ಕೃಷ್ಣಾ ನೀರು ಹಂಚಿಕೆಯಲ್ಲಿ ಆಂಧ್ರಕ್ಕೆ ನ್ಯಾಯ ಒದಗಿಸಿ: ಪ್ರಧಾನಿ ಮೋದಿಗೆ ಪತ್ರ ಬರೆದ ಮುಖ್ಯಮಂತ್ರಿ ಜಗನ್​ನವದೆಹಲಿ: ಆಂಧ್ರ -ತೆಲಂಗಾಣ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೃಷ್ಣಾ ನ್ಯಾಯಧಿಕರಣ-2 ರಚನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದ ಬೆನ್ನಲ್ಲೇ ಆಂಧ್ರ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಪ್ರಧಾನಿ ಮೋದಿಯವರಿಗೆ ಶುಕ್ರವಾರ ಪತ್ರ ಬರೆದು ಕೃಷ್ಣಾ ನದಿ ನೀರಿನ ಮೇಲಿನ ಆಂಧ್ರ ಜನರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಐಎಸ್‌ಆರ್‌ಡಬ್ಲ್ಯುಡಿ ಕಾಯ್ದೆ 1956ರ ಸೆಕ್ಷನ್ 5(1)ರ ಅಡಿಯಲ್ಲಿ ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-II ಗೆ ನೀಡಿರುವ ಷರತ್ತುಗಳು ಏಕಪಕ್ಷೀಯವಾಗಿವೆ. ಉಭಯ ತೆಲುಗು ರಾಜ್ಯಗಳ ಜತೆಗೆ ನದಿ ನೀರಿನ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ನ್ಯಾಯಮಂಡಳಿ ವ್ಯಾಪ್ತಿಗೆ ತರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಜಾತಿ ಗಣತಿ ಸಹಾಯದಿಂದ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುತ್ತಾ? ರಾಜಕೀಯ ಬಿಸಿ ಏರಿಸಿದ ಪ್ರಿಯಾಂಕಾ ಛತ್ತೀಸ್‌ಗಢ ರ‍್ಯಾಲಿ
ಅಂತರರಾಜ್ಯ ನದಿ ಜಲ ವಿವಾದದ(ಐಎಸ್‌ಆರ್‌ಡಬ್ಲ್ಯೂಡಿ) ಕಾಯ್ದೆ 1956ರ ಸೆಕ್ಷನ್ 5(1)ರ ಅಡಿಯಲ್ಲಿ ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-II ಏಕಪಕ್ಷೀಯ ಉಲ್ಲೇಖವು ಆಂಧ್ರ ಪ್ರದೇಶದ ಜನರ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ. ಜಲಾನಯನ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕ ಸಹ ರಾಷ್ಟ್ರೀಯ ಆಸ್ತಿಯಾದ ಜಲಸಂಪನ್ಮೂಲಗಳನ್ನು ನ್ಯಾಯಬದ್ಧವಾಗಿ ಬಳಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಜಲಸಂಪನ್ಮೂಲಗಳ ಬಳಕೆಗೆ ವಿರುದ್ಧವಾಗಿರುವ ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು. ಆಂಧ್ರ ಜನರ ಆತಂಕ ದೂರಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ನೀರು ಹಂಚಿಕೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಕೃಷ್ಣಾ ನ್ಯಾಯಧಿಕರಣ ಕರ್ನಾಟಕ, ಮಹರಾಷ್ಟ್ರ, ಅವಿಭಜಿತ ಆಂಧ್ರಪ್ರದೇಶಕ್ಕೆ ನೀರು ಹಂಚಿಕೆ ಮಾಡಿ ಈ ಹಿಂದೆ ಆದೇಶ ಹೊರಡಿಸಿತ್ತು. ಆದರೆ ಆಂಧ್ರದಿಂದ ಹೊರ ಬಂದ ತೆಲಂಗಾಣ ನೀರು ಮರು ಹಂಚಿಕೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಪ್ರಕರಣ ವಿಚಾರಣೆ ವೇಳೆ ತೆಲಂಗಾಣ ಮನವಿಗೆ ಕರ್ನಾಟಕ-ಮಹಾರಾಷ್ಟ್ರ ವಿರೋಧ ವ್ಯಕ್ತಪಡಿಸಿದ್ದವು, ನಮ್ಮ ನೀರಿನ ಪ್ರಮಾಣದಲ್ಲಿ ಕಡಿಮೆ ಮಾಡುವಂತಿಲ್ಲ, ಅವಿಭಜಿತ ಆಂಧ್ರಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣದಲ್ಲಿ ತೆಲಂಗಾಣಕ್ಕೆ ಪಾಲು ನೀಡಬೇಕು ಎಂದು ಒತ್ತಾಯಿಸಿದ್ದವು, ಇದಕ್ಕೆ ತೆಲಂಗಾಣವೂ ಒಪ್ಪಿದ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ನಡುವೆ ನೀರು ಹಂಚಲು ನ್ಯಾಯಧಿಕರಣ ಸ್ಥಾಪಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಸುಪ್ರೀಂಕೋರ್ಟ್ ನಿರ್ದೇಶನ ಅನ್ವಯ ಅಂತರ-ರಾಜ್ಯ ನದಿ ನೀರಿನ ವಿವಾದಗಳ (ಐಎಸ್​ಆರ್​ ಡಬ್ಲ್ಯೂಡಿ ) ಕಾಯ್ದೆ, 1956ರ ಅಡಿಯಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-II ರಚನೆಗೆ ಕೇಂದ್ರ ಅನುಮೋದನೆ ನೀಡಿತ್ತು.
ಕೃಷ್ಣಾ ನ್ಯಾಯಧಿಕರಣ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.26 ಮೀಟರುಗಳಿಗೆ ಏರಿಸಲು ಅವಕಾಶ ನೀಡಿ ಕರ್ನಾಟಕಕ್ಕೆ 911 ಟಿಎಂಸಿ, ಮಹಾರಾಷ್ಟ್ರಕ್ಕೆ 666 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 1001 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶಿಸಿತ್ತು. ಕರ್ನಾಟಕಕ್ಕೆ ಎ ಸ್ಕೀಮಿನಲ್ಲಿ 734, ಬಿ ಸ್ಕೀಮಿನಲ್ಲಿ 177 ಟಿಎಂಸಿ ನೀರು, ಮಹಾರಾಷ್ಟ್ರಕ್ಕೆ ಬಿ. ಸ್ಕೀಮಿನಲ್ಲಿ 81 ಟಿಎಂಸಿ, ಆಂಧ್ರಕ್ಕೆ ಬಿ ಸ್ಕೀಮಿನಲ್ಲಿ 190 ಟಿಎಂಸಿ ನೀರು ನೀಡಿತ್ತು.
ಕರ್ನಾಟಕ ಹೆಚ್ಚುವರಿಯಾಗಿ 170 ಟಿಎಂಸಿ ನೀರು ಸಂಗ್ರಹಿಸಬಹುದು. ಪ್ರತಿ ವರ್ಷ ರಾಜ್ಯದಿಂದ ಆಂಧ್ರಕ್ಕೆ 8-10 ಟಿಎಂಸಿ ಹರಿಸಬೇಕು, ಕೃಷ್ಣಾ ಮೇಲ್ದಂಡೆ ಯೋಜನೆಗೆ 303 ಟಿಎಸಿ ನೀರು ಬಳಸಬಹುದು. ಈ ತೀರ್ಪು 2050ರವರೆಗೆ ಅನ್ವಯವಾಗುತ್ತದೆ ಎಂದು ಹೇಳಿತ್ತು. ಸದ್ಯ ಕರ್ನಾಟಕ ಮಹರಾಷ್ಟ್ರ ತಮ್ಮ ಪಾಲಿನ ನೀರಿನ ಬಳಕೆಗೆ ಗೆಜೆಟ್ ಹೊರಡಿಸಲು ನಿರ್ದೇಶಿಸುವಂತೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿವೆ.
ಇಡಿಯಿಂದ ಎಎಪಿ ಸಚಿವ ಸಂಜಯ್ ಸಿಂಗ್ ನಿಕಟವರ್ತಿ ವಿವೇಕ್ ತ್ಯಾಗಿ ವಿಚಾರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
