ಗುಂಟೂರು:ಕೋವಿಡ್​ 19 ಸೋಂಕು ಹರಡದಂತೆ ತಡೆಯಲು ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಿಸಿದೆ. ಲಾಕ್​ಡೌನ್​ ಅವಧಿಯಲ್ಲಿ ಜನರು ಅನಗತ್ಯವಾಗಿ ತಿರುಗದಂತೆ ತಡೆಯಲು ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೀಗೆ ಕರ್ತವ್ಯದ ಒತ್ತಡದ ನಡುವೆಯೂ ಪೊಲೀಸ್​ ಅಧಿಕಾರಿಯೊಬ್ಬರು ತಮ್ಮ ಧಾರ್ಮಿಕ ನಂಬಿಕೆಯಂತೆ ರಸ್ತೆಯಲ್ಲೇ ನಮಾಜ್​ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಗುಂಟೂರಿನ ಲಾಲಾಪೇಟ್​ ಪೊಲೀಸ್​ ಠಾಣೆಯಲ್ಲಿ ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ಆಗಿರುವ ಕರೀಮುಲ್ಲಾ ನಮಾಜ್​ ಮಾಡಿದವರು.
ಇದು ರಂಜಾನ್​ ಮಾಸವಾಗಿದ್ದು, ಅವರು ಕರ್ತವ್ಯದ ನಡುವೆಯೂ ಬೆಳಗ್ಗೆಯಿಂದ ಉಪವಾಸ ಮಾಡಿದ್ದರು. ಸಂಜೆಯಾಗುತ್ತಲೇ ಅವರು ರಸ್ತೆಯ ನಡುವೆ ನಮಾಜ್​ ಮಾಡಲು ಮುಂದಾದರೆ, ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಇತರೆ ಧರ್ಮದ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರ ನಮಾಜ್​ಗೆ ಅಡ್ಡಿಯಾಗದಂತೆ ಎಚ್ಚರವಹಿಸಿದರು.
ಆಂಧ್ರ ಗಡಿಯಲ್ಲಿ ಗೋಡೆ ನಿರ್ಮಾಣ: ಅಂತಾರಾಜ್ಯ ವಾಹನ ಸಂಚಾರ ತಡೆಯಲು ತಮಿಳುನಾಡು ಸರ್ಕಾರದ ಕ್ರಮ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:fifteen − 3 =
Remember me
