ಕೇಂದ್ರ ಸರ್ಕಾರ ನಿನ್ನೆಯಷ್ಟೇ ಪಬ್​​ಜಿ ಸೇರಿ ಚೀನಾದ 118 ಆ್ಯಪ್​​ಗಳನ್ನು ನಿಷೇಧಿಸಿದೆ. ದೇಶದ ಸಾರ್ವಭೌಮತ್ವ, ಸುರಕ್ಷತೆ, ಸಮಗ್ರತೆ ದೃಷ್ಟಿಯಿಂದ ಬ್ಯಾನ್​ ಮಾಡಿದ್ದಾಗಿ ಹೇಳಿದೆ.
ಈ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಆನ್​ಲೈನ್​ ರಮ್ಮಿ, ಪೋಕರ್​ ಆಟಗಳನ್ನೂ ನಿಷೇಧಿಸಲು ನಿರ್ಧಾರ ಮಾಡಿದೆ. ಯುವಜನತೆಯ ಹಿತದೃಷ್ಟಿಯಿಂದ ಆನ್​​ಲೈನ್​ ರಮ್ಮಿ, ಪೋಕರ್ ಆಟಗಳನ್ನೂ ಬ್ಯಾನ್​ ಮಾಡುತ್ತಿರುವುದಾಗಿ ಹೇಳಿದೆ.ಇದನ್ನೂ ಓದಿ:ಫಾಸ್ಟ್​ಫುಡ್​ ಮಳಿಗೆ ಹೊರಗೆ ಲ್ಯಾಪ್​ಟಾಪ್​ ಹಿಡಿದು ಕುಳಿತಿದ್ದ ಬಾಲೆಯರಿಗೆ ಹರಿದು ಬಂತು ಒಂದು ಕೋಟಿ ರೂ. ನೆರವು..! ಏಕೆ ಗೊತ್ತೆ?
ಇಂದು ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಮ್ಮಿ, ಪೋಕರ್​ ನಿಷೇಧ ತೀರ್ಮಾನ ಕೈಗೊಳ್ಳಲಾಗಿದೆ.  ಕ್ಯಾಬಿನೆಟ್ ಮೀಟಿಂಗ್​ ನಂತರ ಸಚಿವ ಪೆರ್ನಿ ವೆಂಕಟರಾಮಯ್ಯನವರು ಈ ವಿಚಾರವನ್ನು ತಿಳಿಸಿದ್ದಾರೆ. ಆನ್​ಲೈನ್ ಜೂಜಾಟ ಯುವಕರ ದಾರಿ ತಪ್ಪಿಸುತ್ತದೆ. ಹಾಗಾಗಿ ಆನ್​​ಲೈನ್​ನಲ್ಲಿ ಇರುವ ಎಲ್ಲ ರೀತಿಯ ಜೂಜಾಟವನ್ನೂ ರಾಜ್ಯದಲ್ಲಿ ನಿಷೇಧಿಸುತ್ತೇವೆ ಎಂದು ಹೇಳಿದ್ದಾರೆ.
ನಿಷೇಧವಾದ ಮೇಲೆ ಕೂಡ ಈ ಜೂಜಾಟಗಳ ಸಂಘಟಕರು ಮುಂದುವರಿಸಲು ಪ್ರಯತ್ನಿಸಿ ಸಿಕ್ಕಿಬಿದ್ದರೆ, ಅವರಿಗೆ ಎರಡು ವರ್ಷ ಜೈಲು ಶಿಕ್ಷೆ, ದಂಡ ವಿಧಿಸಲಾಗುವುದು. ಹಾಗೇ, ಯಾರಾದರೂ ಮೊಬೈಲ್​​ನಲ್ಲಿ ಇಟ್ಟುಕೊಂಡು ಆಟ ಮುಂದುವರಿಸಿದರೆ ಅಂಥವರಿಗೆ ಆರು ತಿಂಗಳು ಶಿಕ್ಷೆ ಕಟ್ಟಿಟ್ಟಬುತ್ತಿ ಎಂದೂ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)
ಕೇಂದ್ರ ಸರ್ಕಾರದಿಂದ ಚೀನಾಗೆ ಮತ್ತೊಂದು ಶಾಕ್​: ಪಬ್​ಜಿ ಸೇರಿ 118 ಆ್ಯಪ್​ ಬ್ಯಾನ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 12 =
Remember me
