ಅಮರಾವತಿ:ಶಾಲಾ ಮಕ್ಕಳಿಗೆ ಮಧ್ಯಾಹ್ನದ ವೇಳೆ ಬಿಸಿಯೂಟ ವ್ಯವಸ್ಥೆ ಇದೆ. ಹಾಲು, ಅನ್ನ, ಸಾಂಬರ್ ನೀಡಲಾಗುತ್ತಿದೆ. ಆದರೆ ಇನ್ಮುಂದೆ ಆಂಧ್ರಪ್ರದೇಶದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ರಾಗಿ ಮಾಲ್ಟ್ ಕೂಡ ಸಿಗಲಿದೆ.
ಈಗಾಗಲೇ ಆಂಧ್ರದಲ್ಲಿ ವಿದ್ಯಾರ್ಥಿಗಳಿಗೆ ಬೇಯಿಸಿದ ಮೊಟ್ಟೆ, ಬೆಲ್ಲದಿಂದ ಮಾಡಿದ ಕಡ್ಲೆ ಮಿಠಾಯಿ ಸೇರಿದಂತೆ ಒಟ್ಟು 15 ರೀತಿಯ ಖಾದ್ಯಗಳನ್ನು ನೀಡಲಾಗುತ್ತಿದೆ. ಇದರ ಜತೆಗೆ ರಾಗಿ ಮಾಲ್ಟ್​​ ಕೂಡ ನೀಡಲಾಗುತ್ತಿದೆ.
“ಜಗನಣ್ಣ ಗೋರು ಮುದ್ದಾ ಯೋಜನೆ’ಯ ಅನ್ವಯ 44,392 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 37.6 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪ್ರಸ್ತುತ ನೀಡಲಾಗುವ ಆಹಾರದ ಜೊತೆಗೆ ಸುಮಾರು 86 ಕೋಟಿ ರೂ. ವೆಚ್ಚದಲ್ಲಿ ರಾಗಿ ಮಾಲ್ಟ್ ಕೂಡ ನೀಡುವುದಾಗಿ ಆಂಧ್ರ ಮುಖ್ಯಮಂತ್ರಿ ವೈ.ಎಸ್‌.ಜಗನ್​​ಮೋಹನ್​ ರೆಡ್ಡಿ ಘೋಷಿಸಿದ್ದಾರೆ.
ಇದನ್ನೂ ಓದಿ:ಬಿಸ್ಲೇರಿ ಖರೀದಿಗೆ ‘ಟಾಟಾ’ ಹೇಳಿದ ಟಿಸಿಪಿಎಲ್​; ಭವಿಷ್ಯ ಮಗಳ ಕೈಯಲ್ಲಿ“ಈ ಆಹಾರವು ಮಕ್ಕಳ ಬೆಳವಣಿಗೆಗೆ ಪೂರಕವಾದ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಒದಗಿಸಲಿದೆ. ಮಕ್ಕಳ ಊಟದ ಮೆನುವಿಗೆ ರಾಗಿ ಮಾಲ್ಟ್ ಸೇರಿಸುವುದರಿಂದ ವಾರ್ಷಿಕ ವೆಚ್ಚ ಈಗಿರುವ 1,824 ಕೋಟಿ ರೂ.ಗಳಿಂದ 1,910 ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ. ಈ ಹೆಚ್ಚುವರಿ 86 ಕೋಟಿ ರೂ. ವೆಚ್ಚದ ಪೈಕಿ 42 ಕೋಟಿ ರೂ.ಗಳನ್ನು ಸತ್ಯಸಾಯಿ ಸೆಂಟ್ರಲ್‌ ಟ್ರಸ್ಟ್‌ ಒದಗಿಸಲಿದೆ’ ಎಂದು ಸಿಎಂ ಜಗನ್‌ ಹೇಳಿದ್ದಾರೆ.
BJP ಇರುವವರೆಗೂ ಬಡವರು,ರೈತರು ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ; ಉಮಾಶ್ರೀ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
