ನವದೆಹಲಿ:ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಸಹೋದರಿ ವೈಎಸ್​ಆರ್​ ತೆಲಂಗಾಣ ಪಕ್ಷದ ಸಂಸ್ಥಾಪಕಿ ಶರ್ಮಿಳಾ ಗುರುವಾರ ದೆಹಲಿಯಲ್ಲಿ ರಾಹುಲ್​ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸೇಪರ್ಡೆಯಾಗಿದ್ದಾರೆ.
ಶರ್ಮಿಳಾ ಅವರು ಬುಧವಾರ ಸಂಜೆ ರಾಷ್ಟ್ರ ರಾಜಧಾನಿ ದಹೆಲಿಗೆ ಆಗಮಿಸಿದ್ದರು. ಇದರೊಂದಿಗೆ ಅವರ ಕಾಂಗ್ರೆಸ್​ ಸೇರ್ಪಡೆ ಕುರಿತು ಹಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ.
It gives me immense joy that the YSR Telangana Party is going to be a part of the Indian National Congress from today onwards.
The Congress is still the largest secular party in our country and it has always upheld the true culture of India and built the foundation of our…pic.twitter.com/K5lkveK0ba
— Congress (@INCIndia)January 4, 2024

ಇತ್ತೀಚೆಗೆ ಮುಕ್ತಾಯಗೊಂಡ ತೆಲಂಗಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶರ್ಮಿಳಾ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುತ್ತಾರೆ ಅಥವಾ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುತ್ತಾರೆ ಎಂಬ ಊಹಾಪೋಹ ಇತ್ತು. ಈ ಬಗ್ಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ತಿಳಿಸಿದ್ದರು. ಅದರಂತೆ ಕಾಂಗ್ರೆಸ್​ ಪಕ್ಷದ ಶಾಲು ಹಾಕಿಸಿಕೊಂಡು ಅಧಿಕೃತವಾಗಿ ಸೇಪರ್ಡೆಯಾಗಿದ್ದಾರೆ.
ಆಂಧ್ರಪ್ರದೇಶ ಕಾಂಗ್ರೆಸ್​ ಜವಾಬ್ದಾರಿ ಶರ್ಮಿಳಾ ಹೆಗಲಿಗೆ :ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮರುಜೀವ ನೀಡುವ ಜವಾಬ್ದಾರಿಯನ್ನು ಆಕೆಗೆ ನೀಡಲಾಗುತ್ತಿದೆ ಎಂದು ವರದಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಅಣ್ಣ-ತಂಗಿ ನಡುವೆ ಜಂಗೀ ಕುಸ್ತಿ ಏರ್ಪಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಇದಲ್ಲದೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಸಾಧ್ಯತೆಯಿದೆ ಮತ್ತು ಕರ್ನಾಟಕದಿಂದ ರಾಜ್ಯಸಭಾ ನಾಮನಿರ್ದೇಶನವನ್ನು ಪಡೆಯಬಹುದು, ಈ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜತೆಗೆ ಮಾತುಕತೆ ನಡೆದಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
VIDEO | Y S Sharmila, founder of YSR Telangana Party, joins Congress in the presence of Mallikarjun Kharge and Rahul Gandhi in Delhi.pic.twitter.com/VMuNTtcF9K
— Press Trust of India (@PTI_News)January 4, 2024

3000 ಕಿ.ಮೀ ಪಾದಯಾತ್ರೆ ಮಾಡಿದ್ದ ಶರ್ಮಿಳಾ:ಶರ್ಮಿಳಾ ತಮ್ಮ ರಾಜಕೀಯ ಪಯಣ ಆರಂಭಿಸಿದ್ದು ಕಷ್ಟದ ಪರಿಸ್ಥಿತಿಯಲ್ಲಿ, ಮೇ 2012 ರಲ್ಲಿ ಜಗನ್ ಅವರನ್ನು ಸಿಬಿಐ ಬಂಧಿಸಿತ್ತು. ಜಗನ್ ಮೋಹನ್​ ರೆಡ್ಡಿ ಜೈಲಿಗೆ ಹೋದ ನಂತರ ಶರ್ಮಿಳಾ ತಾಯಿ ವಿಜಯಮ್ಮ ಜೊತೆಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರದ ಜವಾಬ್ದಾರಿ ವಹಿಸಿಕೊಂಡರು. ಈ ಅವಧಿಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯದ ಹೋರಾಟ ತೀವ್ರಗೊಂಡಿತ್ತು. ಈ ಸಂದರ್ಭದಲ್ಲೇ ಆಕೆಯ ಸಹೋದರ ಜಗನ್ ಕಾಂಗ್ರೆಸ್‌ನಿಂದ ಹೊರಬಂದು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸ್ಥಾಪಿಸಿದ್ದರು. ಅವರೊಂದಿಗೆ 18 ಶಾಸಕರು ಬಂದು ಸೇರಿಕೊಂಡಿದ್ದಲ್ಲದೆ, ಕಾಂಗ್ರೆಸ್ ಸಂಸದರೊಬ್ಬರು ರಾಜೀನಾಮೆಯನ್ನೂ ನೀಡಿದ್ದರು.
2012 ರ ಅಕ್ಟೋಬರ್‌ನಲ್ಲಿ ಕಡಪಾ ಜಿಲ್ಲೆಯ ಇಡುಪುಲಪಾಯದಿಂದ 3,000 ಕಿ.ಮೀ ಪಾದಯಾತ್ರೆ ಆರಂಭಿಸಿದ ಶರ್ಮಿಳಾ ಅದನ್ನು ಆಗಸ್ಟ್ 2013 ರಲ್ಲಿ ಇಚ್ಚಾಪುರದಲ್ಲಿ ಪೂರ್ಣಗೊಳಿಸಿದರು.
ಪ್ರತ್ಯೇಕ ತೆಲಂಗಾಣ ರಾಜ್ಯದ ಹೋರಾಟ ತೀವ್ರಗೊಂಡಿ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷದಿಂದ ಹೊರಬಂದು ಹಿರಿಯ ಸಹೋದರ ಜಗನ್ ಜೊತೆ ಸೇರಿ ವೈಎಸ್​ಆರ್​ಸಿಪಿ ಪಕ್ಷ ಸ್ಥಾಪಿಸಿದ್ದ ಶರ್ಮಿಳಾ ಮತ್ತೆ ಕಾಂಗ್ರೆಸ್​ ಪಕ್ಷ ಸೇರ್ಪಡೆಯಾಗಿ ತಮ್ಮ ಸಹೋದರನಿಗೆ ಸೆಡ್ಡು ಹೊಡೆಯಲು ಸಿದ್ಧವಾಗುತ್ತಾರೆ ಎಂದು ಹೇಳಲಾಗುತ್ತಿದೆ.
ಕೋರ್ಟ್​​​ ವಿಚಾರಣೆ ವೇಳೆ ನ್ಯಾಯಧೀಶೆ ಮೇಲೆ ದಾಳಿ ಮಾಡಿದ ಕೈದಿ; ವಿಡಿಯೋ ವೈರಲ್​​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + eight =
Remember me
