ತು.
ವಾರಣಾಸಿಯನ್ನು ಹೋಲುವ ವಿವಾಹ ಮಂಟಪದ ಮರುಸೃಷ್ಟಿ, ಭಾರತೀಯ ಸಾಂಪ್ರದಾಯಿಕ ಕಾರ್ಯಕ್ರಮಗಳು, ವಿಶ್ವ ನಾನಾ ರೀತಿಯ ಆಹಾರ, ಸಿಹಿತಿಂಡಿಗಳು ಮತ್ತು ಜಾಗತಿಕ ಪಾಕಪದ್ಧತಿಗಳೊಂದಿಗೆ ರಾಜಾತಿಥ್ಯ ಪ್ರದರ್ಶಿಸಿತು.
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡು ನವ ದಂಪತಿಗಳನ್ನು ಮನಃಪೂರ್ವಕವಾಗಿ ಆಶೀರ್ವದಿಸಿದರು. ಮದುವೆ ಸಮಾರಂಭಕ್ಕೆ ಬಂದ ಅತಿಥಿಗಳಿಗೆ ಅಂಬಾನಿ ಕುಟುಂಬ ರಾಜಾತಿಥ್ಯ ನೀಡಿದೆ. ರೆಡ್ ಕಾರ್ಪೆಟ್ ಹಾಸಿ ಅತಿಥಿಗಳನ್ನು ಆಹ್ವಾನಿಸಲಾಯಿತು. ವಿವಿಧ ಬಗೆಯ ತಿನಿಸುಗಳು, ಸಿಹಿತಿಂಡಿಗಳು, ಕೇಕ್ ಗಳನ್ನು ನೀಡಲಾಯಿತು.
ಸಾಂಪ್ರದಾಯಿಕ ಸಿಹಿಯಾದ ರಾಬ್ರಿ, ವಿವಿಧ ಲಸ್ಸಿಗಳು ಲಭ್ಯವಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಈ ತಿಂಡಿಗಳ ವೈವಿಧ್ಯತೆ ಗಮನಸೆಳೆಯುತ್ತಿದೆ. ಜಗತ್ತಿನ ಹೆಸರಾಂತ ಆಹಾರ ವೈವಿಧ್ಯಗಳನ್ನು ಅತಿಥಿಗಳಿಗೆ ನೀಡಲಾಯಿತು. ಊಟದ ಜೊತೆಗೆ ಕೇಕ್ ಅನ್ನು ಹಣ್ಣುಗಳೊಂದಿಗೆ ಬೆರೆಸಿ ಹಸ್ತಾಂತರಿಸಲಾಯಿತು. ವಿವಾಹ ಸಮಾರಂಭದ ಪ್ರದೇಶವು ವಾರಣಾಸಿ ನಗರವನ್ನು ಹೋಲುತ್ತಿತ್ತು.
ಅನಂತ್ – ರಾಧಿಕಾ ವಿವಾಹ ಇದೇ ಜು.12 ರಂದು ನಡೆಯಿತು. ಜು. 13 ರಂದು (ಶನಿವಾರ) ಶುಭ ಆಶೀರ್ವಾದ ಕಾರ್ಯಕ್ರಮ ನಡೆಯಿತು. ಜು.14 ರಂದು ಮಂಗಲೋತ್ಸವ ನಡೆಯಲಿದೆ. ಅಂಬಾನಿ ಕುಟುಂಬ ಆಹಾರ ಪದಾರ್ಥಗಳಿಗಾಗಿ 200 ಕೋಟಿ ರೂ.ವರೆಗೆ ಖರ್ಚು ಮಾಡಿದೆ ಎನ್ನಲಾಗುತ್ತಿದೆ.
ಏಮ್ಸ್‌ನಿಂದ ರಾಜನಾಥ್ ಸಿಂಗ್ ಡಿಸ್ಚಾರ್ಜ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 17 =
Remember me
