ವಿಜಯವಾಡ:ವಿಚ್ಛೇದನ ನೀಡುವಂತೆ ಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಅತ್ತೆಯನ್ನು ಅಳಿಯನೊಬ್ಬ ಸಾರ್ವಜನಿಕವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ನಾಗಮಣಿ(47) ಎಂದು ಗುರುತಿಸಲಾಗಿದ್ದು, ರಾಜೇಶ್(37) ಎಂಬಾತನೇ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಈಗಾಗಲೇ ರಾಜೇಶ್​ ಹಾಗೂ ಆತನ ಪತ್ನಿಯ ವಿಚ್ಛೇದನದ ಅರ್ಜಿಯು ನ್ಯಾಯಾಲಯದ ಮುಂದೆ ಬಾಕಿ ಇದೆ. ಆದರೆ ಪತ್ನಿಯಿಂದ ದೂರವಾಗಲು ಆಕೆಯ ಕುಟುಂಬಸ್ಥರೇ ಕಾರಣವೆಂದು ಆತ ಭಾವಿಸಿದ್ದ.ಇದನ್ನೂ ಓದಿ:ಹಿಜಾಬ್​ಗೆ ಆಕ್ಷೇಪ: ಪ್ರಾಂಶುಪಾಲರು ಸೇರಿ ಮೂವರು ಶಿಕ್ಷಕರ ವಿರುದ್ಧ ದೂರು ದಾಖಲುಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಚನುಮೋಲು ವೆಂಕಟರಾವ್ ಮೇಲ್ಸೇತುವೆ ಬಳಿ ಆರೋಪಿಯು ತೆಂಗಿನಕಾಯಿ ಕತ್ತರಿಸಲು ಬಳಸುವ ಕುಡುಗೋಲಿನಿಂದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.ಈ ಕುರಿತು ಮಾತನಾಡಿರುವ ಪೋಲೀಸರು, ರಾಜೇಶ್ ತನ್ನ ಮಗಳಿಗೆ ವಿಚ್ಛೇದನ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಿದ ಆರೋಪದ ಮೇಲೆ ನಾಗಮಣಿ ವಿರುದ್ಧ ದ್ವೇಷವನ್ನು ಹೊಂದಿದ್ದ. ಈ ಹಿನ್ನೆಲೆಯಲ್ಲಿ ಆತ ರೊಚ್ಚಿಗೆದ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 13 =
Remember me
