ನವದೆಹಲಿ:ನಿನ್ನೆಯಷ್ಟೇ ಇಬ್ಬರು ರಾಷ್ಟ್ರಮಟ್ಟದ ಪತ್ರಕರ್ತರನ್ನು ಕಳೆದುಕೊಂಡಿದ್ದ ಮಾಧ್ಯಮಜಗತ್ತಿಗೆ ಇಂದು ಮತ್ತೊಂದು ಸಾವಿನ ಸುದ್ದಿ ಬಂದೆರಗಿದೆ. ಖ್ಯಾತ ಟಿವಿ ನಿರೂಪಕಿ ಕನುಪ್ರಿಯಾ ಕೋವಿಡ್​-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ನಿನ್ನೆಯೇ ಕೊನೆಯಸಿರೆಳೆದಿದ್ದರೂ ಸಾವಿನ ಸುದ್ದಿ ಇಂದು ಹೊರಬಿದ್ದಿದೆ.
ಬ್ರಹ್ಮಕುಮಾರಿ ಬಿ.ಕೆ.ಶಿವಾನಿ ಅವರು ಟ್ವೀಟ್ ಮಾಡಿ ಈ ವಿಷಯವನ್ನು ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. ದೂರದರ್ಶನದ ಮೂಲಕ ನಿರೂಪಕಿಯಾಗಿ ವೃತ್ತಿಜೀವನಕ್ಕೆ ಪ್ರವೇಶಿಸಿದ್ದ ಕನುಪ್ರಿಯಾ ಬಳಿಕ ಇತರ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದರು. ಬ್ರಹ್ಮಕುಮಾರಿ ಸಿಸ್ಟರ್ ಆಗಿದ್ದ ಇವರು ‘ಅವೇಕನಿಂಗ್ ವಿದ್ ದ ಬ್ರಹ್ಮಕುಮಾರೀಸ್’ ಎಂಬ ಶೋ ನಡೆಸಿಕೊಡುತ್ತಿದ್ದರು.
ನಿರೂಪಕಿ ಮಾತ್ರವಲ್ಲದೆ, ನಟಿ, ನಿರ್ಮಾಪಕಿ ಆಗಿಯೂ ಅವರು ಗುರುತಿಸಿಕೊಂಡಿದ್ದರು. 80 ಧಾರಾವಾಹಿ, 50 ಕಿರುಚಿತ್ರಗಳಲ್ಲಿ ಅಭಿನಯಿಸಿದ್ದ ಕನುಪ್ರಿಯಾ ಆ ಮೂಲಕವೂ ಕನುಪ್ರಿಯಾ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.
ರಾಜ್ಯದಲ್ಲಿ ಸತತ ಮೂರೂ ದಿನ 200ಕ್ಕೂ ಅಧಿಕ ಕೋವಿಡ್ ಸಾವು!; ಇವತ್ತು ಹೊಸದಾಗಿ ದೃಢಪಟ್ಟ ಸೋಂಕಿನ ಪ್ರಮಾಣ 40,990

ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + five =
Remember me
