ಚಿತ್ತೂರು:ಆಂಧ್ರಪ್ರದೇಶದ ಶ್ರೀಕಾಲಹಸ್ತಿ ಶಾಸಕ ಬಿ.ಮಧುಸುಧೂನ್​ ರೆಡ್ಡಿ ಅವರು ಸದ್ಯ ಸಾರ್ವಜನಿಕವಾಗಿ ಬಟ್ಟೆಗಳನ್ನು ತೊಳೆದು, ಇಸ್ತ್ರಿ ಮಾಡಿ ಸುದ್ದಿಯಾಗಿದ್ದಾರೆ.
ಚಿತ್ತೂರಿನ ಅಗಸರ ಒಕ್ಕೂಟದಿಂದ ಶಾಸಕ ಮಧುಸೂಧನ್​ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಸನ್ಮಾನಿತರಾದ ಶಾಸಕರು ನಂತರ ಒಂದಷ್ಟು ಬಟ್ಟೆಗಳನ್ನು ಕೈಯಿಂದಲೇ ತೊಳೆದು, ಅವಕ್ಕೆಲ್ಲ ಇಸ್ತ್ರಿ ಮಾಡಿದ್ದಾರೆ.ಇದನ್ನೂ ಓದಿ:VIDEO| ಕರೊನಾಗೆ ಹೆದರಬೇಡಿ: ಪೊಲೀಸರಿಗೆ ಯೋಗ ಟೀಚರ್ ಆಗಿ ಧೈರ್ಯ ತುಂಬಿದ ಅಲೋಕ್​ ಕುಮಾರ್​!
ಜೂನ್ 10ರಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಮುಖ್ಯಮಂತ್ರಿ ವೈ.ಎಸ್​.ಜಗನ್​ ಮೋಹನ್​ ರೆಡ್ಡಿ ಅವರು ‘ಜಗನ್ನಣ್ಣ ಚೆಡೋಡು’ ಎಂಬ ಯೋಜನೆಯೊಂದನ್ನು ಉದ್ಘಾಟನೆ ಮಾಡಿದ್ದಾರೆ. ಈ ಯೋಜನೆಯಡಿ ಲಾಕ್​ಡೌನ್​ ಅವಧಿಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾದ ಟೇಲರ್​ಗಳು, ಕ್ಷೌರಿಕರು, ಅಗಸರಿಗೆ ತಲಾ 10,000 ರೂ.ನೆರವು ಕೊಡುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಮಧುಸೂಧನ್​ ಅವರೂ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಕ್ಷೇತ್ರದ ಅಗಸರ ಒಕ್ಕೂಟ ಸನ್ಮಾನ ಮಾಡಿದೆ.
ಜಗನ್ನಣ್ಣ ಚೆಡೋಡು ಯೋಜನೆಗೆ ಒಟ್ಟು 247 ಕೋಟಿ ರೂ.ಮೀಸಲಿಡಲಾಗಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ 10,000ರೂ.ಬರುತ್ತದೆ. (ಏಜೆನ್ಸೀಸ್​)
ಜೆಸಿಬಿ ಮಶಿನ್​ ಹೊತ್ತ ಟ್ರಕ್​ ಸಾಗುತ್ತಿತ್ತು…ಸೇತುವೆ ಕುಸಿದುಬಿತ್ತು; ಭಯಾನಕ ದೃಶ್ಯ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + thirteen =
Remember me
