| ರಾಘವ ಶರ್ಮನಿಡ್ಲೆ, ನವದೆಹಲಿ
ವೈಎಸ್​ಆರ್​ಸಿಪಿ ಪಕ್ಷದ ಮುಖಂಡ, ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಮತ್ತು ನ್ಯಾಯಾಂಗ ನಡುವಿನ ಸಮರ ತಾರಕಕ್ಕೇರಿರುವ ಮಧ್ಯೆ, ಸುಪ್ರೀಂಕೋರ್ಟ್​ನ 2ನೇ ಹಿರಿಯ ನ್ಯಾಯಮೂರ್ತಿ ಎನ್.ವಿ. ರಮಣ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನಿಲುವು ಏನಾಗಿರಲಿದೆ ಎಂಬ ಕುರಿತು ಕಾನೂನುವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಮುಖ್ಯಮಂತ್ರಿ ಮತ್ತು ನ್ಯಾಯಮೂರ್ತಿ ಎರಡೂ ಸಾಂವಿಧಾನಿಕ ಹುದ್ದೆಗಳು. ನ್ಯಾ.ಎನ್.ವಿ. ರಮಣ ಆಂಧ್ರಪ್ರದೇಶ ಹೈಕೋರ್ಟ್ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪವನ್ನು ವಿಚಾರಣೆಯಿಲ್ಲದೆ ತಳ್ಳಿಹಾಕá-ವಂತೆಯೂ ಇಲ್ಲ. ಏಕೆಂದರೆ, ಯಾರೋ ಸಾಮಾನ್ಯ ಆರೋಪ ಮಾಡಿದರೆ, ಸುಪ್ರೀಂಕೋರ್ಟ್ ಅದಕ್ಕೆಲ್ಲಾ ಲಕ್ಷ್ಯ ಕೊಡುವುದಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೇ ಮತ್ತೋರ್ವ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಮೇಲೆ ಗಂಭೀರ ಆಪಾದನೆ ಮಾಡಿದ್ದಾರೆ. ಹೀಗಾಗಿಯೇ, ಸುಪ್ರೀಂಕೋರ್ಟ್ ಸಿಜೆಐ ಈ ಬಗ್ಗೆ ಕಾನೂನಾತ್ಮಕವಾಗಿ ಸಮರ್ಥ ಎನಿಸುವ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕಾನೂನು ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ. ಅದಲ್ಲದೆ, ಹಾಲಿ ಸಿಜೆಐ ನಿವೃತ್ತಿಯಾದ ಬಳಿಕ (ಏಪ್ರಿಲ್, 2021) ನ್ಯಾ.ಎನ್.ವಿ. ರಮಣ ಅವರೇ ಮುಖ್ಯ ನ್ಯಾಯಮೂರ್ತಿಯಾಗಲಿರುವುದರಿಂದ ಸಾರ್ವಜನಿಕರಲ್ಲಿ ಅವರ ಬಗ್ಗೆ ಯಾವುದೇ ಸಂಶಯ ಉಳಿದುಕೊಳ್ಳಬಾರದು ಎಂಬುದನ್ನೂ ಪರಿಗಣಿಸಬೇಕಾಗುತ್ತದೆ. ಕೋಟಿಗಟ್ಟಲೆ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಸಿಬಿಐ, ಜಾರಿ ನಿರ್ದೇಶನಾಲಯದಿಂದ (ಇ.ಡಿ.) ತನಿಖೆ ಎದುರಿಸುತ್ತಿರುವ ಜಗನ್, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೇಲೆ ಮಾಡಿರುವ ಆರೋಪಗಳಲ್ಲಿ ಸತ್ಯಾಂಶ ಇದೆಯೋ ಇಲ್ಲವೋ? ಅಥವಾ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲೆಂದು ಹೀಗೆ ಮಾಡಿದರೋ ಎಂಬುದೆಲ್ಲಾ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಏತನ್ಮಧ್ಯೆ, ಜಗನ್ ನ್ಯಾಯಾಂಗದ ಘನತೆಗೆ ಹಾನಿ ಮಾಡಿದ್ದಾರೆಂದು ಸುಪ್ರೀಂಕೋರ್ಟ್​ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಜನಪ್ರತಿನಿಧಿಗಳ ಕ್ರಿಮಿನಲ್ ಕೇಸ್:ಮಾಜಿ ಹಾಗೂ ಹಾಲಿ ಜನಪ್ರತಿನಿಧಿ ಗಳ ವಿರುದ್ಧದ ಕ್ರಿಮಿನಲ್ ಕೇಸುಗಳ ತ್ವರಿತಗತಿ ವಿಚಾರಣೆ ಸಂಬಂಧ ಸೆ.16ರಂದು ನ್ಯಾ.ಎನ್.ವಿ. ರಮಣ ನೇತೃತ್ವದ ಪೀಠ ಮಹತ್ವದ ಆದೇಶ ಪ್ರಕಟಿಸಿತ್ತು. ಕ್ರಿಮಿನಲ್ ಕೇಸುಗಳ ವಿಚಾರಣೆಗೆ ಅಗತ್ಯವಿರುವ ವಿಶೇಷ ಕೋರ್ಟ್​ಗಳ ರಚನೆ, ಪ್ರತಿ ಜಿಲ್ಲೆಯಲ್ಲೂ ಬಾಕಿ ಇರುವ ಒಟ್ಟು ಕೇಸು, ನ್ಯಾಯಾಧೀಶರ ಸಂಖ್ಯೆ ಮತ್ತು ಕೇಸುಗಳ ವಿಂಗಡಣೆ, ಪ್ರತಿ ಜಡ್ಜ್​ಗೆ ಹಂಚಿಕೆ ಮಾಡಿರುವ ಕೇಸುಗಳ ಪಟ್ಟಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ದೇಶದ ಎಲ್ಲಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಆದೇಶ ನೀಡಿದ್ದರು. ಅದಲ್ಲದೆ, ಕ್ರಿಮಿನಲ್ ಕೇಸ್​ಗಳಲ್ಲಿ ದೋಷಿಯಾಗುವ ರಾಜಕಾರಣಿಗಳಿಗೆ ಚುನಾವಣೆ ಸ್ಪರ್ಧೆಯಿಂದ ಶಾಶ್ವತ ನಿಷೇಧ ಹೇರುವ ಅರ್ಜಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಅಭಿಪ್ರಾಯವನ್ನೂ ಈ ನ್ಯಾಯಪೀಠ ಕೇಳಿದೆ. ಈ ಆದೇಶ ಹೊರಬಿದ್ದ ಕೆಲವೇ ದಿನಗಳಲ್ಲಿ ಜಗನ್ ಸಿಜೆಐಗೆ ಪತ್ರ ಬರೆದಿರುವುದು ಗಮನಾರ್ಹ.ಇದನ್ನೂ ಓದಿ:ಎಬಿ ಡಿವಿಲಿಯರ್ಸ್‌ ಅತಿಮಾನುಷ ಕ್ರಿಕೆಟಿಗ ಎಂದು ಹೊಗಳಿದ ವಿರಾಟ್ ಕೊಹ್ಲಿ
ಸಾಮಾನ್ಯವಾಗಿ ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಾಗ ಸಿಜೆಐ ಅವರು ಅದನ್ನು ಕೊಲಿ ಜಿಯಂ (ಹಿರಿಯ ನ್ಯಾಯಮೂರ್ತಿಗಳ ಗುಂಪು) ಮುಂದಿಡುತ್ತಾರೆ. ಈ ಪ್ರಕರಣದಲ್ಲೂ, ಜಗನ್ ದೂರಿನ ಪತ್ರವನ್ನು ಕೊಲಿಜಿಯಂ ಮುಂದಿಟ್ಟು, ಈ ಬಗ್ಗೆ ನಾವೇನು ಮಾಡಬೇಕು ಎಂದು ಸದಸ್ಯ ನ್ಯಾಯಮೂರ್ತಿಗಳಿಂದ ಸಿಜೆಐ ಅಭಿಪ್ರಾಯ ಪಡೆದು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಬಹುದು.
ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳ ಕಾರ್ಯನಿರ್ವಹಣೆ ಬಗ್ಗೆ ಮುಖ್ಯನ್ಯಾಯಮೂರ್ತಿಗಳಿಗೆ ದೂರು ಸಲ್ಲಿಸಿದರೆ ಅದನ್ನು ಪರಿಗಣಿಸಿ ಕ್ರಮ ಕೈಗೊಳ್ಳಲು ಆಂತರಿಕ ವ್ಯವಸ್ಥೆ ಇದೆ. ಆ ಪ್ರಕಾರ ಸಿಜೆಐಗೆ ಸಾಕಷ್ಟು ವಿವೇಚನೆ ಹಾಗೂ ಅಧಿಕಾರ ದತ್ತವಾಗಿರುತ್ತದೆ. ದೂರು ಕ್ಷುಲ್ಲಕವಾದದ್ದು ಅಥವಾ ಅದರಲ್ಲಿ ಯಾವುದೇ ಹುರುಳಿಲ್ಲ ಅಂತಾದರೆ ಆ ಮಟ್ಟದಲ್ಲೇ ದೂರು ಸಮಾಪ್ತಿಗೊಳ್ಳುತ್ತದೆ. ದೂರಿನಲ್ಲಿ ವಿಚಾರಣಾರ್ಹ ಸಂಗತಿ ಇದೆ ಎಂದು ಸಿಜೆಐ ಅಭಿಪ್ರಾಯಪಟ್ಟ ಸಂದರ್ಭದಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳ ಸಮಿತಿಯೊಂದಕ್ಕೆ ವಿಚಾರಣೆಗಾಗಿ ಒಪ್ಪಿಸಲಾಗುತ್ತದೆ. ಸಮಿತಿಯ ವರದಿಯನ್ನು ಆಧರಿಸಿ ಸಿಜೆಐ ಮುಂದಿನ ಕ್ರಮ ಕೈಗೊಳ್ಳಬೇಕು. ಹೀಗೆ ಆಂತರಿಕ ವ್ಯವಸ್ಥೆಯಲ್ಲದೇ ಇರುವ ಮತ್ತೊಂದು ಮಾರ್ಗ ಸಂಸತ್ತಿನಲ್ಲಿ ದೋಷಾರೋಪಣೆಯ ಪ್ರಕ್ರಿಯೆ ನಡೆಸುವುದು. ಅದು ಕಷ್ಟಸಾಧ್ಯವಾದದ್ದು. ಇತಿಹಾಸದಲ್ಲೇ ಯಾವುದೇ ಒಬ್ಬ ನ್ಯಾಯಾಧೀಶರನ್ನೂ ಸಂಸತ್ತಿನಲ್ಲಿ ಕಲಾಪ ನಡೆಸಿ ವಜಾಗೊಳಿಸಲಾಗಿಲ್ಲ. ಪ್ರಸಕ್ತ ದೂರಿನ ಜತೆಗೆ ಕೆಲವು ಸಾಕ್ಷ್ಯಾಧಾರಗಳನ್ನೂ ಕೊಡಲಾಗಿದೆ. ಆಂತರಿಕ ವ್ಯವಸ್ಥೆ ಸಕ್ರಿಯಗೊಳಿಸಲು ಕ್ರಮ ಜರುಗಿಸುವುದು ಸೂಕ್ತ
| ರಾಘವೇಂದ್ರ ಎಸ್. ಶ್ರೀವತ್ಸ, ಸುಪ್ರೀಂಕೋರ್ಟ್ ವಕೀಲರು
ನ್ಯಾಯಾಧೀಶರು ಮತ್ತು ಪ್ರಕರಣಗಳ ಫಲಿತಾಂಶಗಳ ಮೇಲೆ ಮಾಧ್ಯಮಗಳು ಪ್ರಭಾವ ಬೀರುವುದು ನ್ಯಾಯಾಂಗ ನಿಂದನೆಗೆ ಸಮ. ಹೀಗಾಗಿ ಸವೋನ್ನತ ನ್ಯಾಯಾಲಯ ಮಧ್ಯಪ್ರವೇಶಿಸಿ ಮಾಧ್ಯಮದ ಪಾತ್ರವನ್ನು ಪರಿಶೀಲಿಸುವುದು ಅಗತ್ಯ ಎಂದು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮಂಗಳವಾರ ಮನವಿ ಮಾಡಿದರು.
ನ್ಯಾಯಾಂಗದ ವಿಷಯದಲ್ಲಿ ಮಾಧ್ಯಮಗಳ ಪ್ರವೃತ್ತಿ ಅಪಾಯಕಾರಿ ಮಟ್ಟಮುಟ್ಟಿದೆ. ಮನಸ್ಸಿಗೆ ತೋಚಿದಂತೆ ಬೇಕಾಬಿಟ್ಟಿ ಟಿಪ್ಪಣಿ ಮಾಡುತ್ತಿವೆ ಎಂದ ವೇಣುಗೋಪಾಲ್, ಆರೋಪಿಯೊಬ್ಬರ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ, ಟಿವಿ ವಾಹಿನಿಯೊಂದು ಆರೋಪಿಯ ತೇಜೋವಧೆಯಾಗುವಂಥ ಸಂವಾದ ಬಿತ್ತರಿಸಿತ್ತು ಎಂದು ಉದಾಹರಿಸಿದರು. ಅದೇ ರೀತಿ, ಸುಪ್ರೀಂಕೋರ್ಟ್​ನಲ್ಲಿ ರಫೇಲ್ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ಪತ್ರಿಕೆಯೊಂದು ದೊಡ್ಡ ಲೇಖನ ಪ್ರಕಟಿಸಿತ್ತು ಎಂದರು. ಯಾವ ರೀತಿಯ ಮಾತು ಮತ್ತು ಪ್ರಕಟಣೆಗಳಿಂದ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ನಿರ್ಧರಿಸುವಾಗ ಕೋರ್ಟ್ ಇಂಥ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಕೋರಿದರು. ಹಿರಿಯ ವಕೀಲ ಪ್ರಶಾಂತ್ ಭೂಷಣ್​ರ ವಿರುದ್ಧ 2009ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕೋರ್ಟ್​ಗೆ ಸಹಾಯಕರಾಗಿ (ಅಮಿಕಸ್ ಕ್ಯೂರಿ) ವೇಣುಗೋಪಾಲ್ ಕಾರ್ಯ ನಿರ್ವಹಿಸುತ್ತಿದ್ದಾರೆ. ತರುಣ್ ತೇಜ್​ಪಾಲ್ ಸಂಪಾದಕರಾಗಿದ್ದ ‘ತೆಹಲ್ಕಾ’ದಲ್ಲಿ ನ್ಯಾಯಾಂಗದ ಬಗ್ಗೆ ಭೂಷಣ್ ಮಾಡಿದ್ದ ಟೀಕೆಗೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ.
ಈ ಬಾರಿ ಮೇಡ್​ ಇನ್​ ಇಂಡಿಯಾ ದೀಪಾವಳಿ- ಇಲ್ಲೇ ಸಿಗ್ತಿದೆ ಚೀನಾಗಿಂತಲೂ ಅಗ್ಗದ ಸಾಮಗ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 14 =
Remember me
